ಬೆಳಗಾವಿ:ಮಹದಾಯಿ ವಿಚಾರ : ಮಹಾ ರಾಜ್ಯದ ಗೃಹ ಸಚಿವರಿಂದ ಉದ್ದಟತನ ಹೇಳಿಕೆ
ಮಹದಾಯಿ ವಿಚಾರ : ಮಹಾ ರಾಜ್ಯದ ಗೃಹ ಸಚಿವರಿಂದ ಉದ್ದಟತನ ಹೇಳಿಕೆ
ಬೆಳಗಾವಿ ಫೆ 3: ನಗರಕ್ಕೆ ಬೇಟ್ಟಿ ನೀಡೌರುವ ಮಹಾರಾಷ್ಟ್ರ ರಾಜ್ಯದ ಗೃಹ ಸಚಿವ ದೀಪಕ ಕೆಸರಕರ್ ಮಹಾದಾಯಿ ನೀರಿನ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ
ಗೋವಾಕ್ಕೆ ಮಹಾರಾಷ್ಟ್ರದ ನೀರು ಹರಿತಿದೆ. ಮಹದಾಯಿ ಇರೋದು ಖಾನಾಪುರದಲ್ಲಿ. ಮಹಾಜನ್ ವರದಿ ಪ್ರಕಾರ ಖಾನಾಪುರ ಮಹಾರಾಷ್ಟ್ರಕ್ಕೆ ಸೇರಿದೆ. ನಾವು ಮಹದಾಯಿ ವಿಚಾರದಲ್ಲಿ ಗೋವಾ ಬೇಡಿಕೆ ಆಲಿಸಬೇಕು. ಅಲ್ಲದೆ, ಗೋವಾ ಚಿಕ್ಕ ರಾಜ್ಯವಿದೆ ಎಂದು ಪರೋಕ್ಷವಾಗಿ ಗೋವಾ ಪರ ಬ್ಯಾಟಿಂಗ್ ಮಾಡಿದ್ದಾರೆ.
ಕರ್ನಾಟಕ ಮಹಾಜನ್ ವರದಿ ಅಂಗೀಕರಿಸಿದೆ. ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಇನ್ನು ಗಡಿ ವಿವಾದ, ಮಹದಾಯಿ ವಿವಾದ ನ್ಯಾಯಾದೀಕರಣದಲ್ಲಿವೆ ಎಂದು ತಿಳಿಸಿದ್ದಾರೆ.
ಬೆಳಗಾವಿ ಸೇರಿದಂತೆ 856 ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಬೇಕು:
ಬೆಳಗಾವಿ ನಗರ ಸೇರಿದಂತೆ ಗಡಿಭಾಗದ 856 ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಬೇಕು. ಇಲ್ಲಿ ಮರಾಠಿಗರು ಹೆಚ್ಚಿದ್ದಾರೆ. ಕರ್ನಾಟಕ ಸರ್ಕಾರ ಮರಾಠಿಗರಿಗೆ ಮರಾಠಿ ಭಾಷೆಯಲ್ಲಿ ಸರ್ಕಾರಿ ದಾಖಲೆ ನೀಡುತ್ತಿಲ್ಲ ಎಂದು ಸಚಿವ ದೀಪಕ್ ಕೇಸರಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.