RNI NO. KARKAN/2006/27779|Wednesday, November 6, 2024
You are here: Home » breaking news » ಗೋವಾ :ಜಾಗೃತಿಕರಣದ ಯುಗದಲ್ಲಿ ಸಿಲುಕಿ ಮಾತೃಭಾಷೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ : ಬಸವರಾಜ ಖಾನಪ್ಪನವರ

ಗೋವಾ :ಜಾಗೃತಿಕರಣದ ಯುಗದಲ್ಲಿ ಸಿಲುಕಿ ಮಾತೃಭಾಷೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ : ಬಸವರಾಜ ಖಾನಪ್ಪನವರ 

ಜಾಗೃತಿಕರಣದ ಯುಗದಲ್ಲಿ ಸಿಲುಕಿ ಮಾತೃಭಾಷೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ : ಬಸವರಾಜ ಖಾನಪ್ಪನವರ

ವಾಸ್ಕೋ (ಗೋವಾ) ಫೆ-02 : ಹೊರ ನಾಡಿನಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುತ್ತಿರುವ ಯಲ್ಲಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕ ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು. ಅವರು ಕಾಳಿದಾಸ ಅಸೋಶಿಯನ್ಸ್ ಶ್ರೀ ಯಲ್ಲಾಲಿಂಗೇಶ್ವರ ಶಾರದಾ ಮಂದಿರ ಪ್ರೌಢಶಾಲೆ ಜುವಾರಿ ನಗರ ವಾಸ್ಕೋ ಅವರು ಹಮ್ಮಿಕೊಂಡಿದ್ದ 25ನೇ ವರ್ಷದ ರಜತ ಮಹೋತ್ಸವ ಸಮಾರಂಭದ ಅತಿಥಿ ಸ್ಥಾನವನ್ನು ಅಲಂಕರಿಸಿದ ಮಾತನಾಡುತ್ತಿದ್ದರು.

ಜಾಗೃತಿಕರಣ ಮತ್ತು ವೈಭವೀಕರಣದ ಇಂದಿನ ಯುಗದಲ್ಲಿ ಮಾತೃಭಾಷೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ. ದೇಶದ ಬೇರೆ ಬೇರೆ ರಾಜ್ಯದ ಇಂದು ಸ್ಥಳೀಯ ಭಾಷೆಗಳನ್ನು ಉಳಿಸಿ ಬೆಳೆಸಲು ಹರಸಾಹಸ ಪಡುತ್ತಿರುವ ಸಂದರ್ಭದಲ್ಲಿ ಗೋವಾ ರಾಜ್ಯದಲ್ಲಿ ಕಾಳಿದಾಸ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿ ಗೋವಾ ರಾಜ್ಯಕ್ಕೆ ವಲಸೆ ಬಂದ ಕನ್ನಡಿಗರ ಮಕ್ಕಳಿಗೆ ಮಾತೃಭಾಷೆಯಲ್ಲಿ ವಿದ್ಯಾದಾನ ಮಾಡುತ್ತಿರುವ ಎಲ್ಲ ಶಿಕ್ಷಕ ಬಳಗ ಅಭಿನಂದನಾರ್ಹರು. ಕನ್ನಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರತಿತಿಂಗಳು ಮಾಶಾಸನ ನೀಡಬೇಕು. ಬೈನಾ ಪ್ರದೇಶದಲ್ಲಿ ಕನ್ನಡಿಗರ ಮನೆ ತೆರವುಗೊಳಿಸಿದ್ದರಿಂದ ಶಾಲಾ ದಾಖಲಾತಿ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿಗೆ ಕುಸಿದಿರುವುದರಿಂದ ಬರುವ ಶೈಕ್ಷಣಿಕ ವರ್ಷದಲ್ಲಿ ಶಾಲೆಯ ಎಲ್ಲ ಗುರುಬಳಗ ಗೋವಾದಲ್ಲಿ ನೆಲೆಸಿರುವ ಪ್ರತಿಯೊಬ್ಬ ಕನ್ನಡಿಗರ ಮನೆಗೆ ಹೋಗಿ ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ದಾಖಲಿಸಬೇಕೆಂದು ದಾಖಲಾತಿ ಆಂದೋಲನ ನಡೆಸಬೇಕು ಈ ಆಂದೋಲನ ಯಶಸ್ವಿಗೆ ಕರವೇ ಸುಮಾರು 15 ದಿನಗಳ ಕಾಲ ಗೋವಾ ರಾಜ್ಯದಲ್ಲಿಯೇ ವಾಸ್ತವ್ಯ ಹೂಡಿ ಎಲ್ಲ ರೀತಿಯ ಸಹಾಯ ನೀಡಲು ಸಿದ್ದವಿದೆ ಎಂದು ಖಾನಪ್ಪನವರ ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗೋವಾ ಕೊರ್ತಾಲೀಯಂ ವಿಧಾನಸಭಾ ಕ್ಷೇತ್ರದ ಶಾಸಕಿ ಅಲಿನಾ ಸಾಲ್ಡಾನಾ ಉದ್ಯೋಗ ಅರಿಸಿ ಗೋವಾ ರಾಜ್ಯಕ್ಕೆ ವಲಸೆ ಬಂದಿರುವ ಕನ್ನಡಿಗರ ಮಕ್ಕಳಿಗೆ ಗೋವಾ ರಾಜ್ಯದಲ್ಲಿ ತಮ್ಮ ಮಾತೃಭಾಷೆಯಲ್ಲಿಯೇ ಶಿಕ್ಷಣ ದೊರಕಿಸಲು ಗೋವಾ ಸರಕಾರ ಕಳೆದ ಹಲವು ದಶಕಗಳಿಂದ ಸಹಾಯ, ಸಹಕಾರ, ನೀಡುತ್ತಿದೆ. ಕನ್ನಡ ಶಿಕ್ಷಣವನ್ನು ಪ್ರೋತ್ಸಾಹಿಸುತ್ತದೆ. ಬರುವ ದಿನಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಿ ಕನ್ನಡ ಮಾಧ್ಯಮ ಮಕ್ಕಳನ್ನು ಪ್ರೋತ್ಸಾಹಿಸಲಾಗುವುದೆಂದು ಹೇಳಿದರು. 

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕೆ. ಮುರಳಿಧರ, ಹಂಪಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಮಲ್ಲಿಕಾ ಘಂಟಿ ಮಾತನಾಡಿ ಗೋವಾದ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಕರ್ನಾಟಕದ ಬದಲು ಗೋವಾ ರಾಜ್ಯದಲ್ಲಿಯೇ ಪರೀಕ್ಷಾ ಕೇಂದ್ರವನ್ನು ತೆರೆದು ಪರೀಕ್ಷೆ ಬರೆಸಲು ಸರ್ಕಾರ ಮಟ್ಟದಲ್ಲಿ ಪ್ರಯತ್ನಿಸಲಾಗುವುದೆಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕಾಳಿದಾಸ ಶಾಲಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಾಯ್.ಆರ್. ಬೆಳಗಲ್ ಅವರನ್ನು ಕರವೇ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು.

ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿರುವ ಬಸವರಾಜ ಖಾನಪ್ಪನವರ

ಕಾರ್ಯಕ್ರಮವನ್ನು ಶಿಕ್ಷಕ ಸುರೇಶ ಬೆಂಡೆ ಮತ್ತು ವಿಜಯಲಕ್ಷ್ಮೀ ಗೌಡರ ನಿರೂಪಿಸಿದರು. ಕೊನೆಯಲ್ಲಿ ಶಿಕ್ಷಕ ಉದಯ ಭಗವತಿ, ಶ್ರೀಮತಿ ವಿದ್ಯಾ ಸಾವಂತ ವಂದಿಸಿದರು.
ಕಾರ್ಯಕ್ರಮದಲ್ಲಿ ಗೋವಾ ಕ್ರೀಡಾ ಇಲಾಖೆಯ ಸಹಾಯ ನಿರ್ದೇಶಕ ಆರ್.ವ್ಹಿ. ಕಂಬಾರ, ಗಿರೀಶ ಪಿಳ್ಳೆ, ಧನಪಾಲ ಸ್ವಾಮಿ, ಸುಭಾಸ ಕುಲಕರ್ಣಿ, ಲಕ್ಕಿ ಸಿಂಗ್, ಶರಣ ಎಸ್. ಮೇಟಿ ಕರವೇ ಪದಾಧಿಕಾರಿಗಳಾದ ಸಾಧಿಕ ಹಲ್ಯಾಳ, ನಿಜಾಮ ನದಾಫ, ಮುಗಟ ಪೈಲವಾನ್ ಉಪಸ್ಥಿತರಿದ್ದರು.
ತದನಂತರ ಶಾಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

Related posts: