RNI NO. KARKAN/2006/27779|Friday, December 13, 2024
You are here: Home » breaking news » ಖಾನಾಪುರ:ಅಂಜಲಿ ನಿಂಬಾಳ್ಕರನಿಂದ ಕರವೇ ಕಾರ್ಯಕರ್ತರಿಗೆ ಅವಮಾನ :ದಶರಥ ಬನೋಶಿ ಆಕ್ರೋಶ

ಖಾನಾಪುರ:ಅಂಜಲಿ ನಿಂಬಾಳ್ಕರನಿಂದ ಕರವೇ ಕಾರ್ಯಕರ್ತರಿಗೆ ಅವಮಾನ :ದಶರಥ ಬನೋಶಿ ಆಕ್ರೋಶ 

ಅಂಜಲಿ ನಿಂಬಾಳ್ಕರನಿಂದ ಕರವೇ ಕಾರ್ಯಕರ್ತರಿಗೆ ಅವಮಾನ :ದಶರಥ ಬನೋಶಿ ಆಕ್ರೋಶ

ಖಾನಾಪುರ ಫೆ 2: ಕದಂಬರ ಎರಡನೇ ರಾಜಧಾನಿಯಾದ ಖಾನಾಪುರ ತಾಲೂಕಿನ ಹಲಶಿ ಗ್ರಾಮದ ಕದಂಬೋತ್ಸವದ ಆಚರಣೆ ಕುರಿತು ಕೆಪಿಸಿಸಿ ಅಧ್ಯಕ್ಷರಾದ ಡಾ.ಜಿ ಪರಮೇಶ್ವರ ಅವರಿಗೆ ಮನವಿ ನೀಡಲು ಹೋದಾಗ ಬಾಲಭವನ ಅಧ್ಯಕ್ಷೆ ಡಾ.ಅಂಜಲಿ ನಿಂಬಾಳ್ಕರ ಅವರು ಕರವೇ ಕಾರ್ಯಕರ್ತರನ್ನು ವೇದಿಕೆಗೆ ಬಿಡಬೇಡಿ ಎಂದು ಹೇಳಿ ಅವಮಾನ ಮಾಡಿದ್ದಾರೆಂದು ಕರವೇ ಪ್ರಧಾನ ಕಾರ್ಯದರ್ಶಿ ದಶರಥ ಬನೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಪಟ್ಟಣದಲ್ಲಿರುವ ದುರ್ಗಾನಗರ ಸ್ಥಳದಲ್ಲಿ ಗುರುವಾರ ದಿನದಂದು ಡಾ.ಅಂಜಲಿ ನಿಂಬಾಳ್ಕರ ಇವರಿಂದ ನೇತೃತ್ವದಲ್ಲಿ ಹಮ್ಮಿಕೊಂಡಂತಹ ಕಾಂಗ್ರೆಸ ಸಮ್ಮೇಳನ ಮತ್ತು ಅರಿಶಿಣ ಕುಂಕುಮ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಎಂದು ಪತ್ರಿಕಾ ಮಾದ್ಯಮದವರಿಗೆ ಮಾಹಿತಿ ನೀಡಿದರು.

ಕಳೆದ ಸುಮಾರು ವರ್ಷಗಳಿಂದ ಹಲಶಿ ಕದಂಬೋತ್ಸವ ಕಾರ್ಯಕ್ರಮಕ್ಕೆ ಸರಕಾರ ಅನುದಾನ ಬಿಡುಗಡೆ ಮಾಡಿ ಆಚರಣೆಗೆ ಅನುವು ಮಾಡಿಕೊಡುತ್ತಿತ್ತು ಆದರೆ ಕಳೆದೆರಡು ವರ್ಷಗಳಿಂದ ಸರಕಾರ ಆಚರಣೆಗೆ ಅನುದಾನ ಬಿಡುಗಡೆ ಮಾಡದೆ ಇರುವುದರಿಂದ ಆಚರಣೆ ನಡೆಯುತ್ತಿಲ್ಲ. ಆದ್ದರಿಂದ ಕದಂಬೋತ್ಸವಕ್ಕೆ ಅನುದಾನ ಕೊಟ್ಟು ಚಾಲನೆ ಕೊಟ್ಟವರು ನಿಮ್ಮ ಸರಕಾರ, ಆದರೆ ಈಗ ಅನುದಾನ ನೀಡದೆ ಕದಂಬೋತ್ಸವ ಆಚರಣೆಗೆ ಹಿಂದೆಟ್ಟು ಹಾಕಲಾಗುತ್ತಿದೆ ಆದ ಕಾರಣ ಇಂದು ನಾವೂ ಇಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಾ.ಜಿ ಪರಮೇಶ್ವರ ರವರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ನೀಡಲು ಬಂದಿದ್ದೆವು, ಮನವಿ ನೀಡಲು ಅನುಮತಿ ನೀಡಿ ಎಂದಾಗ ಜವಾಬ್ದಾರಿ ಸ್ಥಾನದಲ್ಲಿರುವ ಡಾ.ಅಂಜಲಿ ನಿಂಬಾಳ್ಕರ ಖಾನಾಪುರ ತಾಲೂಕಿನ ಕರವೇ ಕಾರ್ಯಕರ್ತರನ್ನು ವೇದಿಕೆಗೆ ಬಿಡಬೇಡಿ ಎಂದು ತಾಲೂಕಿನ ಸಮಸ್ತ ಕನ್ನಡಾಭಿಮಾನಿಗಳಿಗೆ ಅವಮಾನ ಮಾಡಿದ್ದಾರೆ. ಆದ್ದರಿಂದ ಮುಂಬರುವ ದಿನಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕನ್ನಡಗರೆಲ್ಲರೂ ಸೇರಿಕೊಂಡು ತಕ್ಕ ಪಾಠ ಕಲಿಸುತ್ತೆವೆಂದು ಎಚ್ಚರಿಕೆಯ ಮಾತನ್ನು ಹೇಳಿದರು.

ಈ ಸಂಧರ್ಭದಲ್ಲಿ ಕರವೇ ಅಧ್ಯಕ್ಷ ಆರೋಗ್ಯಪ್ಪ ಪಾದನಕಟ್ಟಿ, ಉಪಾಧ್ಯಕ್ಷ ವಿಠ್ಠಲ ಹಿಂಡಲಕರ, ಹಲಶಿ ಗ್ರಾಮದ ವಾಸುದೇವ ತಳವಾರ, ಪರುಶರಾಮ ಮಾದರ, ರಾಜು ಮಾದರ ಹಾಗೂ ಕಾರ್ಯಕರ್ತರು ಹಾಜರಿದ್ದರು.

Related posts: