ಬೈಲಹೊಂಗಲ:ಬಾಪೂಜಿ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 155 ನೇ ಜನ್ಮ ದಿನಾಚಾರಣೆ ಆಚರಣೆ
ಬಾಪೂಜಿ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 155 ನೇ ಜನ್ಮ ದಿನಾಚಾರಣೆ ಆಚರಣೆ
ಬೈಲಹೊಂಗಲ ಜ 13 : ಬೈಲಹೊಂಗಲ ಪಟ್ಟಣದ ಬಾಪೂಜಿ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 155 ನೇ ಜನ್ಮ ದಿನಾಚಾರಣೆಯನ್ನು ಆಚರಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ದೇಶಿಯ ಸಂಸ್ಕೃತಿ ಬಿಂಬಿಸುವ ಉಡುಗೆ ಯನ್ನು ತೊಟ್ಟು.. ಪಟ್ಟಣದ ಪ್ರಮುಖ ಬಿದಿಗಳಲ್ಲಿ ಮೇರವಣಿಗೆ ನಡೆಸಿದರು. ನಂತರ ಕಾಲೇಜಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು… ವಿದ್ಯಾರ್ಥಿಗಳು ವಿವೇಕಾನಂದರ ಕುರಿತು ಅನಿಸಿಕೆಗಳನ್ನು ತಿಳಿಸಿದರು.. ಉಪನ್ಯಾಸಕರಾಗಿ ಆಗಮಿಸಿದ ತುರಕರ ಶಿಗಿಹಳ್ಳಿ ಸರಕಾರಿ ಪ್ರೌಡ ಶಾಲೆಯ ಮುಖ್ಯೋದ್ಯಾಪಕ ಮಹೇಶ ಚನ್ನಂಗಿ ಯವರು ಸ್ವಾಮಿ ವಿವೆಕಾನಂದರ ಜೀವನ ಶೈಲಿಯನ್ನು ಯುವ ಜನರು ಅಳವಡಿಸಿಕೊಂಡರೇ ಭಾರತ ಪ್ರಬುದ್ದ ರಾಷ್ಟ್ರ ನಿರ್ಮಾನ ಮಾಡಲಿಕ್ಕೆ ಸಹಾಯಕವಾಗುತ್ತದೆ ಹಾಗೂ ಇವತ್ತಿನ ಡಿಜಿಟಲ್ ಯುಗದಲ್ಲಿ ಯುವಜನಾಂಗ ಹೇಗೆ ಕಾರ್ಯಪ್ರವರ್ತರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನಿಡಿದರು.. ನಂತರ ಸಂಸ್ಥೆಯ ಅಧ್ಯಕ್ಷರು ಶ್ರೀ ಬಿ ಎಸ್ ತೇಗೂರ ವಿದ್ಯಾರ್ಥಿಗಳು ನಮ್ಮ ನಾಡಿನ ಸಂಸ್ಕೃತಿಯನ್ನು ರಕ್ಷಿಸಿ ಪೋಸಿಸಬೆಕೆಂದು ಹೇಳಿದರು.. ಕಾರ್ಯಕ್ರಮದಲ್ಲಿ ಹೊಸೂರ ಗ್ರಾಮ ಪಂಚಾಯತ್ ಸದಸ್ಯರಾದ ಸೊಮಲಿಂಗ ಮೆಳ್ಳಿಕೇರಿ,ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ ಸಿದ್ದಗೌಡರ,ಕೋಶಾಧ್ಯಕ್ಷರಾದರ ಶಿವಾನಂದ ಕಲ್ಲೂರ, ಆನಂದ ಯಲಿಗಾರ, ಪ್ರಾಚಾರ್ಯರುಗಳಾದ ರಮೇಶ ಸವನೂರ,ಹಸನ್ ಗೋರವನಕೊಳ್ಳ ಉಪಸ್ಥಿತರಿದ್ದರು ಹಾಗೂ ಕಾಲೇಜಿನ ಉಪನ್ಯಾಸಕ ಸಿಬ್ಬಂದಿ ಕಾರ್ಯಕ್ರಮ ನಡೆಸಿಕೊಟ್ಟರು.