ಗೋಕಾಕ:ವಿವೇಕಾನಂದರ ವಾಣಿಯನ್ನು ಅರಿತರೇ ಭವ್ಯ ಭಾರತ ದೇಶದ ದರ್ಶನವಾಗುತ್ತದೆ : ಎಲ್.ಟಿ.ತಪಸಿ
ವಿವೇಕಾನಂದರ ವಾಣಿಯನ್ನು ಅರಿತರೇ ಭವ್ಯ ಭಾರತ ದೇಶದ ದರ್ಶನವಾಗುತ್ತದೆ : ಎಲ್.ಟಿ.ತಪಸಿ
ಗೋಕಾಕ ಜ 12 : ವಿವೇಕಾನಂದರ ವಾಣಿಯನ್ನು ಅರಿತರೇ ಭವ್ಯ ಭಾರತ ದೇಶದ ದರ್ಶನವಾಗುತ್ತದೆ ಎಂದು ವಿದ್ಯಾನಿಕೇತನ ಶಾಲೆ ಆಡಳಿತ ಮಂಡಳಿಯ ಅಧ್ಯಕ್ಷ ಎಲ್.ಟಿ.ತಪಸಿ ಹೇಳಿದರು.
ಶುಕ್ರವಾರದಂದು ನಗರದ ವಿದ್ಯಾನಿಕೇತನ ಶಾಲೆಯಲ್ಲಿ ಆಚರಿಸಲಾದ ಸ್ವಾಮಿ ವಿವೇಕಾನಂದರ 155ನೇ ಜಯಂತಿ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಹಾಗೂ ಅವರ ಆದರ್ಶಗಳ ಪುಸ್ತಕಗಳನ್ನು ವಿತರಿಸಿ ಮಾತನಾಡುತ್ತಾ ಶಿಕ್ಷಕರು ಮಕ್ಕಳಲ್ಲಿ ವಿವೇಕಾನಂದರ ಆದರ್ಶಗಳ ಅರಿವು ಮೂಡಿಸಿ ಅವರನ್ನು ನಾಡಿಗೆ ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮೋದ ಜೋಶಿ, ಭರಮಣ್ಣ ತೋಳಿ, ಲಕ್ಷ್ಮಣ ತಳ್ಳಿ, ಗಣುಸಿಂಗ್ ರಜಪೂತ, ಮುಖ್ಯೋಪಾಧ್ಯಯಿನಿ ರೇಖಾ ಗಾಣಿಗೇರ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.