ಗೋಕಾಕ:ನಗರಸಭೆಯಿಂದ ಮತದಾನದ ಬಗ್ಗೆ ಜಾಗೃತಿ ಜಾಥಾ
ನಗರಸಭೆ ವತಿಯಿಂದ ಮತದಾನದ ಬಗ್ಗೆ ಜಾಗೃತಿ ಜಾಥಾ
ಗೋಕಾಕ ಜ 18: ಸಾರ್ವಜನಿಕರಿಗೆ ಮತದಾರರ ಪಟ್ಟಿಯಲ್ಲಿ ನೋಂದಣಿ ಮತ್ತು ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವು ನಗರಸಭೆ ವತಿಯಿಂದ ಗುರುವಾರದಂದು ಜರುಗಿತು.
ನಗರದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ನಗರದ ವಿವಿಧ ಓಣಿಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಥಾ ಜರುಗಿತು. ಜಾಥಾದಲ್ಲಿ ವಿವಿಧ ಶಾಲಾ ಮಕ್ಕಳು, ಸಾರ್ವಜನಿಕರು ಸೇರಿದಂತೆ ನಗರಸಭೆಯ ಪೌರಾಯುಕ್ತ ವ್ಹಿ.ಸಿ.ಚಿನ್ನಪ್ಪಗೌಡರ. ಕಂದಾಯ ಅಧಿಕಾರಿ ಶಿವಕುಮಾರ ಹಳ್ಳೂರ. ಪರಿಸರ ಅಭಿಯಂತರ ಮಂಜುನಾಥ ಗಜಾಕೋಶ. ಹಿರಿಯ ಆರೋಗ್ಯ ನಿರೀಕ್ಷಕ ರವಿ ರಂಗಸುಭೆ, ಜಯೇಶ ತಾಂಬೋಳಿ ಹಾಗೂ ಕುಮಾರ ಕೋಳಿ ಹಾಗೂ ಸಿಬ್ಬಂದಿ ವರ್ಗದವರು ಫಾಲ್ಗೊಂಡಿದ್ದರು.
ನಗರಸಭೆಯ ಪೌರಾಯುಕ್ತ ವ್ಹಿ.ಸಿ.ಚಿನ್ನಪ್ಪಗೌಡರ ಮಾತನಾಡಿ ಭಾರತದ ಚುನಾವನಾ ಆಯೋಗದ ನಿರ್ದೇಶನದಂತೆ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾರರ ಸಹಭಾಗಿತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.