RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ನಾಳೆಯಿಂದ 17ನೇ ಸತೀಶ ಶುಗರ್ಸ ಅವಾಡ್ರ್ಸ 2017-18ನೇ ಸಾಲಿನ ಬೆಳಗಾವಿ ಜಿಲ್ಲಾ ಮಟ್ಟದ ಅಂತಿಮ ಹಂತದ ಕ್ರೀಡಾಕೂಟ

ಗೋಕಾಕ:ನಾಳೆಯಿಂದ 17ನೇ ಸತೀಶ ಶುಗರ್ಸ ಅವಾಡ್ರ್ಸ 2017-18ನೇ ಸಾಲಿನ ಬೆಳಗಾವಿ ಜಿಲ್ಲಾ ಮಟ್ಟದ ಅಂತಿಮ ಹಂತದ ಕ್ರೀಡಾಕೂಟ 

ನಾಳೆಯಿಂದ 17ನೇ ಸತೀಶ ಶುಗರ್ಸ ಅವಾಡ್ರ್ಸ 2017-18ನೇ ಸಾಲಿನ ಬೆಳಗಾವಿ ಜಿಲ್ಲಾ ಮಟ್ಟದ ಅಂತಿಮ ಹಂತದ ಕ್ರೀಡಾಕೂಟ

ಗೋಕಾಕ ಜ 30: ಸತೀಶ ಜಾರಕಿಹೊಳಿ ಫೌಂಡೇಶನ್ ಪ್ರಾಯೋಜಕತ್ವದಲ್ಲಿ 17 ನೇ ಸತೀಶ ಶುಗರ್ಸ ಅವಾಡ್ರ್ಸ 2017-18ನೇ ಸಾಲಿನ ಬೆಳಗಾವಿ ಜಿಲ್ಲಾ ಮಟ್ಟದ ಅಂತಿಮ ಹಂತದ ಕ್ರೀಡಾಕೂಟವು ಇದೇ ಜ. 31 ರಿಂದ ಫೆ 3 ರವರೆಗೆ ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕ್ರೀಡಾಕೂಟದ ಸಂಘಟಕರಾದ ಎಸ್.ಎ.ರಾಮಗಾನಟ್ಟಿ ಹಾಗೂ ರಿಯಾಜ ಚೌಗಲಾ ತಿಳಿಸಿದ್ದಾರೆ.
ಮಂಗಳವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದ ಬ್ಯಾಡ್ಮಿಂಟನ್ ಹಾಲ್‍ದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 4 ದಿನಗಳ ಕಾಲ ನಡೆಯುವ ಈ ಜಿಲ್ಲಾ ಮಟ್ಟದ ಕ್ರೀಡಾಕೂಟದ ಉದ್ಘಾಟನೆಯನ್ನು ಬಾಗಲಕೋಟಿಯ ಶ್ರೀ ಬಸವೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಗುರುದತ್ತ ಹಾಗೂ ಕಳೆದ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ವಿಜೇತರುಗಳಾದ ನಮೃತಾ ಶೇಲಾರ ಮತ್ತು ಮಾಳಪ್ಪ ಯಲ್ಲಟ್ಟಿ ಅವರು ನೆರವೇರಿಸಲಿದ್ದಾರೆ.
ಈ ಕ್ರೀಡಾಕೂಟದಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಿಂದ ಸುಮಾರು 5080 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು, ಕ್ರೀಡಾಕೂಟದ ಒಟ್ಟು ಬಹುಮಾನ ಮೊತ್ತ 24 ಲಕ್ಷ 54 ಸಾವಿರ ರೂ, ವಿತರಿಸಲಾಗುವುದು. ಕ್ರೀಡಾಕೂಟದಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ಉಚಿತ ಟೀ-ಶರ್ಟ, ಊಟ-ಉಪಾಹಾರ ಸೇರಿದಂತೆ ಅವಶ್ಯಕ ಸೌಕರ್ಯಗಳನ್ನು ಒದಗಿಸಲಾಗುವುದು.
ಫೆ. 1 ಮತ್ತು 2 ರಂದು ನಗರದ ಸರ್ಕಾರಿ ಕಿರಿಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗುವುದು. ಈ ನಾಲ್ಕು ದಿನ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ತಮ್ಮ ಕ್ರೀಡೆಯನ್ನು ಪ್ರದರ್ಶಿಸಲು ಮಹರ್ಷಿ ವಾಲ್ಮೀಕಿ ಕ್ರೀಡಾಂಗಣವನ್ನು ಸಜ್ಜುಗೊಳಿಸಲಾಗಿದೆ.
ಈ ಜಿಲ್ಲಾ ಮಟ್ಟದ ಅಂತಿಮ ಹಂತದ ಕ್ರೀಡಾಕೂಟದಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗಾಗಿ ಓಟ, ಎಸೆತ, ಜಿಗಿತ, ಖೋಖೋ, ಕಬಡ್ಡಿ, ವ್ಹಾಲಿಬಾಲ್, ಫುಟ್‍ಬಾಲ್, ಧೀರ್ಘಾಂತರ ಓಟ, ಸೈಕ್ಲಿಂಗ್, ಕುಸ್ತಿ, ಧೀರ್ಘಾಂತರ ನಡಿಗೆ, ಯೋಗಾಸನ, ಟೇಕ್ವಾಂಡೋ (ಮುಕ್ತ), ಲೇಜಿಮ್ ಹಾಗೂ ಈಜು ಸ್ಪರ್ಧೆಗಳು ಜರುಗಲಿವೆ ಎಂದು ಸಂಘಟಕರು ತಿಳಿಸಿದರು.

Related posts: