RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ರಾಮಲಿಂಗೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನದಿಂದ ಜನರ ಬದುಕು ಬಂಗಾರವಾದಂತಾಗಿದೆ : ಬಾಲಚಂದ್ರ ಜಾರಕಿಹೊಳಿ

ಗೋಕಾಕ:ರಾಮಲಿಂಗೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನದಿಂದ ಜನರ ಬದುಕು ಬಂಗಾರವಾದಂತಾಗಿದೆ : ಬಾಲಚಂದ್ರ ಜಾರಕಿಹೊಳಿ 

ರಾಮಲಿಂಗೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನದಿಂದ ಜನರ ಬದುಕು ಬಂಗಾರವಾದಂತಾಗಿದೆ : ಬಾಲಚಂದ್ರ ಜಾರಕಿಹೊಳಿ

ಗೋಕಾಕ ಜ 24 : ಕಳ್ಳಿಗುದ್ದಿ ಭಾಗಕ್ಕೆ ರಾಮಲಿಂಗೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಿದ್ದರಿಂದ ಈ ಭಾಗ ಸಂಪೂರ್ಣವಾಗಿ ನೀರಾವರಿ ಪ್ರದೇಶವಾಗಿದೆ. ಏತ ನೀರಾವರಿಯಿಂದ ಈ ಭಾಗದ ಜನರ ಬದುಕು ಬಂಗಾರವಾದಂತಾಗಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಮಂಗಳವಾರದಂದು ತಾಲೂಕಿನ ಕಳ್ಳಿಗುದ್ದಿ ಗ್ರಾಮದಲ್ಲಿ ಮಹಾಲಕ್ಷ್ಮೀ ದೇವಿ ಕಾರ್ತಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ 58 ಕೆಜಿ ಕಬಡ್ಡಿ ಪಂದ್ಯಾವಳಿವನ್ನು ಉದ್ಘಾಟಿಸಿ ಮಾತನಾಡಿದ ಅವರು, ನನ್ನ ಅಧಿಕಾರ ಅವಧಿಯಲ್ಲಿ ರಾಮಲಿಂಗೇಶ್ವರ ನೀರಾವರಿ ಯೋಜನೆಯನ್ನು ರೈತ ಸಮೂಹಕ್ಕೆ ಅರ್ಪಿಸಿರುವ ಹೆಮ್ಮೆ ನನಗಿದೆ ಎಂದು ಹೇಳಿದರು.
ಕಳ್ಳಿಗುದ್ದಿ ಗ್ರಾಪಂ ವ್ಯಾಪ್ತಿಯ ಕಳ್ಳಿಗುದ್ದಿ, ಮನ್ನಿಕೇರಿ ಹಾಗೂ ರಡರಟ್ಟಿ ಗ್ರಾಮಗಳ ಅಭಿವೃದ್ದಿಗಾಗಿ ಸರ್ಕಾರದಿಂದ ವಿವಿಧ ಇಲಾಖೆಗಳ ಯೋಜನೆಯಡಿ ನೂರಾರು ಕೋಟಿ ರೂಗಳನ್ನು ವ್ಯಯ ಮಾಡಲಾಗಿದೆ. ರಸ್ತೆ ಕಾಮಗಾರಿಗಳಿಗಾಗಿ ಪ್ರಾಶಸ್ತ್ಯ ನೀಡಲಾಗಿದೆ. ಕಳ್ಳಿಗುದ್ದಿಯಿಂದ ಮನ್ನಿಕೇರಿ ವರೆಗಿನ ರಸ್ತೆ ಕಾಮಗಾರಿಗೆ 2.35 ಕೋಟಿ ಅನುದಾನ ದೊರೆತಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಕಳ್ಳಿಗುದ್ದಿಯಿಂದ ಕೌಜಲಗಿ ವರೆಗಿನ ರಸ್ತೆ ಸುಧಾರಣೆಗೆ ನಬಾರ್ಡ ಯೋಜನೆಯಡಿ 1 ಕೋಟಿ ರೂಗಳ ಅನುದಾನ ಬಂದಿದ್ದು, ವಾರದೊಳಗಾಗಿ ಟೆಂಡರ್ ಪ್ರಕೀಯೆ ನಡೆಯಲಿದೆ. ಬಾಕಿ ಉಳಿದಿರುವ ಕಾಮಗಾರಿಗಳನ್ನು 2 ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ದೇಶಿಯ ಕ್ರೀಡೆಗಳನ್ನು ನಾವೆಲ್ಲರೂ ಬೆಳೆಸಬೇಕಾಗಿದೆ. ಕೇವಲ ಕ್ರೀಕೇಟ ಆಟಕ್ಕೆ ಜೊತು ಬೀಳಬಾರದು. ನಮ್ಮ ದೇಶಿಯ ಕ್ರೀಡೆಗಳು ಸಾಕಷ್ಟು ಇದ್ದು ಅಂತಹ ಆಟಗಳನ್ನು ಉಳಿಸಿ, ಅವುಗಳನ್ನು ಪೋಷಿಸಬೇಕಾಗಿದೆ. ಕ್ರೀಡೆಗಳಲ್ಲಿ ಸೋಲು ಗೆಲವು ಸಾಮಾನ್ಯ. ಸೋಲು ಗೆಲುವಿನ ಮೆಟ್ಟಿಲಾಗಲಿದೆ ಎಂದು ತಿಳಿಸಿದರು.
ಮುಖಂಡ ಅಶೋಕ ಪರುಶೆಟ್ಟಿ, ಪ್ರಭಾ ಶುಗರ ಉಪಾಧ್ಯಕ್ಷ ರಾಮಣ್ಣಾ ಮಹಾರೆಡ್ಡಿ, ಹಣಮಂತ ಅಳಗೋಡಿ, ವಿ.ಎಲ್.ಚನ್ನಾಳ, ಕಲ್ಲಪ್ಪ ವಜ್ರಮಟ್ಟಿ(ಬಟಕುರ್ಕಿ) ಎಚ್.ಡಿ.ಮುಲ್ಲಾ, ಭೀಮಶಿ ಅಳಗೋಡಿ, ಗುರುನಾಥ ಹೂಗಾರ(ಚಿಪ್ಪಲಕಟ್ಟಿ), ಸುಭಾಶ ಕಮಲದಿನ್ನಿ, ಲಕ್ಷ್ಮಣ ಸಂಕ್ರಿ, ಅಡಿವೆಪ್ಪ ಅಳಗೋಡಿ, ವೆಂಕಣ್ಣ ಮಳಲಿ, ಕರೆಪ್ಪ ಬಿಸಗುಪ್ಪಿ, ಬಸು ಅಂಗಡಿ, ಕರೆಪ್ಪ ಅಳಗೋಡಿ, ವೆಂಕಟ ಮಹಾರೆಡ್ಡಿ, ಬಾಳೇಶ ಚನ್ನಾಳ, ಕೃಷ್ಣಾ ಮಳಲಿ, ಮಾಳೇಶ ಮಾವಿನಗಿಡದ, ಅಪ್ಪಣ್ಣಾ ಸಂಕ್ರಿ, ರಮೇಶ ದಳವಾಯಿ, ಸುಭಾಶ ಕೌಜಲಗಿ, ರೇವಪ್ಪ ಗುತ್ತಿಗುಳಿ, ವಿ.ಎಚ್.ಮಹಾರೆಡ್ಡಿ, ದಶರಥ ದೇಸಾಯಿ, ಭರಮಪ್ಪ ಪಾಶ್ಚಾಪೂರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Related posts: