ಗೋಕಾಕ:17ನೇ ಸತೀಶ ಶುಗರ್ಸ ಅವಾರ್ಡ್ಸ ಸ್ವರ್ಧೆ : ಸಮೂಹ ನೃತ್ಯ ದಲ್ಲಿ ಹನಮಂತ ಸವದಿ ಮತ್ತು ತಂಡ (ಪ್ರಥಮ)
17ನೇ ಸತೀಶ ಶುಗರ್ಸ ಅವಾರ್ಡ್ಸ ಸ್ವರ್ಧೆ : ಸಮೂಹ ನೃತ್ಯ ದಲ್ಲಿ ಹನಮಂತ ಸವದಿ ಮತ್ತು ತಂಡ (ಪ್ರಥಮ)
ಗೋಕಾಕ ಜ 21: ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆದ 17 ನೇ ಸತಿಶ ಶುಗರ್ಸ ಅವಾರ್ಡನ ಕೊನೆಯ ದಿನದ ಅಂತಿಮಹಂತದ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಾಳುಗಳ ವಿವರ.
ಗಾಯನ ಸ್ಪರ್ಧೆ ( ಕಾಲೇಜ ವಿಭಾಗ) : ಎಲ್.ಆರ್.ಜೆ ಪಿ.ಯು ಕಾಲೇಜ ಗೋಕಾಕಿನ ಕಲ್ಮೇಶ ಉಜ್ಜಿನಕೊಪ್ಪ (ಪ್ರಥಮ), ಸರಕಾರಿ ಪ್ರಥಮ ದರ್ಜೆ ಕಾಲೇಜ ಗೋಕಾಕದ ರೂಪಾ ಕಡಗಾಂವಿ (ದ್ವೀತಿಯ), ಜೆ.ಎಸ್.ಎಸ್ ಕಾಲೇಜ ಗೋಕಾಕ ವಿಜ್ಞಾನ ವಿಭಾದ ಅಶ್ವೀನಿ ದೆಮಶೇಟ್ಟಿ (ತೃತೀಯ) ಪ್ರಥಮ ಸ್ಥಾನಕ್ಕೆ 15000 ಸಾವಿರ, ದ್ವೀತಿಯ ಸ್ಥಾನಕ್ಕೆ 13000 ಸಾವಿರ, ತೃತೀಯ ಸ್ಥಾನಕ್ಕೆ 10000 ಸಾವಿರ ರೂಗಳ ನಗದು ಪುರಸ್ಕಾರ ಹಾಗೂ ಆಕರ್ಷಕ ಟ್ರೋಪಿ ವಿತರಿಸಿ ಗೌರವಿಸಲಾಯಿತು
ಜಾನಪದ ನೃತ್ಯ ಸ್ಪರ್ಧೆ (ಪ್ರೌಢಶಾಲಾ ವಿಭಾಗ) :ಸರಕಾರಿ ಪ್ರೌಢಶಾಲೆ ಹಡಗಿನಾಳ ಅಂಕೀತಾ ಕಲ್ಲೋಳಿ ಹಾಗೂ ಸಂಗಡಿಗರು (ಪ್ರಥಮ), ಎಂ.ಡಿ.ಆರ್.ಎಸ್ ನಾಗನೂರ ಸಾರಿಕಾ ಕಟ್ಟಿಮನಿ ಹಾಗೂ ಸಂಗಡಿಗರು (ದ್ವಿತೀಯ), ಜಿ.ಪಿ.ಯು.ಸಿ ಗೋಕಾಕ ಪದ್ಮಾವತಿ ಹಾಗೂ ಸಂಗಡಿಗರು(ತೃತೀಯ) ಪ್ರಥಮ ಸ್ಥಾನಕ್ಕೆ 30000 ಸಾವಿರ, ದ್ವೀತಿಯ ಸ್ಥಾನಕ್ಕೆ 20000 ಸಾವಿರ, ತೃತೀಯ ಸ್ಥಾನಕ್ಕೆ 15000 ಸಾವಿರ ರೂಗಳ ನಗದು ಪುರಸ್ಕಾರ ಹಾಗೂ ಆಕರ್ಷಕ ಟ್ರೋಪಿ ವಿತರಿಸಿ ಗೌರವಿಸಲಾಯಿತು
ಸಮೂಹ ನೃತ್ಯ ಸ್ಪರ್ಧೆ ( ಕಾಲೇಜ ವಿಭಾಗ) : ಎಸ್.ಎಸ್.ಪಿ.ಯು ಕಾಲೇಜ ಗೋಕಾಕ ಹನಮಂತ ಸವದಿ ಮತ್ತು ತಂಡ (ಪ್ರಥಮ), ಎಲ್.ಆರ್.ಜೆ ಪಾಲಿಟೆಕ್ನಿಕ್ ಕಾಲೇಜ ಗೋಕಾಕ ಭೀಮಶಿ ಶ್ರೀಕುಮಾರ ಮತ್ತು ತಂಡ (ದ್ವೀತಿಯ), ಜೆ.ಎಸ್.ಎಸ್.ಪಿ.ಯು ಕಾಲೇಜ ಗೋಕಾಕ ಪ್ರೀಯಾಂಕಾ ಸೊಪಡ್ಲ ಮತ್ತು ತಂಡ (ತೃತೀಯ) ಪ್ರಥಮ ಸ್ಥಾನಕ್ಕೆ 60000 ಸಾವಿರ, ದ್ವೀತಿಯ ಸ್ಥಾನಕ್ಕೆ 50000 ಸಾವಿರ, ತೃತೀಯ ಸ್ಥಾನಕ್ಕೆ 40000 ಸಾವಿರ ರೂಗಳ ನಗದು ಪುರಸ್ಕಾರ ಹಾಗೂ ಆಕರ್ಷಕ ಟ್ರೋಪಿ ವಿತರಿಸಿ ಗೌರವಿಸಲಾಯಿತು
ಇದೇ ಸಂದರ್ಭದಲ್ಲಿ 2016-17 ನೇ ಸಾಲಿನ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ಹಾಗೂ ವಿವಿದ ಹಂತಗಳಲ್ಲಿಯ 23 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ತಲಾ 10,000 ರಂತೆ ಒಟ್ಟು 2,30,000 ರೂ ಗಳ ಬೃಹತ್ ಮೊತ್ತದ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.