RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ನಾಳೆಯಿಂದ 3 ದಿನಗಳ ಕಾಲ ಶ್ರೀ ಪಾಂಡುರಂಗ ರುಕ್ಮಾಯಿ ದೇವರ 34ನೇ ಉತ್ಸವ

ಗೋಕಾಕ:ನಾಳೆಯಿಂದ 3 ದಿನಗಳ ಕಾಲ ಶ್ರೀ ಪಾಂಡುರಂಗ ರುಕ್ಮಾಯಿ ದೇವರ 34ನೇ ಉತ್ಸವ 

ನಾಳೆಯಿಂದ 3 ದಿನಗಳ ಕಾಲ ಶ್ರೀ ಪಾಂಡುರಂಗ ರುಕ್ಮಾಯಿ ದೇವರ 34ನೇ ಉತ್ಸವ

ಗೋಕಾಕ ಜ, 27 ;- ನಗರದ ಮರಾಠಾ ಗಲ್ಲಿಯಲ್ಲಿರುವ ಶ್ರೀ ವಿಠ್ಠಲ-ರುಕ್ಮಾಯಿ ದೇವಸ್ಥಾನದ ಅಡಿಯಲ್ಲಿ ಸ್ಥಾಪನೆಯಾದ ಶ್ರೀ ಪಾಂಡುರಂಗ ರುಕ್ಮಾಯಿ ದೇವರ 34ನೇ ವರ್ಷದ ಉತ್ಸವವು ದಿ. 28 ರಿಂದ 30 ರವರೆಗೆ 3 ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.
ದಿ. 28 ರಂದು ಬೆಳಿಗ್ಗೆ ಕಾಕಡಾರತಿ, ಸಂಜೆ 4 ರಿಂದ 5 ಗಂಟೆಯವರೆಗೆ ಪ್ರವಚನ, 5 ರಿಂದ 5-30 ರವೆರೆಗೆ ನಾಮಜಪ, 5-30 ರಿಂದ 6-30 ರವರೆಗೆ ಹರಿಪಾಠ ಸಂಜೆ 7 ರಿಂದ 9 ರವರೆಗೆ ಕೀರ್ತನೆ ಮತ್ತು ಅಖಂಡ ಜಾಗರಣೆ ನಡೆಯುವುದು.
ದಿ. 29 ರಂದು ಬೆಳಿಗ್ಗೆ ಕಾಕಡಾರತಿ, ಮುಂಜಾನೆ 7 ಗಂಟೆಯಿಂದ 9 ಮತ್ತು 12ನೇಯ ಅಧ್ಯಾಯ ಜ್ಞಾನೇಶ್ವರ ಪಾರಾಯಣ, ಸಂಜೆ 4 ರಿಂದ 5 ರವರೆಗೆ ಪ್ರವಚನ, 5 ರಿಂದ 5-30 ರವರೆಗೆ ನಾಮಜಪ, 5-30 ರಿಂದ 6-30 ರವರೆಗೆ ಹರಿಪಾಠ, ರಾಥ್ರಿ 7 ರಿಂದ 9 ರವರೆಗೆ ಕೀರ್ತನೆ ನಡೆಯುವುದು.
ದಿ. 30 ರಂದು ಬೆಳಿಗ್ಗೆ ಕಾಕಡಾರತಿ, ನಂತರ ದಿಂಡಿ, ಸೋಹಳಾ ನಗರ ಪ್ರದಕ್ಷಿಣೆ ಜರುಗುವುದು. ಮಧ್ಯಾಃನ ಮಹಾಪ್ರಸಾದ ಮತ್ತು ರಾತ್ರಿ ಕಾಲಾ, ಹರಿಕೀರ್ತನೆ ಜರುಗಲಿದೆ.
ಈ ಪ್ರಕಾರ ಅತ್ಯಂತ ವಿಜೃಂಭಣೆಯಿಂದ ಜರುಗಲಿರುವ ಈ ಎಲ್ಲ ಉತ್ಸವ ಕಾರ್ಯಕ್ರಮಗಳಲ್ಲಿ ಸಕಲರು ತಾಳ ಹಾಗೂ ಮೃದಂಗ ಸಹಿತ ಬಾಲಗೋಪಾಲಕರೊಂದಿಗೆ ಆಗಮಿಸಿ ಶ್ರೀ ಪಾಂಡುರಂಗನ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಪಾಂಡುರಂಗ ಸದ್ಭಕ್ತರು ಹಾಗೂ ಸಂತ ಮಂಡಳಿ ಮರಾಠಾ ಗಲ್ಲಿ ಇವರು ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.

Related posts: