RNI NO. KARKAN/2006/27779|Friday, December 13, 2024
You are here: Home » breaking news » ಬೆಳಗಾವಿ:ಡಾ. ಜಿ. ಪರಮೇಶ್ವರ ಗೆ ಘೇರಾವ್: ಅಜಂಲಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

ಬೆಳಗಾವಿ:ಡಾ. ಜಿ. ಪರಮೇಶ್ವರ ಗೆ ಘೇರಾವ್: ಅಜಂಲಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ 

ಡಾ. ಜಿ. ಪರಮೇಶ್ವರ ಗೆ ಘೇರಾವ್: ಅಜಂಲಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

ಬೆಳಗಾವಿ ಫೆ 1 : ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಳಗಾವಿಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರಿಗೆ ಇಂದು ಕಾಂಗ್ರೆಸ್ ಕಾರ್ಯಕರ್ತರು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಘೇರಾವ ಹಾಕಿದರು.

ಖಾನಾಪೂರ ತಾಲೂಕು ಕಾಂಗ್ರೆಸ್ ಕಾರ್ಯಕರ್ತರು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. 

ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸಮಾವೇಶ ಎಂದು ಹೇಳಿಕೊಂಡು ಡಾ. ಅಂಜಲಿ ನಿಂಬಾಳಕರ ಅವರ ಮನೆ ಎದುರು ಖಾಸಗಿ ಕಾರ್ಯಕ್ರಮ ಮಾಡಿಕೊಳ್ಳಲಾಗುತ್ತಿದೆ. ಇದು ಹೇಗೆ ಕಾಂಗ್ರೆಸ್ ಪಕ್ಷದ ಸಮಾವೇಶ ಆಗುತ್ತದೆ ಎಂದು ಪ್ರಶ್ನಿಸಿದ ಕಾರ್ಯಕರ್ತರು ಡಾ. ಅಂಜಲಿ ನಿಂಬಾಳಕರ ಕಾಂಗ್ರೆಸ್ ಸಮಾವೇಶ ಆಯೋಜನೆ ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ಹಾಗೂ  ಕಾರ್ಯಕರ್ತರನ್ನು ಆಹ್ವಾನಿಸದೇ ಖಾನಾಪುರದ  ತಮ್ಮ ಮನೆಯ ಎದುರು ಹಳದಿ ಕುಂಕುಮ ಕಾರ್ಯಕ್ರಮ ಆಯೋಜಿಸಿದ್ದು ಸರಿಯಲ್ಲ ಎಂದು ಆರೋಪಿಸಿದ್ದಾರೆ.

 

ಕಳೆದ‌ ಬಾರಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಅಧಿಕೃತ ಕಾಂಗ್ರೆಸ್ ಅಭ್ಯರ್ಥಿ ರಫೀಕ ಖಾನಾಪುರಿ ಸೋಲಿಗೆ ಕಾರಣರಾದ  ನಿಂಬಾಳ್ಕರ ಅವರಿಗೆ ಈ ಬಾರಿ ಟಿಕೇಟ್ ನೀಡಬಾರದೆಂದು ಆಗ್ರಹಿಸಿದ್ದಾರೆಂದು ತಿಳಿದು ಬಂದಿದೆ .

ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಾಬುಲಾಲ ಬಾಗವಾನ, ಮೇಘಾ ದೇಸಾಯಿ, ನಸೀಮ ಎಂ. ಕಿತ್ತೂರ, ಪ್ರಕಾಶ ಪಾಟೀಲ, ಮುನಾಫ್ ಸಣದಿ, ಶಂಕರಗೌಡ ಪಾಟೀಲ, ಲಿಯಾಖಾತ ಉಚನ್ನವರ ಗೀತಾ ಪೂಜಾರ, ಪಾಂಡುರಂಗ ಮಿಟಗಾರ, ಚಂದ್ರಗೌಡ ಪಾಟೀಲ, ಮಾರುತಿ ಸತ್ತೆನ್ನವರ, ಶಿವು ಗೋಶೆನಟ್ಟಿ ಇತರರು ಉಪಸ್ಥಿತರಿದ್ದರು.

 

Related posts: