RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸಾಧಕರನ್ನು ಮತ್ತು ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಿ : ಹಿರಿಯ ಸಾಹಿತಿ ಮಹಾಲಿಂಗ ಮಂಗಿ

ಗೋಕಾಕ:ಸಾಧಕರನ್ನು ಮತ್ತು ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಿ : ಹಿರಿಯ ಸಾಹಿತಿ ಮಹಾಲಿಂಗ ಮಂಗಿ 

ಸಾಧಕರನ್ನು ಮತ್ತು ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಿ : ಹಿರಿಯ ಸಾಹಿತಿ ಮಹಾಲಿಂಗ ಮಂಗಿ

ಗೋಕಾಕ ಜ 30: ಸಾಧಕರನ್ನು ಮತ್ತು ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸನ್ಮಾನಿಸುವ ಮೂಲಕ ಅವರಿಗೆ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ಹಿರಿಯ ಸಾಹಿತಿ ಮಹಾಲಿಂಗ ಮಂಗಿ ಹೇಳಿದರು.
ಅವರು ಸೋಮವಾರದಂದು ತಾಲೂಕಿನ ಮರಡೀಮಠದಲ್ಲಿ ಜರುಗಿದ ಶ್ರೀ ಕಾಡಸಿದ್ದೇಶ್ವರ ಸಂಗೀತ ಕಲಾ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಾಯಿಕವಾಡಿ ವಿಠ್ಠಲ ಮಂದಿರದಲ್ಲಿ ಜರುಗಿದ ಭರತನಾಟ್ಯ ನೃತ್ಯಕಲಾ ಶಾಲೆ ಉದ್ಘಾಟನೆ ಮತ್ತು ಸಾಧಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ಎಲೆ ಮರಿಕಾಯಿಯಂತೆ ಸಮಾಜಮುಖಿ ಕಾರ್ಯ ಮಾಡುವ ಪ್ರತಿಭೆಗಳು ಸೇರಿದಂತೆ ಸಾಧಕರನ್ನು ಗುರುತಿಸುವಂತಹ ಮಹತ್ವ ಕಾರ್ಯ ಮಾಡಿರುವ ಸಂಸ್ಥೆಯ ಕೆಲಸ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
ಗೋಕಾಕದ ಜ್ಞಾನ ಮಂದಿರದ ಧರ್ಮದರ್ಶಿನಿ ಸುವರ್ಣಾತಾಯಿ ಹೊಸಮಠ, ಸಾಮಾಜಿಕ ಕಾರ್ಯಕರ್ತ ಎಂ.ಡಿ.ಮಲ್ಲೇಶ, ಲೇಖಕಿ ಪುಷ್ಪಾ ಮುರಗೋಡ, ರಾಜೇಶ್ವರಿ ಒಡೆಯರ, ಸಂಗೀತಾ ದೇವಗಾಂವಿಮಠ, ಸಾಹಿತಿ,ಚಿತ್ರಕಲಾವಿದ ಜಯಾನಂದ ಮಾದರ, ನಾಗರಾಜ ಕರೆನ್ನವರ, ರಂಗಕಲಾವಿದ ಬಿ.ಡಿ.ಕಬಾಡಗಿ, ಈಶ್ವರ ಮಮದಾಪೂರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆ ಮೇಲೆ ರಜನಿ ಜೀರಗ್ಯಾಳ, ಸಂಗೀತಾ ಬನ್ನೂರ, ಬಿ.ಸಿ.ದೇವಗಾಂವಿಮಠ, ಕವಿತಾ ಪಾಟೀಲ ಇದ್ದರು.
ಕಾರ್ಯಕ್ರಮವನ್ನು ವಿಜಯ ನವಲಾಯಿ ಸ್ವಾಗತಿಸಿ,ನಿರೂಪಿಸಿದರು.

Related posts: