ಗೋಕಾಕ:ಕೇಂದ್ರ ಮತ್ತು ರಾಜ್ಯ ಸರಕಾರಗಳೆರೆಡು ನಿರ್ಲಜ್ಜ ಸರಕಾರಗಳು : ಬಾಬಾಗೌಡ ಪಾಟೀಲ ಆರೋಪ
ಕೇಂದ್ರ ಮತ್ತು ರಾಜ್ಯ ಸರಕಾರಗಳೆರೆಡು ನಿರ್ಲಜ್ಜ ಸರಕಾರಗಳು : ಬಾಬಾಗೌಡ ಪಾಟೀಲ ಆರೋಪ
ಗೋಕಾಕ ಜ 22: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅತ್ಯಂತ ನೀತಿಗೆಟ್ಟ ಮತ್ತು ನಿರ್ಲಜ್ಜ ಸರ್ಕಾರಗಳೆಂದು ಮಾಜಿ ಕೇಂದ್ರ ಸಚಿವ ರೈತ ಮುಖಂಡ ಬಾಬಾಗೌಡಾ ಪಾಟೀಲ ಆರೋಪಿಸಿದ್ದಾರೆ.
ನಗರದಲ್ಲಿ ರೈತ ಮುಖಂಡರ ಸಭೆಗೆ ಆಗಮಿಸಿದ ಸಂದರ್ಭದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಫಸಲು ಭೀಮಾ ಯೋಜನೆಯಿಂದ ಇಲ್ಲಿಯವರೆಗೆ ಯಾವೊಬ್ಬ ರೈತನಿಗೆ ಲಾಬವಾಗಿಲ್ಲ ಈ ಯೋಜನೆಯಿಂದ ಮದ್ಯವರ್ತಿಗಳಿಗೆ ಮಾತ್ರ ಲಾಭವಾಗಿದೆ. ರಿರ್ಜವಬ್ಯಾಂಕನಿಂದ 1.14 ಕೋಟಿಯಷ್ಟು ಸಾಲ ರದ್ದು ಮಾಡಿದ ಕೇಂದ್ರ ಸಾಲ ಪಡೆದವರ ಹೆಸರುಗಳನ್ನು ಅಂಬಾನಿ, ಅದಾನಿ ಶಾ ರಂತಹ ಪ್ರಭಾವಿಗಳ ಒತ್ತಡಕ್ಕೆ ಬಹಿರಂಗ ಪಡಿಸುತ್ತಿಲ್ಲಾ ರೈತರ ಬಗ್ಗೆ ಮಾತನಾಡುವ ಪ್ರಧಾನಿಯವರು ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಮನಸ್ಸು ಮಾಡುತ್ತಿಲ್ಲ.
ವಿಶ್ವದಲ್ಲಿಯೇ ಪ್ರಖ್ಯಾತಿ ಪಡೆದು 3ನೇ ಸ್ಥಾನದಲ್ಲಿರುವ ಪ್ರಧಾನಿ ಬೇರೆ ರಾಷ್ಟ್ರದಿಂದ ತೊಗರಿ ಬೆಳೆಯನ್ನು ಆಮದು ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡು. ಇದು ನಮ್ಮ ಪ್ರಧಾನಿಯ ಬುದ್ಧಿವಂತಿಕೆ ಎಷ್ಟು ? ಎಂಬುದನ್ನು ತೋರಿಸುತ್ತದೆ . ಪ್ರತಿ ವರ್ಷ ನಾಲವತ್ತು ಸಾವಿರ ಕೋಟಿ ರೂ.ದಷ್ಟು ಫಾಮ ಎಣ್ಣೆಯನ್ನು ವಿದೇಶದಿಂದ ತರಿಸುತ್ತಿರುವ ಸರ್ಕಾರದ ಕ್ರಮದಿಂದ ಈ ದೇಶದಲ್ಲಿ ಆಹಾರ ಸೌಮ್ಯತೆ ಸರಿಯಾಗಿಲ್ಲ ಎಂಬುದು ಸಾಬೀತಾಗುತ್ತಿದೆ ಎಂದ ಬಾಬಾಗೌಡ ಪಾಟೀಲರು ರಾಜ್ಯ ಸರ್ಕಾರದ ಅನ್ಯಭಾಗ್ಯ ಕ್ಷೀರಭಾಗ್ಯ, ಶಾದಿ ಭಾಗ್ಯ , ಯಶಸ್ವಿನಿಯ ಸೇರಿದಂತೆ ಇತರೆ ಭಾಗ್ಯಗಳಿಂದ ರಾಜ್ಯದ ಜನತೆಗೆ ಮತ್ತು ರೈತರಿಗೆ ಯಾವುದೇ ಲಾಭವಿಲ್ಲ. ರೈತ ಪರ, ಜನರಪರ ಸರ್ಕಾರವೆಂದು ಬೀಗುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಈ ರಾಜ್ಯದ ಜನತೆಗೆ ಸ್ಮಶಾನ ಭಾಗ್ಯ ಒಂದೇ ನೀಡುವುದು ಬಾಕಿ ಇದೆ. ಇವೆರಡೂ ಸರ್ಕಾರಗಳು ಜನವಿರೋಧಿ, ರೈತವಿರೋಧಿ ಸರ್ಕಾರಗಳು ಎಂದು ರೈತ ಮುಖಂಡ ಬಾಬಾಗೌಡ ಗುಡುಗಿದರು.
ಈ ಕುರಿತು ರಾಜಾದ್ಯಂತ ಸಂಚರಿಸಿ ರೈತರಲ್ಲಿ, ಜನರಲಿ ಜಾಗೃತಿ ಮೂಡಿಸವ ಕಾರ್ಯಕ್ರಮಗಳನ್ನು ನಡೆಸಲಾಗುವುದೆಂದು ಬಾಬಾಗೌಡ ಪಾಟೀಲ ಹೇಳಿದರು
ಮಹಾದಾಯಿ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಬಾಬಾಗೌಡರು ಮಹದಾಯಿ ವಿಚಾರವನ್ನು ಮುಂದಿಟ್ಟುಕೊಂಡ ಬಸವರಾಜ ಬೊಮ್ಮಯಿ, ಎಂ.ಬಿ.ಪಾಟೀಲ ಸೇರಿದಂತೆ ಅನೇಕರು ಗೆದ್ದು ಬಂದು ಶಾಶಕ, ಮಂತ್ರಿಗಳಾದರೂ ಈ ಸಮಸ್ಯೆ ಬಗೆಹರಿಸಲು ಆಗಿಲ್ಲ. ಇನ್ನು ಸಾಮಾನ್ಯ ಜನರಿಂದ ಅದು ಕಷ್ಟ ಸಾಧ್ಯ ಅಂದ ಮಾತ್ರಕ್ಕೆ ಚಳುವಳಿಗಳು, ಹೋರಾಟಗಳು ಎದೆಗುಂದುವದಿಲ್ಲ. ಅವು ನಿರಂತರವಾಗಿಟ್ಟುಕೊಂಡು , ದೂರದೃಷ್ಟಿವುಳ್ಳ ವಿಚಾರಗಳನ್ನು ಮುಂದಿಟ್ಟುಕೊಂಡು ರೈತ ಮಿತ್ರರು ಹೆಜ್ಜೆ ಇಟ್ಟರೆ ಒಳ್ಳೆಯದಾಗುವುದೆಂದು ಮಹಾದಾಯಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಹೋರಾಟಗಾರರಿಗೆ ಬಾಬಾಗೌಡ ಕಿವಿಮಾತು ಹೇಳಿದರು.