ಗೋಕಾಕ:ಭಾರತೀಯ ಸಂಸ್ಕಂತಿಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ : ವಿ.ಬಿ.ಕಣಿಲದಾರ
ಭಾರತೀಯ ಸಂಸ್ಕಂತಿಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ : ವಿ.ಬಿ.ಕಣಿಲದಾರ
ಗೋಕಾಕ ಜ 12 : ಭಾರತೀಯ ಸಂಸ್ಕಂತಿಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಎಸ್‍ಎಲ್‍ಜೆ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಿ.ಬಿ.ಕಣಿಲದಾರ ಹೇಳಿದರು.
ಶುಕ್ರವಾರದಂದು ನಗರದ ಲಕ್ಷ್ಮೀ ಏಜುಕೇಶನ್ ಟ್ರಸ್ಟಿನಲ್ಲಿ ವಿವಿಧ ಅಂಗ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಭಾರತ ದೇಶದ ಸಂಸ್ಕøತಿ, ಆಧ್ಯಾತ್ಮಿಕ, ಕಲೆ ಹಾಗೂ ಸಾಮಾಜಿಕವಾಗಿ ಅಧ್ಯಯನ ಮಾಡಿದ ಸ್ವಾಮಿ ವಿವೇಕಾನಂದರು ಯುವ ಶಕ್ತಿಗೆ ಸೂಕ್ತ ಮಾರ್ಗದರ್ಶನ ಮಾಡಿದರೇ ಬಲಿಷ್ಠ ಭಾರತ ನಿರ್ಮಾಣ ಸಾಧ್ಯವೆಂಬ ಸಂದೇಶವನ್ನು ನೀಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಸಂಸ್ಥೆಯ ಆಡಳಿತಾಧಿಕಾರಿ ಎಸ್.ಜಿ.ಬೆಟಗಾರ ಉದ್ಘಾಟಿಸಿದರು.
ವೇದಿಕೆ ಮೇಲೆ ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರಾದ ಡಾ|| ಎಸ್.ಎಮ್.ನಧಾಪ, ಎನ್.ಕೆ.ಮಿರಾಸಿ, ಎನ್.ಎಸ್.ತೋಟಗಿ, ಆಯ್.ಎಸ್.ಪವಾರ, ಬಿ.ಕೆ.ಕುಲಕರ್ಣಿ, ಎಚ್.ವಿ.ಪಾಗನೀಸ್, ಪಿ.ವಿ.ಚಚಡಿ ಇದ್ದರು.
ಎಸ್.ಎಲ್.ಭಯ್ಯರ ಸ್ವಾಗತಿಸಿ ವಂದಿಸಿದರು.