RNI NO. KARKAN/2006/27779|Wednesday, November 13, 2024
You are here: Home » breaking news » ಗೋಕಾಕ:ಸತೀಶ ಶುಗರ್ಸ್ ಅವಾಡ್ರ್ಸ ಕಾರ್ಯಕ್ರಮ ಇಡಿ ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರಣೆ ಆಗಿದ್ದೆ : ಕು. ಸಾವಿತ್ರಿ ಕರಗುಪ್ಪಿ

ಗೋಕಾಕ:ಸತೀಶ ಶುಗರ್ಸ್ ಅವಾಡ್ರ್ಸ ಕಾರ್ಯಕ್ರಮ ಇಡಿ ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರಣೆ ಆಗಿದ್ದೆ : ಕು. ಸಾವಿತ್ರಿ ಕರಗುಪ್ಪಿ 

17 ನೇ ಸತೀಶ ಶುಗರ್ಸ್ ಅವಾಡ್ರ್ಸ ಅಂತಿಮ ಹಂತದ ಸಾಂಸ್ಕøತೀಕ ಸ್ಪರ್ಧಾ ಕಾರ್ಯಕ್ರವನ್ನು ಸಾವಿತ್ರಿ ಕರಗುಪ್ಪಿ ಉದ್ಘಾಟಿಸುತ್ತಿರುವುದು.

ಸತೀಶ ಶುಗರ್ಸ್ ಅವಾಡ್ರ್ಸ ಕಾರ್ಯಕ್ರಮ ಇಡಿ ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರಣೆ ಆಗಿದ್ದೆ : ಕು. ಸಾವಿತ್ರಿ ಕರಗುಪ್ಪಿ

ಗೋಕಾಕ ಜ 18: ವಿವಿಧ ರಂಗಗಳಲ್ಲಿ ವಿದ್ಯಾರ್ಥಿ ಸಮುದಾಯವನ್ನು ಪ್ರೋತ್ಸಾಹಿಸುವುದರ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾ ಕಾರ್ಯ ಯಾರಾದರೂ ಮಾಡುತ್ತಾ ಇದ್ದರೆ ಅದು ಯಮಕನಮರಡಿ ಶಾಸಕರು ಹಾಗೂ ಸಾಂಸ್ಕಂತಿಕ ಕಾರ್ಯಕ್ರಮದ ರೂವಾರಿ ಸತೀಶ ಜಾರಕಿಹೊಳಿಯವರು ಕಳೆದ 17 ವರ್ಷಗಳಿಂದ ಸತೀಶ ಶುಗರ್ಸ್ ಅವಾಡ್ರ್ಸ ಭವ್ಯ ವೇದಿಕೆಯ ಮೂಲಕ ಮಹತ್ತರ ಕಾರ್ಯ ಮಾಡುತ್ತಿದ್ದಾರೆಂದು ಕಳೆದ ಸತೀಶ ಶುಗರ್ಸ್ ಅವಾಡ್ರ್ಸ ಭಾಷಣ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಕು. ಸಾವಿತ್ರಿ ಕರಗುಪ್ಪಿ ಹೇಳಿದರು.

ನಗರದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಗುರುವಾರದಂದು ಆರಂಭಗೊಂಡ ಸತೀಶ ಜಾರಕಿಹೊಳಿ ಪೌಂಡೇಶನ್ ಪ್ರಾಯೋಜಕತ್ವದಲ್ಲಿ 17 ನೇ ಸತೀಶ ಶುಗರ್ಸ್ ಅವಾಡ್ರ್ಸ ಅಂತಿಮ ಹಂತದ ಸಾಂಸ್ಕøತಿಕ ಸ್ಪರ್ಧೆಗಳ 4 ದಿನಗಳ ಈ ಭವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೆಳಗಾವಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಕಲಾ ಪ್ರತಿಭೆಯನ್ನು ಗುರುತಿಸುವ ಏಕೈಕ ಉದ್ದೇಶದಿಂದ ಕಳೆದ 17 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸತೀಶ ಶುಗರ್ಸ್ ಅವಾಡ್ರ್ಸ ಸಾಂಸ್ಕøತಿಕ ಸ್ಪರ್ಧೆಗಳ ಕಾರ್ಯಕ್ರಮವು ಇಡಿ ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರಣೆ ಆಗಿದ್ದು ಈ ಭವ್ಯ ವೇದಿಕೆಯಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ಮಾಜಿ ಸಚಿವ ಸತೀಶ ಜಾರಕಿಹೊಳಿಯವರು ವೃತ್ತಿಯಿಂದ ಒಬ್ಬ ರಾಜಕಾರಣಿ ಆಗಿದ್ದರು ಕೂಡ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕಂತಿಕ, ಕ್ರೀಡೆ, ಔಧ್ಯೋಗೀಕ ಹಾಗೂ ಕೃಷಿ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸುವುದರ ಜೊತೆಗೆ ಇಡಿ ವಿದ್ಯಾರ್ಥಿ ಸಮುದಾಯದ ಸಂಜೀವಿನಿ ಆಗಿದ್ದಾರೆಂದು ಶ್ಲಾಘಿಸಿದರು.
ಇಂದಿನ ತಂತ್ರಜ್ಞಾನ ಯುಗದಲ್ಲಿ ನಶಿಸಿ ಹೋಗುತ್ತಿರುವ ನಮ್ಮ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ದಿಶೆಯಲ್ಲಿ ಸತೀಶ ಜಾರಕಿಹೊಳಿ ಪೌಂಡೇಶನ್ ಪ್ರಾಯೋಜಕತ್ವದಲ್ಲಿ ಸತೀಶ ಶುಗರ್ಸ್ ಅವಾಡ್ರ್ಸ ವೇದಿಕೆಯ ಪ್ರೇರಣೆಯ ಹಿನ್ನೆಲೆಯಲ್ಲಿ ಜಾನಪದ ಕಲೆಯ ಸೊಬಗನ್ನು ಇಂತಹ ಸಾಂಸ್ಕøತೀಕ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಜೀವಂತವಾಗಿ ಇಟ್ಟು ಅವರ ದೂರದೃಷ್ಟಿ ನಾಯಕತ್ವ ವಿದ್ಯಾರ್ಥಿಗಳ ಪಾಲಿಗೆ ವರದಾನ ಆಗಿದೆ. ಕೇವಲ ಅಧ್ಯಯನದಿಂದ ವ್ಯಕ್ತಿತ್ವ ವಿಕಸನ ಆಗುವುದಿಲ್ಲ. ಅಧ್ಯಯನದ ಜೊತೆಗೆ ಕಲೆ,ಸಾಹಿತ್ಯ, ಸಂಸ್ಕøತಿಯು ರೂಢಿಸಿಕೊಳ್ಳಬೇಕು.
ಈ ಸಾಂಸ್ಕøತಿಕ ವೇದಿಕೆಯಿಂದ ಸಾವಿರಾರು ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿ ರಾಷ್ಟ್ರಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಶಿಸ್ತು, ಸಮಯ ಪಾಲನೆಗೆ ಮತ್ತೊಂದು ಹೆಸರೇ ಸತೀಶ ಶುಗರ್ಸ್ ಅವಾಡ್ರ್ಸ್. ಸಮಯವನ್ನು ಯಾರು ಪಾಲಿಸುತ್ತಾರೂ ಅವರನ್ನು ಗೌರವಿಸುವ ಕಾಲ ಈಗ ಬಂದಿದೆ. ಸಂಘಟಿತ ಪ್ರಯತ್ನ ಮಾಡಿದರೇ ಯಶಸ್ಸು ಲಭಿಸುತ್ತದೆ. ಇದಕ್ಕೆ ನಾನೇ ನಿದರ್ಶನ. ವಿಶೇಷವಾಗಿ ಯಾವುದೇ ಕಾರ್ಯಕ್ರಮಗಳು ಪೂಜ್ಯರು, ರಾಜಕಾರಣಿಗಳು, ಉದ್ಯಮಿಗಳು ಹಾಗೂ ಗಣ್ಯರಿಂದ ಉದ್ಘಾಟನೆಗೊಳ್ಳುತ್ತವೆ ಆದರೆ ವಿದ್ಯಾರ್ಥಿಗಳಿಂದ ಈ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಿರುವುದು ಸಾಂಸ್ಕøತಿಕ ಕಾರ್ಯಕ್ರಮದ ರೂವಾರಿಗಳು ಹಾಗು ಶಾಸಕರಾದ ಸತೀಶ ಜಾರಕಿಹೊಳಿ ಅವರಲ್ಲಿರುವ ವಿದ್ಯಾರ್ಥಿಗಳ ಮೇಲಿರುವ ಪ್ರೇಮವೇ ಕಾರಣವೆಂದು ಹೇಳಿದರು.
ಇಂದಿನಿಂದ ನಾಲ್ಕು ದಿನಗಳ ವರೆಗೆ ನಡೆಯುವ 17 ನೇ ಸತೀಶ ಶುಗರ್ಸ್ ಅವಾಡ್ರ್ಸ್ ಅಂತಿಮ ಹಂತದ ಸಾಂಸ್ಕøತಿಕ ಸ್ಪರ್ಧೆಗಳ ಕಾರ್ಯಕ್ರಮಕ್ಕೆ ನಿರ್ಮಿಸಲಾಗಿರುವ ಬೃಹತ್ ಆಕಾರದ ಮೈಸೂರು ಅರಮನೆ ನೆನಪಿಸುವ ವರ್ಣರಂಜಿತ ವಿದ್ಯುತ್ತ ಅಲಂಕಾರಿತ ಭವ್ಯವಾದ ವೇದಿಕೆ ನೆರೆದ ಜನರ ಮನ ಸೆಳೆಯುತ್ತಾ ನಗರದಲ್ಲಿ ಸಾಂಸ್ಕøತಿಕ ಹಬ್ಬದ ವಾತಾವರಣ ನಿರ್ಮಿಸಿದೆ.
ವೇದಿಕೆಯ ಮೇಲೆ ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ. ಬಳಿಗಾರ, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ.ಗಂಗಾಧರ, ಎನ್.ಎಸ್.ಎಪ್. ಕಾರ್ಯದರ್ಶಿ ಎಸ್.ಎ. ರಾಮಗಾನಟ್ಟಿ, ಆರ್.ಎಸ್.ಡುಮ್ಮಗೋಳ, ಕಳೆದ ಸಾಲಿನ ವಿವಿಧ ಸ್ಪರ್ಧೆಗಳಲ್ಲಿ ವಿಜೇತಗೊಂಡ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ತಹಾ ನರಗುಂದಬಾಬಾ, ಪ್ರೀಯಾಂಕಾ ಗುಡದನ್ನವರ, ಗೋಪಾಲ ದರೂರ, ಸಿಂಧೂರ ಬಿರ್ಲಾಯಿ, ಶ್ರೇಯಾ ಹಂದಿಗೋಳ, ರಾಘವೇಂದ್ರ ಅರಳಿಮಟ್ಟಿ, ಅಶೋಕ ಜೋತಾವರ, ಅನಿತಾ ಅಮ್ಮಣಗಿ, ಪ್ರೀತಿ ಮಂಟೂರ, ಐಶ್ವರ್ಯಾ ತಳವಾರ, ರಂಜೀತ ನಾಗಾಂವಿ, ಪ್ರಜ್ವಲ ಕಡಲಗಿ ಇದ್ದರು.
ಎ.ಜಿ.ಕೋಳಿ ಸ್ವಾಗತಿಸಿದರು. ಆರ್.ಎಲ್.ಮಿರ್ಜಿ ನಿರೂಪಿಸಿದರು. ಟಿ.ಬಿ.ಬಿಲ್ಲ ವಂದಿಸಿದರು.

Related posts: