ಗೋಕಾಕ :ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಗೆ 17ನೇ ಸತೀಶ ಶುಗರ್ಸ ಅವಾಡ್ರ್ಸ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ
ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಗೆ 17ನೇ ಸತೀಶ ಶುಗರ್ಸ ಅವಾಡ್ರ್ಸ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ
ಗೋಕಾಕ ಜ 19: ಸಮೀಪದ ರಾಜಾಪೂರ ಗ್ರಾಮದ ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು 17ನೇ ಸತೀಶ ಶುಗರ್ಸ ಅವಾಡ್ರ್ಸ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ.
ಗುರುವಾರ ಸಂಜೆ ಗೋಕಾಕ ನಗರದ ವಾಲ್ಮೀಕಿ ಕ್ರೀಡಾಂಕನದಲ್ಲಿ ಸತೀಶ ಜಾರಕಿಹೋಳಿ ಪೌಂಡೇಶನ ಇವರ ವತಿಯಿಂದ ನಡೆದ ತಾಲೂಕಾ ಮಟ್ಟದ 17ನೇ ಸತೀಶ ಶುಗರ್ಸ ಅವಾಡ್ರ್ಸ ಸ್ಪರ್ಧೆಯ ಪ್ರಾಥಮಿಕ ಶಾಲಾ ವಿಭಾಗದ ಜಾನಪದ ನೃತ್ಯ ಸ್ಪರ್ಧೇಯಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ.
ತಾಲೂಕಿನ ವಿವಿದ ಶಾಲೆಗಳಿಂದ ಆಗಮಿಸಿದ 7 ಮತ್ತು 8ನೇ ವರ್ಗದ ವಿಧ್ಯಾರ್ಥಿಗಳೋಂದಿಗೆ ತೀವ್ರವಾದ ಪ್ರತಿಸ್ಪರ್ಧೆಯನ್ನು ನೀಡಿದ ವಿಧ್ಯಾರ್ಥಿಗಳು ಕೂದಲೆಳೆಯ ಅಂತರದಲ್ಲಿ ಪ್ರಥಮ ಸ್ಥಾನದಿಂದ ವಂಚಿತರಾದರೂ ದ್ವಿತೀಯ ಸ್ಥಾನವನ್ನು ತಾವು ಭಾಗವಹಿಸಿದ ಮೊದಲ ಯತ್ನದಲ್ಲೇ ಪಡೆಯಲು ಯಶಸ್ವಿಯಾಗಿದ್ದಾರೆ.
ಈ ಅಭೂತಪೂರ್ವವಾದ ಸಾಧನೆಯನ್ನು ಮಾಡಿದ ಮಕ್ಕಳಿಗೆ ಹಾಗೂ ಮಾರ್ಗದರ್ಶನ ನೀಡಿದ ಮಾರ್ಗದರ್ಶಕರಿಗೆ ಸಂಸ್ಥೆಯ ಅಧ್ಯಕ್ಷ ಶಿವಪುತ್ರ ಗುಂಡಪ್ಪಗೋಳ, ಟಿ.ಎ.ಪಿ.ಎಂ.ಎಸ್ ಉಪಾಧ್ಯಕ್ಷ ವಿಠ್ಠಲ್ ಪಾಟೀಲ್, ಜಿ.ಪಂ ಸದಸ್ಯೆ ಕಸ್ತೂರಿ ಕಮತಿ, ತಾ.ಪಂ ಸದಸ್ಯೆ ಸಂಗೀತಾ ಯಕ್ಕುಂಡಿ, ಹಿರಿಯರಾದ ಬಸವಂತ ಕಮತಿ, ರಾಜು ಬೈರುಗೋಳ. ಬಸವರಾಜ ಪಂಡ್ರೋಳಿ, ಬೈರಪ್ಪಾ ಯಂಕ್ಕುಂಡಿ, ರಾಮಣ್ಣ ಮುತ್ನಾಳಿ, ಗ್ರಾ.ಪಂ ಸದಸ್ಯರಾದ ಬಸವರಾಜ ಹೊಸೂರ, ಸಂಗಯ್ಯ ಹೂನೂರ, ಉದ್ದಪ್ಪ ಜಟ್ಟೆನ್ನವರ, ಸಂಜು ಬೈರುಗೋಳ, ಸಿ.ಆರ್.ಪಿ ಎಸ್.ಪಿ ಗೋಸಬಾಳ ಶುಭ ಹಾರೈಸಿದ್ದಾರೆ.