ಗೋಕಾಕ:ಸ್ವಚ್ಚ ಸರ್ವೇಕ್ಷಣ ಅಡಿ ಸ್ವಚ್ಛ ಶಾಲೆಗಳ ಆಯ್ಕೆ : ಮಯೂರ ಸ್ಕೂಲ್ ಗೆ ಪ್ರಥಮ ಸ್ಥಾನ
ಸ್ವಚ್ಚ ಸರ್ವೇಕ್ಷಣ ಅಡಿ ಸ್ವಚ್ಛ ಶಾಲೆಗಳ ಆಯ್ಕೆ : ಮಯೂರ ಸ್ಕೂಲ್ ಗೆ ಪ್ರಥಮ ಸ್ಥಾನ
ಗೋಕಾಕ ಜ 12: ಸ್ವಚ್ಚ ಸರ್ವೇಕ್ಷಣ 2018 ರ ಮಾರ್ಗಸೂಚಿಯನ್ವಯ ನಗರ ಸಭೆಯ ಆಶ್ರಯದಲ್ಲಿ ನಗರದ ಸ್ವಚ್ಚ ಶಾಲೆ ಗುರುತಿಸಿ ಸ್ವಚ್ಛ ಶಾಲೆಗಳ ಆಯ್ಕೆಯ ಪ್ರಕೀಯೆ ಇತ್ತಿಚೆಗೆ ಜರುಗಿದೆ.
ಶಾಲೆಗಳಲ್ಲಿ ಲಭ್ಯವಿರುವ ಶೌಚಾಲಯಗಳ ವಿವರ ಹಾಗೂ ಸ್ವಚ್ಚತೆಯ ಗುಣಮಟ್ಟ, ಸ್ವಚ್ಚ ಭಾರತ ಮಿಷನ್ ಅಡಿಯಲ್ಲಿ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳ ಅನ್ವಯ ಇತ್ತಿಚೆಗೆ ಮೌಲ್ಯಮಾಪನ ಮಾಡಿ ಅಂಕಗಳ ಆಧಾರದ ಮೇಲೆ ನಗರದ ಮಯೂರ ಇಂಗ್ಲೀಷ ಮಿಡಿಯಂ ಸ್ಕೂಲ್ (ಪ್ರಥಮ), ಕೆ.ಎಲ್.ಇ ಮಹಾದೇವಪ್ಪಾ ಮುನವಳ್ಳಿ ಶಾಲೆ (ದ್ವೀತಿಯ) ಜಿ.ಇ.ಎಸ್ ಮಾಡರ್ನ ಇಂಗ್ಲೀಷ ಮಿಡಿಯಂ ಶಾಲೆಗೆ (ತೃತೀಯ) ಸ್ಥಾನ ನೀಡಲಾಗಿತ್ತು.
ಶುಕ್ರವಾರದಂದು ನಗರಸಭೆ ಸಭಾ ಭವನದಲ್ಲಿ ನಗರ ಸಭೆಯಿಂದ ಜರುಗಿದ ಪಾರಿತೋಷಕ ಮತ್ತು ಬಹುಮಾನ ವಿತಾರಣಾ ಸಮಾರಂಭದಲ್ಲಿ ಸದರಿ ಶಾಲೆಗಳ ಮುಖ್ಯಸ್ಥರಿಗೆ ಪ್ರಮಾಣಪತ್ರ ಮತ್ತು ಪಾರಿತೋಷಕಗಳನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷ ತಳದಪ್ಪ ಅಮ್ಮಣಗಿ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜತ್ತಿ, ಸ್ಥಾಯಿ ಸಮೀತಿ ಚೇರಮನ್ ಭಗವಂತ ಹುಳ್ಳಿ, ಸದಸ್ಯರಾದ ಎಸ್.ಎ.ಕೋತವಾಲ, ಪರಶುರಾಮ ಭಗತ, ಅಬ್ಬಾಸ ದೇಸಾಯಿ, ಕುತುಬುದ್ದೀನ ಗೋಕಾಕ, ಭೀಮಶಿ ಭರಮಣ್ಣವರ , ಚಂದ್ರಕಾಂತ ಈಳಿಗೇರ,ಗಿರೀಶ ಖೋತ, ಬಸವರಾಜ ಮುಳಗುಂದ ಸಹಾಯಕ ಕಾರ್ಯಪಾಲಕ ಅಭಿಯಂತರ ವಿ.ಎಸ್.ತಡಸಲೂರ, ಪರಿಸರ ಅಭಿಯಂತರ ಎಂ.ಹೆಚ್.ಗಜಾಕೋಶ, ಕಚೇರಿ ವ್ಯವಸ್ಥಾಪಕ ಎಂ.ಹೆಚ್.ಅತ್ತಾರ ಮತ್ತು ಹಿರಿಯ ಆರೋಗ್ಯ ನಿರೀಕ್ಷಕರಾದ ಜೆ.ಸಿ.ತಾಂಬೋಳಿ, ಆರ್.ಎಸ್.ರಂಗಸುಭೆ. ವಿವಿಧ ಶಾಲೆಗಳ ಮುಖ್ಯಸ್ಥರಾದ ಎಸ್.ಆರ್.ಮಹೇಂದ್ರಕರ, ಪ್ರಕಾಶ ಪಾಟೀಲ, ಎಮ್.ಎಮ್.ಸೊಗಲ ಸೇರಿದಂತೆ ಅನೇಕರು ಇದ್ದರು.