RNI NO. KARKAN/2006/27779|Friday, October 18, 2024
You are here: Home » breaking news » ಬೆಳಗಾವಿ: ಹೈಕಮಾಂಡನಂತೆ ವರ್ತಿಸುತ್ತಿರುವ ಸಚಿವ ರಮೇಶ ಅವರಿಂದ ಜಿಲ್ಲೆಯಲ್ಲಿ ಗೊಂದಲ ಸೃಷ್ಟಿ : ಮಾಜಿ ಸಚಿವ ಸತೀಶ

ಬೆಳಗಾವಿ: ಹೈಕಮಾಂಡನಂತೆ ವರ್ತಿಸುತ್ತಿರುವ ಸಚಿವ ರಮೇಶ ಅವರಿಂದ ಜಿಲ್ಲೆಯಲ್ಲಿ ಗೊಂದಲ ಸೃಷ್ಟಿ : ಮಾಜಿ ಸಚಿವ ಸತೀಶ 

ಹೈಕಮಾಂಡನಂತೆ ವರ್ತಿಸುತ್ತಿರುವ ಸಚಿವ ರಮೇಶ ಅವರಿಂದ ಜಿಲ್ಲೆಯಲ್ಲಿ ಗೊಂದಲ ಸೃಷ್ಟಿ : ಮಾಜಿ ಸಚಿವ ಸತೀಶ ತಿರಗೇಟು

ಬೆಳಗಾವಿ ಮೇ 18: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಟಿಕೆಟಗಾಗಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗುತ್ತಿರುವಾಗ ಸಚಿವ ರಮೇಶ ಜಾರಕಿಹೊಳಿಯವರು ಟಿಕೆಟ ಹಂಚಿಕೆ ವಿಷಯದಲ್ಲಿ ತಾವೇ ಹೈಕಮಾಂಡನಂತೆ ವರ್ತಿಸುತ್ತಿದ್ದಾರೆ ಇದರಿಂದಾಗಿ ಪಕ್ಷದಲ್ಲಿ ಗೊಂದಲ ವಾತಾವರಣ ಸೃಷ್ಟಿಯಾಗಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಗುರುವಾರದಂದು ನಗರದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸಭೆಯ ಬಳಿಕ ಸಚಿವ ರಮೇಶ ಅವರ ಮೇಲೆ ವಾಕ ಸಮರ ಮುಂದೆವರೆಸುತ್ತಾ ಮಾಧ್ಯಗಳೊಂದಿಗೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು, ರಮೇಶ ಜಾರಕಿಹೊಳಿಯವರು ಗೋಕಾಕ ವಿಧಾನಸಭಾ ಮತಕ್ಷೇತ್ರದ ಈ ಬಾರಿ ಚುಣಾವಣೆಯಲ್ಲಿ ಟಿಕೆಟ್ ಪಡೆಯಲು ಪ್ರಯಾಸ ಮಾಡಬೇಕಾದ ಸ್ಥಿತಿ ಇರುವಾಗ ಬೇರೆ ಕ್ಷೇತ್ರಗಳಿಗೆ ಟಿಕೆಟ್ ನೀಡುವ ಅಧಿಕಾರ  ಇವರಿಗೆ ಎಲ್ಲಿಂದ ಬರುತ್ತೇಂದು ಪ್ರಶ್ನಿಸಿದರು. 

ನಿಪ್ಪಾಣಿ, ಖಾನಾಪುರ ಕ್ಷೇತ್ರಗಳಿಗೆ  ಟಿಕೆಟ್ ಹಂಚುವ ಅಧಿಕಾರ ಅವರಿಗೆ ಕೊಟ್ಟವರು ಯಾರು ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.  ಸಚಿವ  ರಮೇಶ್ ಜಾರಕಿಹೊಳಿಯವರು  ಜಿಲ್ಲಾ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುವುದರ ಮೂಲಕ ಇನ್ನಷ್ಟು ಗೊಂದಲ  ಸೃಷ್ಠಿಸುತ್ತಿದ್ದಾರೆ.

ನಾನು ರಾಯಚೂರು ಗ್ರಾಮೀಣ ಮಾತ್ರವಲ್ಲ ಬೇರೆ ಕಡೆ ಸ್ಪರ್ಧಿಸಿದ್ರು ಗೆಲವು ಸಾಧಿಸುತ್ತೇನೆ, ಆದರೆ ಯಮಕನಮರಡಿ ಕ್ಷೇತ್ರವನ್ನು ಯಾರಿಗೂ ಬಿಟ್ಟುಕೊಡುವ ಪ್ರಶ್ನೆಯೆ ಇಲ್ಲ ಎಂದರು. ಇನ್ನೂ ಸಹೋದರ ರಮೇಶ್ ಜಾರಕಿಹೊಳಿ ಮಂತ್ರಿ ಸ್ಥಾನವನ್ನು ಉಳಿಸಿಕೊಂಡು ಉತ್ತಮ ಕೆಲಸ ಮಾಡಬೇಕು ಎಂದು ಸಲಹೆ  ನೀಡಿದ್ದಾರೆ.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಮಕಮಮರಡಿ ಮತಕ್ಷೇತ್ರದಿಂದ ಲಖನ್ ಜಾರಕಿಹೊಳಿ ಸ್ಪರ್ಧಿಸಲಿದ್ದಾರೆಂದು ಸಚಿವ ರಮೇಶ ಜಾರಕಿಹೊಳಿಯವರು ನೀಡಿದ ಹೇಳಿಕೆಗೆ ಮಾಜಿ ಸಚಿವ ಸತೀಶ ಜಾರಕಿಹೊಳಿಯವರು ತಿರುಗೇಟು ನೀಡಿದ್ದಾರೆ

Related posts: