RNI NO. KARKAN/2006/27779|Sunday, December 22, 2024
You are here: Home » breaking news » ಗೋಕಾಕ:ಸ್ವಾಸ್ಥ್ಯ ಸಮಾಜದ ನಿರ್ಮಾಪಕ ಸತೀಶ ಜಾರಕಿಹೊಳಿ: ಹಿರಿಯ ನಟ ಶ್ರೀನಿವಾಸ ಮೂರ್ತಿ

ಗೋಕಾಕ:ಸ್ವಾಸ್ಥ್ಯ ಸಮಾಜದ ನಿರ್ಮಾಪಕ ಸತೀಶ ಜಾರಕಿಹೊಳಿ: ಹಿರಿಯ ನಟ ಶ್ರೀನಿವಾಸ ಮೂರ್ತಿ 

ಸ್ವಾಸ್ಥ್ಯ ಸಮಾಜದ ನಿರ್ಮಾಪಕ ಸತೀಶ ಜಾರಕಿಹೊಳಿ: ಹಿರಿಯ ನಟ ಶ್ರೀನಿವಾಸ ಮೂರ್ತಿ
ಗೋಕಾಕ ಜ 21: ಹುಟ್ಟು ಸಾವಿನ ಮಧ್ಯೆ ಮಾಡುವ ಕಾರ್ಯ ಶಾಶ್ವತವೆಂದು ಕನ್ನಡ ಚಲನಚಿತ್ರ ಹಿರಿಯ ನಟ ಶ್ರೀನಿವಾಸ ಮೂರ್ತಿ ಹೇಳಿದರು. ಭಾನುವಾರದಂದು ನಡೆದ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕಳೆದ 4 ದಿನಗಳ ವರೆಗೆ ನಡೆದ ಸತೀಶ ಜಾರಕಿಹೊಳಿ ಪೌಂಡೇಶನ ಪ್ರಾಯೋಜಕತ್ವದಲ್ಲಿ ಸತೀಶ ಶುಗರ್ಸ ಅವಾಡ್ರ್ಸನ ಅಂತಿಮ ಹಂತದ ಕಾರ್ಯಕ್ರಮದ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಮೂಡಬಿದರಿಯ ಆಳ್ವಾಸ ಕಾರ್ಯಕ್ರಮ ಸಮನಾಗಿ ಸತೀಶ ಶುಗರ್ಸ ಸಾಂಸ್ಕøತಿಕ ದೊಡ್ಡ ಜಾತ್ರೆಯಾಗಿ ಹೊರಹೊಮ್ಮಿದೆ. ಮನುಷ್ಯ ಕೊಟ್ಯಾಂತರೂಪಾಯಿ ಗಳಿಸಿದರು ಸಮಾಜ ಸೇವೆಗಾಗಿ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ನೀಡದಿದ್ದರೆ ಏನು ಪ್ರಯೋಜನವಿಲ್ಲ ಆದರೇ ಸತೀಶ ಜಾರಕಿಹೊಳಿ ಅವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು ಗ್ರಾಮೀನ ಪ್ರದೇಶದಲ್ಲಿ ಪ್ರತಿಭೆಗಳನ್ನು ಗುರುತಿಸಿ ರಾಜ್ಯ ರಾಷ್ಟ್ರ ಮಟ್ಟಕ್ಕೆ ಬೆಳೆಯಲು ಪ್ರೊತ್ಸಾಹ ನೀಡುತ್ತಿರುವ ಕಾರ್ಯ ಶ್ಲಾಘನಿಯವಾಗಿದೆ. ನಾನು ಗೋಕಾಕಕ್ಕೆ ಸನ್ 1969-70 ನೇ ಇಸವಿಯಲ್ಲಿ ಬಂದಿದ್ದು ಕಳೆದ 3 ತಿಂಗಳು ನಾಟಕ ಕಂಪನಿಯಲ್ಲಿ ಪಾತ್ರ ಮಾಡಿದ್ದೆನೆ ಗೋಕಾಕ ಮತ್ತು ನನಗೂ ಅತ್ಯಂತ ಅನನ್ಯ ಸಂಬಂದವಿದೆ.
ಜೈ ಸತೀಶ ಜಾರಕಿಹೊಳಿ ಎಂದ ನಟ ಶ್ರೀನಿವಾಸ ಮೂರ್ತಿ
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತ ನಟ ಶ್ರೀನಿವಾಸ ಮೂರ್ತಿಯವರು ಯೋಗ ನರಸಿಂಹ ಮೂರ್ತಿಯವರ ರಚಿಸಿದ ಗೀತೆಯನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಕೊನೆಯಲ್ಲಿ ಜೈ ಸತೀಶ ಜಾರಕಿಹೊಳಿ ಎಂದರು.
ನವದೆಹಲಿಯ ಎಐಸಿಸಿ ಯುವ ಕಾಂಗ್ರೇಸಿನ ಪ್ರಧಾನ ಕಾರ್ಯದರ್ಶಿ ಸೂರಜ ಹೆಗಡೆ, ಅಶೋಕ ಜೋಶಿ, ಅಬಕಾರಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ, ರವಿ ಪಾಟೀಲ, ಮಹಾಂತೇಶ ತಾಂವಶಿ ಮುಂತಾದವರು ಉಪಸ್ಥಿತರಿದ್ದರು.

Related posts: