RNI NO. KARKAN/2006/27779|Friday, November 22, 2024
You are here: Home » breaking news » ಮೂಡಲಗಿ:ಭಗವಂತನ ಸ್ಮರಣೆ ಮಾಡುವ ಮೂಲಕ ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಿ : ಪುರುಷೋತ್ತಮಾನಂದಪುರಿ ಶ್ರೀ

ಮೂಡಲಗಿ:ಭಗವಂತನ ಸ್ಮರಣೆ ಮಾಡುವ ಮೂಲಕ ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಿ : ಪುರುಷೋತ್ತಮಾನಂದಪುರಿ ಶ್ರೀ 

ಭಗವಂತನ ಸ್ಮರಣೆ ಮಾಡುವ ಮೂಲಕ ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಿ : ಪುರುಷೋತ್ತಮಾನಂದಪುರಿ ಶ್ರೀ

ಮೂಡಲಗಿ ಪೆ 1 : ಈ ಜಗತ್ತಿಗೆ ನಮ್ಮನ್ನು ಜನ್ಮಕೊಟ್ಟು ಪರಿಚಯಿಸಿರುವ ಭಗವಂತನ ಋಣ ತೀರಿಸುವಂತೆ ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಭಕ್ತ ಸಮೂಹಕ್ಕೆ ಕರೆ ನೀಡಿದರು.
ಸಮೀಪದ ಮಸಗುಪ್ಪಿ ಗ್ರಾಮದ ಮಹಾಲಕ್ಷ್ಮೀದೇವಿ ಜಾತ್ರಾ ಮಹೋತ್ಸವದ ದಿವ್ಯ ಸಾನಿಧ್ಯವಹಿಸಿ ಮಾತನಾಡುತ್ತಿದ್ದ ಅವರು, ಪ್ರತಿಯೊಬ್ಬರೂ ಭಗವಂತನ ನಾಮಸ್ಮರಣೆ ಮಾಡುವ ಮೂಲಕ ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ತಿಳಿಸಿದರು.
ಈ ಜಗತ್ತಿನಲ್ಲಿ ಮಾನವರಾಗಿ ಜನ್ಮ ಪಡೆದಿರುವುದು ನಮ್ಮೆಲ್ಲರ ಭಾಗ್ಯ. ಬ್ರಹ್ಮಾಂಡವನ್ನು ಸೃಷ್ಟಿ ಮಾಡಿರುವ ಭಗವಂತನ ಕೃಪೆ ಸಕಲ ಜೀವರಾಶಿಗಳ ಮೇಲಿದೆ. ಭಕ್ತಿ ಭಾವದ ಮೂಲಕ ಭಗವಂತನನ್ನು ನಾವೆಲ್ಲರೂ ಸ್ಮರಿಸಿಕೊಳ್ಳಬೇಕು. ಒಳ್ಳೆಯ ಆಚಾರ-ವಿಚಾರ ಸದ್ಗುಣಗಳನ್ನು ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮ ಸಂಸ್ಕಾರವಂತರಾಗಿ ಬದುಕುವಂತೆ ಸ್ವಾಮೀಜಿಯವರು ಹೇಳಿದರು.
ಅರಭಾವಿ ಮತಕ್ಷೇತ್ರದಲ್ಲಿ ಎಲ್ಲ ಜನಾಂಗಗಳ ಮನಸ್ಸುಗಳನ್ನು ಒಂದುಗೂಡಿಸಿ ಸರ್ವ ಸಮಾಜದ ಹಿತಕ್ಕೆ ಅನುಗುಣವಾಗಿ ಕೆಲಸ ಮಾಡುತ್ತಿರುವ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯಗಳನ್ನು ಗುಣಗಾನ ಮಾಡಿದ ಅವರು, ಯಾವುದೇ ಜನಾಂಗದ ಕಾರ್ಯವಿದ್ದರೆ ಎಲ್ಲ ಜನಾಂಗದವರನ್ನು ಒಟ್ಟುಗೂಡಿಸಿ ಹೃದಯ-ಹೃದಯಗಳನ್ನು ಬೆಸೆಯುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವೆಂದರು. ಎಲ್ಲ ವರ್ಗಗಳ ಪ್ರೀತಿ-ವಿಶ್ವಾಸ ಗಳಿಸಿರುವ ಬಾಲಚಂದ್ರ ಅವರು, ಮುಂದಿನ ದಿನಗಳಲ್ಲಿ ಶಾಸಕ-ಸಚಿವರಾಗಿಯೂ ಜನಸೇವೆ ಮಾಡಲಿಕ್ಕೆ ಆಶೀರ್ವಾದ ಮಾಡುವುದಾಗಿ ಶ್ರೀಗಳು ಹೇಳಿದರು.
ಸಾನಿಧ್ಯವನ್ನು ಸುಣಧೋಳಿಯ ಶಿವಾನಂದ ಸ್ವಾಮಿಗಳು ವಹಿಸಿದ್ದರು.
ಅಧ್ಯಕ್ಷತೆವಹಿಸಿದ್ದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿ, ತಂದೆ-ತಾಯಿಯನ್ನು ಆದರಿಸಿ ಗೌರವಿಸುವ ಮೂಲಕ ಹೆತ್ತವರ ಋಣ ತೀರಿಸಲು ಮುಂದೆ ಬರಬೇಕು. ಶಿಕ್ಷಣವಂತರಾಗಿ ಸಮಾಜದ ಸ್ವಾಸ್ತ್ಯ ಕಾಪಾಡಬೇಕು. ಭಾರತ ವೈವಿದ್ಯತೆಯಿಂದ ಕೂಡಿರುವ ಏಕಮೇವ ರಾಷ್ಟ್ರವಾಗಿದ್ದು, ಕೋಮು ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ. ಸಮಾಜದ ಶ್ರೇಯೋಭಿವೃದ್ಧಿಯಲ್ಲಿ ಮಠಾಧೀಶರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಮಸಗುಪ್ಪಿ ಗ್ರಾಮದ ಅಭಿವೃದ್ಧಿಗೆ ಇಲ್ಲಿಯವರೆಗೆ ಪ್ರಾಮಾಣಿಕವಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಹದಗೆಟ್ಟ ರಸ್ತೆಗಳನ್ನು ಸುಧಾರಣೆ ಮಾಡಲಾಗುತ್ತಿದೆ. ರೈತರ ಹೊಲದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.


ತಪಸಿಯ ಸುರೇಶ ಮಹಾರಾಜ, ಬಾಳಪ್ಪ ಕೊಳವಿ, ಕಲ್ಲಪ್ಪ ಉಪ್ಪಾರ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಅಪ್ಪಯ್ಯಪ್ಪ ಬಡ್ನಿಂಗಗೋಳ, ಸಾತಪ್ಪ ಕೊಳದುರ್ಗಿ, ಮುತ್ತೆಪ್ಪ ಕುಳ್ಳೂರ, ಸುರೇಶ ಪೂಜೇರಿ, ಸಂಜು ಹೊಸಕೋಟಿ, ಭರಮಪ್ಪ ಆಶಿರೊಟ್ಟಿ, ಬಸವರಾಜ ಭುಜನ್ನವರ, ಅಶೋಕ ಮಳಲಿ, ಭೀಮಶಿ ಬಡ್ನಿಂಗಗೋಳ, ಭರಮಪ್ಪ ಗಂಗನ್ನವರ, ಪತ್ರಯ್ಯಾ ಚರಂತಿಮಠ, ಮುಂತಾದವರು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಅಂಬೇಡ್ಕರ ಭವನ ಉದ್ಘಾಟಿಸಿದರು.

Related posts: