ಗೋಕಾಕ:ಸಂಗೋಳ್ಳಿ ರಾಯಣ್ಣ ಮೂರ್ತಿಗೆ ಭವ್ಯ ಸ್ವಾಗತ
ಸಂಗೋಳ್ಳಿ ರಾಯಣ್ಣ ಮೂರ್ತಿಗೆ ಭವ್ಯ ಸ್ವಾಗತ
ಗೋಕಾಕ ಜ 24: ತಾಲೂಕಿನ ಬಸಳಿಗುಂದಿ ಗ್ರಾಮದಲ್ಲಿ ಪ್ರತಿಷ್ಠಾಪನಗೆ ತರಲಾದ ಶ್ರೀ ಸಂಗೋಳ್ಳಿ ರಾಯಣ್ಣ ಮೂರ್ತಿಗೆ ಬೆಣಚಿನಮರಡಿ ಗ್ರಾಮದಲ್ಲಿ ಭವ್ಯವಾದ ಸ್ವಾಗತಿಸಲಾಯಿತು.
ಬುಧವಾರದಂದು ಬೆಳಗಾವಿಯಿಂದ ತರಲಾದ ಮೂರ್ತಿಗೆ ಬೆಣಚಿನಮರಡಿ ಗ್ರಾಮದಲ್ಲಿ ಗ್ರಾಮಸ್ಥರು ಪೂಜೆಯನ್ನು ನೆರವೇರಿಸಿ, ಭವ್ಯವಾದ ಮೆರವಣಿಗೆಯೊಂದಿಗೆ ಬಸಳಿಗುಂದಿ ಗ್ರಾಮಕ್ಕೆ ಮೂರ್ತಿಯನ್ನು ತರಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕುರುಬರ ಸಂಘದ ಅಧ್ಯಕ್ಷ ಡಾ|| ರಾಜೇಂದ್ರ ಸಣ್ಣಕ್ಕಿ, ನ್ಯಾಯವಾದಿ ಮುತ್ತೆಪ್ಪ ಕುಳ್ಳೂರ, ಮುಖಂಡರಾದ ಎ.ಎಮ್.ಮೋಡಿ, ವೆಂಕಟೇಶ ದಳವಾಯಿ, ಸಿದ್ದಪ್ಪ ವಾಲಿಕಾರ, ವಿಠ್ಠಲ ಗಡಾದ, ವೀರಪ್ಪ ಮಾರಾಪೂರ, ಲಕ್ಕಪ್ಪ ಮಾಳಗಿ, ಸಿದ್ದಪ್ಪ ರಂಗನ್ನವರ, ಮಾರುತಿ ಜಿಂಗಿ, ಸಂತೋಷ ಕಟ್ಟಿಕಾರ, ರಾಮೋಜಿ ಮಾಳಗಿ, ಆನಂದ ಉಳ್ಳಾಗಡ್ಡಿ, ನಾಗಪ್ಪ ಪೂಜೇರಿ, ಸಿದ್ದಪ್ಪ ಹಟ್ಟಿ, ಯಮನಪ್ಪ ಬಿಲಕುಂದಿ, ನಾಗಪ್ಪ ಕುರಬನ್ನವರ, ಮುತ್ತೇಪ್ಪ ಪಾಟೀಲ, ಸದಾ ಆನಿಗೋಳ, ಗಂಗಪ್ಪ ನಡುವಿನಮನಿ, ಅಶೋಕ ವಾಲಿಕಾರ, ಗೋಪಾಲ ವಾಲಿಕಾರ, ವೀರಪ್ಪ ಪಾಟೀಲ, ಹಾಲಮತ ವೇದಿಕೆ ಸದಸ್ಯರು ಸೇರಿದಂತೆ ಅನೇಕರು ಇದ್ದರು.