ಗೋಕಾಕ:ಪ್ರತಿಯೊಬ್ಬರು ರಾಯಣ್ಣನಂತೆ ನಾಡಪ್ರೇಮಿಗಳಾಗಿ ಬದುಕಬೇಕು: ಡಾ. ನಾವಲಗಿ
ಪ್ರತಿಯೊಬ್ಬರು ರಾಯಣ್ಣನಂತೆ ನಾಡಪ್ರೇಮಿಗಳಾಗಿ ಬದುಕಬೇಕು: ಡಾ. ನಾವಲಗಿ
ಗೋಕಾಕ ಜ 27 : ಇತಿಹಾಸ ಪುಟಗಳಲ್ಲಿಯೆ ರಾಯಣ್ಣನಿಗಿಂತ ಕರೆಕರೆ ರಾಯಣ್ಣ ಸಿಗುವುದು ನಮಗೆ ನಮ್ಮ ಜನಪರದಲ್ಲಿ ಗ್ರಾಮೀಣ ಜನರ ಮನೆ ಮನಗಳಲ್ಲಿ ಸಂಗೋಳ್ಳಿ ರಾಯಣ್ಣನ ನಿಜ ಚರಿತ್ರೆ ದೊರೆಯುತ್ತದೆ. ಬ್ರಿಟಿಷರ ವಿರುದ್ದ ಹೋರಾಡಿದ ವೀರತನದ ಕೆಚ್ಚೆದೆಯ ವೀರ ಸಾಹಸಿ ರಾಯಣ್ಣನನ್ನು ಲಾವಣಿ, ದುಂದುಮೆ, ಗೀಗೀ ಪದಗಳಲ್ಲಿ ಜನಪದ ಕವಿಗಳು ಹಾಡುಕಟ್ಟಿ ಹಾಡಿದ್ದಾರೆ ರಾಯಣ್ಣನ ಶೌರ್ಯ ಸಾಹಸಿಗಳನ್ನು ವಿಶ್ವಕ್ಕೆ ಸಾರಿದ್ದಾರೆಂದು ಜಾನಪದ ತಜ್ಞ ಡಾ.ಸಿ.ಕೆ ವಾವಲಗಿ ಅಭಿಪ್ರಾಯಿಸಿದರು.
ಪಟ್ಟಣದ ಶ್ರೀ ಉದ್ದಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ನಿನ್ನೆ ಜರುಗಿದ ಕ್ರಾಂತಿ ವೀರ ಸಂಗೋಳ್ಳೊ ರಾಯಣ್ಣ ಬಲಿದಾನ ದಿನದ ಸ್ಮರಣೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಗಳಾಗಿ ಮಾತನಾಡುತ್ತ, ಪರಕೀಯರ ದೃಷ್ಠಿಯಲ್ಲಿ ರಾಯಣ್ಣ ಒಬ್ಬ ಅಪರಾಧಿ ದೇಶದ್ರೋಹಿ ಆದರೆ ಅವನ ನಿಜವಾದ ಧ್ಯೆಯೋದ್ದೇಶಗಳನ್ನು ನಮ್ಮವರೇ ಅರ್ಥೈಸಿಕೊಂಡಿದ್ದರೆ ರಾಯಣ್ಣ 35 ನೇ ವಯಸ್ಸಿನಲ್ಲಿಯೇ ಬಲಿದಾನವಾಗುತ್ತಿರಲಿಲ್ಲ ಗಲ್ಲಿಗೇರುತ್ತಿರಲಿಲ್ಲ ಕಿತ್ತೂರು ಸಂಸ್ಥಾನ ಸಂರಕ್ಷಣೆ ಹೊಣೆಗಾರಿಕೆ ಹೊತ್ತ ದೊಡ್ಡ ಬರಮಪ್ಪ ಮನೆತನದ ರಾಯಣ್ಣ ಹುಟ್ಟು ಹೋರಾಟಗಾರ ಸಾವಿರ ಆನೆ-ಒಂಟಿ-ಕುದುರೆಗಳ ಸರದಾರ ನಾಡಿನ ಅತ್ಯಭೀಮಾನಿ ವೀರತನದ ಪ್ರತೀಕವಾಗಿ ದೊರೆತ ರಕ್ತ ಮಾನ್ಯ ಹೊಲಕ್ಕೆ ತೆರೆಗೆ ಕಟ್ಟಲು ನಿರಾಕರಿಸಿದ ಕಾರಣವಾಗಿ ಬ್ರಿಟಿಷರು ನಾಡಿನ ಕೆಲವರನ್ನು ಕೈವಶ ಮಾಡಿಕೊಂಡು ರಾಯಣ್ಣನನ್ನು ಬಲಿ ತೆಗೆದುಕೊಳ್ಳುತ್ತಾರೆ.
ಹಾಲುಮತೆ- ಕುರುಬ ಜನಾಂಗದಲ್ಲಿ ಜನಿಸಿದ್ದರೂ ರಾಯಣ್ಣ ಸರ್ವಧರ್ಮದವರ ಸ್ನೇಹ ಸಂಬಂಧ ಕಟ್ಟಿಕೊಂಡ ಜಾತ್ಯಾತೀತ ಶಕ್ತಿಯಾಗಿದ್ದನು ರಾಣಿ ಚೆನ್ನಮ್ಮನ ಬಲಗೈ ಬಂಟನಾಗಿ ನಾಡಿನ ಸ್ವಾಂತತ್ರ್ಯ ಸ್ವರ್ಗ ಸತ್ತರೆ ವೀರ ಸ್ವರ್ಗ ಗೆದ್ದ ಕಿತ್ತೂರ ತಂದು ಉದ್ದ ಬೀಳುತ್ತೇನೆ : ಕದ್ದ ಮಾತಲ್ಲ ಇಲ್ಲದಿದ್ದರೆ ಬಿದ್ದು ಹೋಗುವೆ ರಣದಲಿ ಎಂಬ ವೀರಾವೇಶದ ರಾಯಣ್ಣನ ನುಡಿಗಳನ್ನು ಲಾವಣಿಕಾರರು ಕಟ್ಟಿ ಹಾಡಿ ಹೊಗಳಿದ್ದಾರೆ ಸಾಮಾನ್ಯ ಮಾನವನಾಗಿ ಹುಟ್ಟಿದ ರಾಯಣ್ಣ ತನ್ನ ವೀರ ಶೂರ ತನದಿಂದ ದೇವತಾ ಮಾನವನಾಗಿ ರೂಪಗೊಳ್ಳುತ್ತಾನೆ. ಅವನಲ್ಲಿಯ ನಾಡಸ್ವಾತಂತ್ರ್ಯ ಪ್ರೇಮ ವೀರ ಪರಾಕ್ರಮ ಕ್ರಾಂತಿಕಾರಿಯ ದಿಟ್ಟತನಗಳನ್ನು ಮುಂದಿನ ಜನಾಂಗ ಅರ್ಥೈಸಿಕೊಂಡು ಅವರ ಜೀವನ ಆದರ್ಶಗಳನ್ನು ರೂಢಿಸಿಕೊಂಡು ಪ್ರತಿಯೊಬ್ಬರು ರಾಯಣ್ಣನಂತೆ ನಾಡಪ್ರೇಮಿಗಳಾಗಿ ಬದುಕಬೇಕೆಂದು ಡಾ. ನಾವಲಗಿ ಹೇಳಿದರು.
ಅಧ್ಯಕ್ಷತೆಯನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ವಹಿಸಿ ಮಾತನಾಡಿ ಸರಕಾರ ರಾಯಣ್ಣನ ಸ್ಮರಣೆಗಾಗಿ ಕ್ರಾತವೀರ ಸಂಗೋಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ರಚಿಸಿ 250 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಇದೇ ವರ್ಷದಿಂದ ಜನೆವರಿ 26 ಸಂಗೋಳ್ಳಿ ರಾಯಣ್ಣ ಬಲಿದಾನ ದಿ ಸ್ಮರಣೋತ್ಸವ ಆಚರಿಸಲು ಮುಂದಾಗಿರುವುದು ಶ್ಲಾಘನೀಯ ಕಾರ್ಯವಾಗಿದ್ದು ಮುಂದಿನ ದಿನಗಳಲ್ಲಿ ರಾಯಣ್ಣ ಬಲಿದಾನ ದಿ ಸ್ಮರಣೋತ್ಸವ ಅರ್ಥಪೂರ್ಣವಾಗಿ ಆಚರಿಸಲಾಗುವುದೆಂದು ಹೇಳಿದರು .
ಕಾರ್ಯಕ್ರಮದ ಅಂಗವಾಗಿ ಸಂಗೋಳ್ಳಿ ರಾಯಣ್ಣ ಯುವಕ ಸಂಘದದವರು ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಗಳಲ್ಲಿ ರಾಐಣ್ಣ ಭಾವಚಿತ್ರ ಹಾಗೂ ಪಂಜಿನಮೆರವಣಿಗೆ ನಡೆಯಿತು ಇದೇ ಗ್ರಾಮ ಪಂಚಾಯತ ಸದಸ್ಯರನ್ನು ಸನ್ಮಾನಿಸಲಾಯಿತು.
ಸಮಾರಂಭವನ್ನು ಎಂ.ಆರ್. ಭೋವಿ ಉದ್ಘಾಟಿಸಿದರು ಅಶೋಕ ಪರುಶೇಟ್ಟಿ,ಶಿವಾನಂದ ಲೋಕನ್ನವರ, ಅಡಿವೆಪ್ಪ ದಳವಾಯಿ ,ಮಹೇಶ ಪಟ್ಟಣಶೆಟ್ಟಿ ,ವೆಂಕಟೇಶ ದಳವಾಯಿ , ಗ್ರಾ.ಪಂ ಅಧ್ಯಕ್ಷ ರಾಯಪ್ಪ ಬಳೋಲದಾರ, ಅಶೋಕ ಉದ್ದಪ್ಪನವರ, ತಾ.ಪಂ ಸದಸ್ಯ ಶಾಂತಪ್ಪ ಹಿರೇಮೇತ್ರಿ, ಬಸವರಾಜ ಲೊಕನ್ನವರ, ಜಕೀರ ಜಮಾದಾರ, ಮುಂತಾದವರು ಉಪಸ್ಥಿತರಿದ್ದರು. ಮಾಲತೇಶ ಸಣ್ಣಕ್ಕಿ ಸ್ವಾಗತಿಸಿದರು ಅವಿನಾಶ ಮೋಡಿ ನಿರೂಪಿಸಿದರು, ರಮೇಶ ಬುದ್ನಿ ವಂದಿಸಿದರು.