ಖಾನಾಪುರ:ಶಿಕ್ಷಣಕ್ಕೆ ಸಹಾಯ ನೀಡುವುದೇ ನಮ್ಮ ಫೌಂಡೇಶನನ ಗುರಿ : ಡಾ.ಅಂಜಲಿ ನಿಂಬಾಳ್ಕರ
ಶಿಕ್ಷಣಕ್ಕೆ ಸಹಾಯ ನೀಡುವುದೇ ನಮ್ಮ ಫೌಂಡೇಶನನ ಗುರಿ : ಡಾ.ಅಂಜಲಿ ನಿಂಬಾಳ್ಕರ
ಖಾನಾಪುರ ಜ 21: ಶಾಲಾ-ಮಕ್ಕಳ ಶಿಕ್ಷಣಕ್ಕೆ ಸಹಾಯ ನೀಡುವುದೇ ನಮ್ಮ ಫೌಂಡೇಶನನ ಗುರಿಯಾಗಿದ್ದು, ಅದರಲ್ಲೂ ಖಾನಾಪುರ ತಾಲೂಕು ಗ್ರಾಮೀಣ ಪ್ರದೇಶವಾಗಿರುವುದರಿಂದ ಬಡ ವಿಧ್ಯಾರ್ಥಿಗಳೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಆದ್ದರಿಂದ ಶಾಲಾ-ಕಾಲೇಜುಗಳ ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ಅನುಕೂಲವಾಗಕಲೆಂದು ಕಂಪಾಸ ಮತ್ತು ಪ್ಯಾಡಗಳ ವಿತರಣೆ ಮಾಡಲಾಗುತ್ತಿದೆ ಎಂದು ಬಾಲಭವನ ಅಧ್ಯಕ್ಷೆ ಡಾ.ಅಂಜಲಿ ನಿಂಬಾಳ್ಕರ ಹೇಳಿದರು.
ತಾಲೂಕಿನ ಬೀಡಿ ಗ್ರಾಮದ ಹೊರವಲಯದಲ್ಲಿರುವ ಹೋಲಿಕ್ರಾಸ ಕಾನ್ವೆಂಟ ಶಾಲೆಯಲ್ಲಿ ಶನಿವಾರ ದಿನದಂದು ಹಮ್ಮಿಕೊಂಡಂತಹ ಡಾ.ಅಂಜಲಿತಾಯಿ ಫೌಂಡೇಶನಿಂದ ವಿಧ್ಯಾರ್ಥಿಗಳಿಗೆ ಕಂಪಾಸ ಮತ್ತು ಪ್ಯಾಡ ವಿತರಿಸಿ ಮಾತನಾಡಿದರು.
ನಮ್ಮ ತಾಲೂಕು ಗ್ರಾಮೀಣ ಪ್ರದೇಶವಾಗಿರುವುದರಿಂದ ಇಲ್ಲಿ ಬಡವರೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಜೋತೆಗೆ ಗ್ರಾಮೀಣ ಭಾಗದ ಶಾಲೆಗಳಲ್ಲಿ ಬಡವಿಧ್ಯಾರ್ಥಿಗಳೆ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆಯುತ್ತಿರುವುದರಿಂದ ಶಾಲಾ-ಕಾಲೇಜುಗಳ ಪರೀಕ್ಷೆಗಳು ಸಮೀಪಿಸುತ್ತಿವೆ. ಆದ್ದರಿಂದ ಅದನ್ನು ಗಮನದಲ್ಲಿಟ್ಟುಕೊಂಡು ಇಡೀ ತಾಲೂಕಿನಾದ್ಯಂತ ಸುಮಾರು 25000 ಸಾವಿರ ವಿಧ್ಯಾರ್ಥಿಗಳಿಗೆ ಡಾ.ಅಂಜಲಿತಾಯಿ ಫೌಂಡೇಶನಿಂದ ಕಂಪಾಸ ಮತ್ತು ಪ್ಯಾಡ ವಿತರಣೆ ಮಾಡುವ ಉದ್ದೇಶ ನಮ್ಮದಾಗಿದೆ ಎಂದರು.
ಈ ಸಂಧರ್ಭದಲ್ಲಿ ಪ್ರಿನ್ಸಿಪಾಲ ಲೂಯೀಸ ಪರೆರಾ, ಸಂಜಯ ಸುತಾರ, ರೋಹಿಣಿ, ಇಸಾಕ ತಿಗಡಿ, ಬಾಳು ಬಾಬಶೇಟ, ಅದೃಶ, ಜಗದೀಶ ಮೂಲಿಮನಿ, ಬಾಬು, ಗಂಗಾಧರ, ಸೂರ್ಯಕಾಂತ ಕುಲಕರ್ಣಿ, ಪ್ರಶಾಂತ ಜೋರಾಪುರೆ ಹಾಗೂ ಶಾಲಾ ವಿಧ್ಯಾರ್ಥಿಗಳು ಹಾಜರಿದ್ದರು.