RNI NO. KARKAN/2006/27779|Saturday, November 23, 2024
You are here: Home » breaking news » ಗೋಕಾಕ:ಹಿಂದುತ್ವದ ಮೂಲಕ ದೇಶ ಕಟ್ಟಲು ಸಾಧ್ಯವಿಲ್ಲ ಭಾವೈಕ್ಯೆತೆಯಿಂದ ದೇಶ ಕಟ್ಟಲು ಸಾಧ್ಯ: ಪ್ರಭುಚೆನ್ನಬಸವ ಮಹಾಸ್ವಾಮಿಜೀ ಅಭಿಮತ

ಗೋಕಾಕ:ಹಿಂದುತ್ವದ ಮೂಲಕ ದೇಶ ಕಟ್ಟಲು ಸಾಧ್ಯವಿಲ್ಲ ಭಾವೈಕ್ಯೆತೆಯಿಂದ ದೇಶ ಕಟ್ಟಲು ಸಾಧ್ಯ: ಪ್ರಭುಚೆನ್ನಬಸವ ಮಹಾಸ್ವಾಮಿಜೀ ಅಭಿಮತ 

ಹಿಂದುತ್ವದ ಮೂಲಕ ದೇಶ ಕಟ್ಟಲು ಸಾಧ್ಯವಿಲ್ಲ ಭಾವೈಕ್ಯೆತೆಯಿಂದ ದೇಶ ಕಟ್ಟಲು ಸಾಧ್ಯ: ಪ್ರಭುಚೆನ್ನಬಸವ ಮಹಾಸ್ವಾಮಿಜೀ ಅಭಿಮತ

ಗೋಕಾಕ ಫೆ 1: ಹಿಂದುತ್ವದ ಮೂಲಕ ದೇಶವನ್ನು ಕಟ್ಟಲು ಸಾಧ್ಯವಿಲ್ಲ ಭಾವೈಕ್ಯೆತೆಯಿಂದ ದೇಶ ಕಟ್ಟಲು ಸಾಧ್ಯವೆಂದು ಪರಮಪೂಜ್ಯ ಶ್ರೀ ಮ.ನಿ.ಪ್ರ ಪ್ರಭುಚೆನ್ನಬಸವ ಮಹಾಸ್ವಾಮಿಗಳು ಹೇಳಿದರು

ಅವರು ನಗರದ ವಾಲ್ಮೀಕಿ ವೃತ್ತದಲ್ಲಿರುವ ಶ್ರೀ ಚೆನ್ನಬಸವ ವಿದ್ಯಾಪೀಠ ಬಿಸಿಎ ಮಹಾವಿದ್ಯಾಲಯದ ಆವರಣದಲ್ಲಿ ಶ್ರೀ ಶೂನ್ಯ ಸಂಪಾದನಮಠದಿಂದ ಕಾಯಕಯೋಗಿ ಲಿಂಗೈಕ ಪೂಜ್ಯ ಶ್ರೀ ಬಸವ ಮಹಾಸ್ವಾಮಿಗಳವರ ಹದಿಮೂರನೆಯ ಪುಣ್ಯಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಶರಣ ಸಂಸ್ಕೃತಿ ಉತ್ಸವದ ಭಾವೈಕ್ಯೆತೆ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು

ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯುವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವಾಗ ಶೂನ್ಯ ಸಂಪಾದನಾ ಮಠದ ಪೂಜ್ಯರು ಭಾವೈಕ್ಯೆತೆ ಸಾರುವ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲ ಸಮಾಜದವರನ್ನು ಒಗ್ಗೂಡಿಸುತ್ತಿರುವುದು ಕಾರ್ಯ ಎಲ್ಲರಿಗೂ ಮಾದರಿಯಾಗಿದೆ

ನಗರದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರನ್ನು ಸತ್ಕರಿಸಿ ಗೌರವಿಸುತ್ತಿರುವುದು

ಶ್ರಿಂಗೇರಿ ಮಠಕಟ್ಟಲು ಟೀಪು ಸುಲ್ತಾನರಂತಹ ಮಹಾನ ಪುರುಷ್ಯರು ಸಾಕಷ್ಕು ಶ್ರಮ ವಹಿಸಿ ಭಾವೈಕ್ಯೆತೆ ಸಾರಿದ್ದು ಈ ದೇಶದ ಇತಿಹಾಸ ಆದರೆ ಕೆಲ ಪಟ್ಟಬದ್ದಹಿತ್ತಾಶಕ್ತಿಗಳು ಇಂದು ಇತಿಹಾಸ ತಿರುಚುವ ಕಾರ್ಯಮಾಡುತ್ತಿರುವುದು ನಮ್ಮ ಭಾರತದ ದೌಭಾಗ್ಯವಾಗಿದೆ . ಜಾತಿ , ಜಾತಿ ಧರ್ಮ ಧರ್ಮಗಳ ಹೆಸರಿನಲ್ಲಿ ಜಗಳವಾಡುವುದನ್ನು ಬಿಟ್ಟು ಕಂದಾಚಾರ ಮೂಢನಂಬಿಕೆಗಳನ್ನು ಬದಿಗೋತ್ತಿ ಬುದ್ದ ,ಬಸವ ಅಂಬೇಡ್ಕರ್ ರಂತಹ ಮಹಾನ ಪುರುಷರು ನಡೆದು ಬಂದ ದಾರಿಯಲ್ಲಿ ನಾವಿಂದು ಸಾಗಬೇಕಾಗಿದೆ. ಕತ್ತರಿಯಾಗಿ ಎಲ್ಲ ಸಂಬಂಧಗಳನ್ನು ಕತ್ತರಿಸದೆ ಸೂಜಿಯಾಗಿ ಎಲ್ಲವನ್ನು ಬೇಸೆಯುವ ಕಾರ್ಯ ಈ ದೇಶದಲ್ಲಿ ಆಗಬೇಕಾಗಿದೆ ಎಲ್ಲ ದೃಷ್ಟ ಶಕ್ತಿಗಳನ್ನು ಮೇಟ್ಟಿ ನಿಂತು ಇಂದು ಸದೃಢ ಭಾರತ ನಿರ್ಮಿಸುವತ್ತ ಎಲ್ಲರೂ ಕೈ ಜೋಡಿಸಬೇಕಾಗಿದೆ ಎಂದು ಅಥಣಿಯ ಪ್ರಭುಚೆನ್ನಬಸವ ಮಹಾಸ್ವಾಮಿಗಳು ಹೇಳಿದರು

ಮುಗಳಖೋಡದ ಪರಮಪೂಜ್ಯ ಡಾ.ಷಡಕ್ಷರಿಶಿವಯೋಗಿ ಮುರುಘರಾಜೇಂದ್ರ ಮಹಾಸ್ವಾಮಿಗಳು , ಬೆಂಗಳೂರಿನ ಹಜರತ್ ಮೌಲಾನಾ ಪಿ.ಎಮ್.ಮುಜಮ್ಮಿಲಸಾಬ ಸಾನಿಧ್ಯ ವಹಿಸಿ ಆರ್ಶಿವಚನ ನೀಡಿದರು . ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು . ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈಯುತ್ತಿರುವ ಗಣ್ಯರನ್ನು ಸತ್ಕರಿಸಿ ಗೌರವಿಸಲಾಯಿತು

ವೇದಿಕೆಯಲ್ಲಿ ಸ್ಥಳೀಯ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು , ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ , ನಗರಸಭೆ ಅಧ್ಯಕ್ಷ ತಳದಪ್ಪಾ ಅಮ್ಮಣಗಿ,   ಶರಣ ಸಂಸ್ಕೃತಿ ಉತ್ಸವ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಈಟಿ , ಬೆಳಗಾವಿಯ ಇಮ್ತಿಯಾಜ ಸೌದಾಗರ, ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಎಸ್.ಕೆ.ಮಠದ ನಿರೂಪಿಸಿದರು . ಕೊನೆಯಲ್ಲಿ ಶಿಕ್ಷಣ ರಮೇಶ ಮಿರ್ಜಿ ವಂದಿಸಿದರು .ತದನಂತರ ಅಮ್ಮಾಜಿ , ನಾಟ್ಯಾಂಜಲಿ ನೃತ್ಯ ತಂಡ , ವಿವಿಧ ಜಾನಪದ ಕಲಾ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು

Related posts: