ಖಾನಾಪುರ:ವಿದೇಶಿ ಸಂಸ್ಕ್ರತಿಗೆ ಮಾರು ಹೋಗಬೇಡಿ: ಯಲ್ಲಮ್ಮಾ ಅಭಿಮತ
ವಿದೇಶಿ ಸಂಸ್ಕ್ರತಿಗೆ ಮಾರು ಹೋಗಬೇಡಿ: ಯಲ್ಲಮ್ಮಾ ಅಭಿಮತ
ಖಾನಾಪುರ ಜ 23 : ಈ ಆಧುನಿಕ ಜಗತ್ತಿನಲ್ಲಿ ವಿದ್ಯಾವಂತ ಯುವ ಪೀಳಿಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸಂಸ್ಕ್ರತಿಯನ್ನು ಮರೆತು, ವಿದೇಶಿ ಸಂಸ್ಕ್ರತಿಗೆ ಮಾರುಹೋಗುತ್ತಿರುವುದರಿಂದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಅಧಿಕಾರಿಯಾದ ಯಲ್ಲಮ್ಮಾ ಅವರು ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ಲಿಂಗನಮಠ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ದಿನದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಮ್ಮಿಕೊಂಡಂತಹ ಮಕ್ಕಳ ಸಂರಕ್ಷಣೆ ಮತ್ತು ಸುರಕ್ಷೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಇತ್ತಿಚಿನ ದಿನಗಳಲ್ಲಿ ಶಾಲಾ-ಕಾಲೇಜು ಮಕ್ಕಳಿಗೆ ತಿನ್ನುವ ಆಹಾರ ಹಾಗೂ ಉಪಯೋಗಿಸುವ ವಸ್ತುಗಳ ಆಸೆ ತೋರಿಸಿ ಅವರ ಗಮನವನ್ನು ಬೇರೆಡೆ ಸೆಳೆದು ಕರೆದುಕೊಂಡು ಹೋಗಿ ಬೇರೆ-ಬೇರೆ ದೇಶಗಳಿಗೆ ಮಾರಾಟ ಮಾಡಲಾಗುತ್ತಿದೆ. ಆದ್ದರಿಂದ ತಾವೆಲ್ಲರೂ ಇಂತಹವರ ವಿರುದ್ಧ ಜಾಗೃತರಾಗಬೇಕು. ಇದರ ಜೋತೆಗೆ ಶಾಲಾ-ಕಾಲೇಜುಗಳಲ್ಲಿ ಹೆಣ್ಣು ಮಕ್ಕಳು ಭಾರತೀಯ ಸಂಸ್ಕ್ರತಿಯನ್ನು ಮರೆತು, ವಿದೇಶಿ ಸಂಸ್ಕ್ರತಿಗೆ ಮಾರುಹೋಗಿ ತಾವು ತೋಡುವ ಉಡುಪಗಳ ಮೇಲೆ ಗಮನವನ್ನು ಹರಿಸದೆ ಇರುವುದರಿಂದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ಆಗಲು ಕಾರಣವಾಗುತ್ತಿವೆ ಎಂದರು. ಆದ್ದರಿಂದ ಮಕ್ಕಳು ನಿವೆಲ್ಲರೂ ನಿಮ್ಮ ಸಂರಕ್ಷಣೆ ಮತ್ತು ಸುರಕ್ಷೆಯನ್ನು ನೀವೇ ನಿರ್ವಹಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಸೇವಾಪ್ರತಿನಿಧಿ ಗಂಗಮ್ಮಾ ಅವರು ನಿರೂಪಿಸಿದರು. ಶಿಕ್ಷಕ ಶಿರಾಜ ಬಾಗವಾನ ಸ್ವಾಗತಿಸಿದರು. ಶಿಕ್ಷಕಿ ಶಾಂತಾ ಕೋಳಿ ವಂದಿಸಿದರು.
ಈ ಸಂದರ್ಭದಲ್ಲಿ ಮುಖ್ಯೋಧ್ಯಾಪಕ ಬನಶೆಟ್ಟಿ ಸರ್, ಅಶ್ಪಾಕ ಪಟೇಲ, ಲಿಂಗನಮಠ ಗ್ರಾಮದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಧಾಧಿಕಾರಿಗಳಾದ ಮಹೇಶ್ವರಿ ಮಾಟೋಳ್ಳಿ, ಸರೋಜಾ ಬಾಗೇವಾಡಿ, ಪ್ರಭಾವತಿ ಕಮ್ಮಾರ, ಅನ್ನಪೂರ್ಣ ಬಾಗೇವಾಡಿ, ಕನ್ನಡ ಮತ್ತು ಉರ್ದು ಶಾಲೆಗಳ ಶಿಕ್ಷಕ ವೃಂದ ಹಾಗೂ ಮುದ್ದು ಮಕ್ಕಳು ಹಾಜರಿದ್ದರು.