RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು : ವಿರಾಜ ಮೋದಿ

ಗೋಕಾಕ:ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು : ವಿರಾಜ ಮೋದಿ 

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು : ವಿರಾಜ ಮೋದಿ
ಗೋಕಾಕ ಜ 23: ವಿದ್ಯಾರ್ಥಿಗಳ ಬುದ್ದಿಶಕ್ತಿ, ಹಾಗೂ ಕ್ಷಮತೆಯನ್ನು ಅರಿತು ಅವರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕಾಗಿದೆ ಎಂದು ಇಲ್ಲಿಯ ಜಿಇಎಸ್ ಮಹಾವಿದ್ಯಾಲಯದ ಪ್ರಾಂಶುಪಾಲ ವಿರಾಜ ಮೋದಿ ಹೇಳಿದರು.
ಸೋಮವಾರದಂದು ಸಂಜೆ ನಗರದ ನೇತಾಜಿ ಎಜ್ಯುಕೇಶನಲ್ ಆಂಡ್ಯ್ ಸೋಶಿಯಲ್ ವೆಲ್‍ಫೇರ್ ಸೋಸೈಟಿಯ ಭಾರತೀಯ ವಿದ್ಯಾಮಂದಿರ ಶಾಲೆಯಲ್ಲಿ ಜರುಗಿದ ವಿವಿಧ ಸಾಂಸ್ಕøತೀಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿರುವ ಕಲಿಕಾ ದೋಷಗಳನ್ನು ನಿವಾರಿಸಿ, ಕಲಿಕೆಯಲ್ಲಿ ಧೈರ್ಯವನ್ನು ತುಂಬಿ ಪ್ರೋತ್ಸಾಹ ನೀಡಬೇಕೆಂದು ಹೇಳಿದರು.
ವಿದ್ಯಾರ್ಥಿಗಳಿಗೆ ಒತ್ತಡವನ್ನು ಹಾಕದೇ ಆತ್ಮವಿಶ್ವಾಸದ ಕೊರೆತೆಯನ್ನು ನೀಗಿಸಿ ಮನೋಪ್ರವೃತ್ತಿಯನ್ನು ಬೆಳೆಸುವ ಕಾರ್ಯವನ್ನು ಮಾಡಿ ಮೌಲ್ಯ ಆಧಾರಿತ ಶಿಕ್ಷಣವನ್ನು ನೀಡಿ, ಮಕ್ಕಳಲ್ಲಿ ಮಾನವೀಯ ಮೌಲ್ಯ ಮತ್ತು ಜೀವನದ ಕೌಶಲ್ಯಗಳನ್ನು ತುಂಬುವ ಕಾರ್ಯವನ್ನು ಶಿಕ್ಷಕರು ಹಾಗೂ ಪಾಲಕರು ಮಾಡಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ವಾರ್ಷಿಕ ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಗಣ್ಯರು ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್‍ಇಎಸ್‍ಆಂಡ್ಯ್ ಡಬ್ಲೂ ಸೋಸಾಯಿಟಿ ನಿರ್ದೇಶಕ ಎಸ್.ಕೆ.ಮಠದ ವಹಿಸಿದ್ದರು.
ಈ ಸಂದರ್ಭದಲ್ಲಿ ಕೌಜಲಗಿಯ ಕನ್ನಡ ಉಪನ್ಯಾಸಕ ರಾಜು ಕಂಬಾರ, ನಗರ ಸಭೆಯ ಲೆಕ್ಕ ಅಧಿಕ್ಷಕ ಎಮ್.ಎನ್.ಸಾಗರೇಕರ, ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ನವೀನ(ಬಂಡು) ಜರತಾರಕರ, ನಿರ್ದೇಶಕರಾದ ವಿನೋದ ಝಂವರ, ಬಸವರಾಜ ಕಲ್ಲೋಳಿ, ಚಿದಾನಂದ ದೇಮಶೆಟ್ಟಿ, ಚಂದ್ರಕಾಂತ ಈಳಿಗೇರ, ಸಿದ್ದು ವಡೇರ, ಆಡಳಿತಾಧಿಕಾರಿ ಶ್ರೀಮತಿ ವಾಯ್.ಎನ್.ನಣದಿಕರ, ಮುಖ್ಯೋಪಾಧ್ಯಯಿನಿ ಬಿ.ಎಸ್.ಹುಬ್ಬಳ್ಳಿ ಇದ್ದರು.
ಶಿಕ್ಷಕರಾದ ಯು.ಬಿ.ನಾಯ್ಕರ ಸ್ವಾಗತಿಸಿದರು, ಆರ್.ಎನ್.ನುಚ್ಚಿ ನಿರೂಪಿಸಿದರು, ಎಸ್.ಜಿ.ಹಮ್ಮಿಣಿ ವಂದಿಸಿದರು.

Related posts: