ಗೋಕಾಕ:ಬೈಕ್ ಟ್ರ್ಯಾಕ್ಟರ್ ನಡುವೆ ಡಿಕ್ಕಿ : ಯವಕನೋರ್ವ ಸ್ಥಳದಲ್ಲಿ ಸಾವು ಕನಸಗೇರಿ ಬಳಿ ಘಟನೆ
ಬೈಕ್ ಟ್ರ್ಯಾಕ್ಟರ್ ನಡುವೆ ಡಿಕ್ಕಿ : ಯವಕನೋರ್ವ ಸ್ಥಳದಲ್ಲಿ ಸಾವು ಕನಸಗೇರಿ ಬಳಿ ಘಟನೆ
ಗೋಕಾಕ ಜ 13: ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿ ಯಾದ ಪರಿಣಾಮ ಗೋಕಾಕಿನ ಯುವಕನೋರ್ವ ಸ್ಥಳದಲ್ಲಿ ಸಾವನ್ನಪ್ಪಿ ಇನೋರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ಗೋಕಾಕ ತಾಲೂಕಿನ ಕನಸಗೇರಿ ಪಾಶ್ಚಾಪೂರ ರಸ್ತೆಯಲ್ಲಿ ಇಂದು ಸಾಯಂಕಾಲ ನಡೆದಿದೆ
ಜಂಗಲಿಸಾಬ ಮುಜಾವರ (21) ಸಾವನ್ನಪ್ಪಿದ್ದ ದುರ್ದೈವಿಯಾಗಿದ್ದು ರಸೂಲಸಾಬ ಹಸನಸಾಬ ಮುಲ್ಲಾ (24) ಗಂಭೀರ ಗಾಯಗೊಂಡಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ
ಈ ಕುರಿತು ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ