RNI NO. KARKAN/2006/27779|Saturday, December 14, 2024
You are here: Home » breaking news » ಮೂಡಲಗಿ:ಫೆಬ್ರುವರಿ 12 ರಿಂದ ಮಾರ್ಚ 2 ರವರೆಗೆ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ನೀರು : ಶಾಸಕ ಬಾಲಚಂದ್ರ

ಮೂಡಲಗಿ:ಫೆಬ್ರುವರಿ 12 ರಿಂದ ಮಾರ್ಚ 2 ರವರೆಗೆ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ನೀರು : ಶಾಸಕ ಬಾಲಚಂದ್ರ 

ಫೆಬ್ರುವರಿ 12 ರಿಂದ ಮಾರ್ಚ 2 ರವರೆಗೆ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ನೀರು : ಶಾಸಕ ಬಾಲಚಂದ್ರ

ಮೂಡಲಗಿ ಫೆ 3 : ಫೆಬ್ರುವರಿ 12 ರಿಂದ ಮಾರ್ಚ 2 ರವರೆಗೆ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ನೀರನ್ನು ಹರಿಸಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ಢವಳೇಶ್ವರ ಗ್ರಾಮದ ರಂಗೇಶ್ವರ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಶುಕ್ರವಾರ ರಾತ್ರಿ ಪಾಲ್ಗೊಂಡು ಮಾತನಾಡಿದ ಅವರು, ಕೃಷಿ ಚಟುವಟಿಕೆಗಳಿಗೆ ಈ ನೀರನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಈ ತಿಂಗಳಲ್ಲಿ ಬೆಳೆಗಳಿಗೆ ಬಿಡುತ್ತಿರುವ ಕೊನೆಯ ನೀರು ಇದಾಗಲಿದೆ ಎಂದು ಹೇಳಿದರು.
ಢವಳೇಶ್ವರ ಗ್ರಾಮದಿಂದ ಕುಲಗೋಡ ಗ್ರಾಮದವರೆಗೆ ಹದಗೆಟ್ಟ ರಸ್ತೆಯನ್ನು ಸುಧಾರಣೆ ಮಾಡಲಾಗಿದೆ. ಗ್ರಾಮದ ಪ್ರಗತಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಅಭಿವೃದ್ಧಿ ಕುರಿತಂತೆ ಕೆಲ ವಿರೋಧಿಗಳು ವದಂತಿಗಳನ್ನು ಹಬ್ಬಿಸುತ್ತಿದ್ದು, ಅಂತಹ ವದಂತಿಗಳಿಗೆ ಕಿವಿಗೊಡದೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ರಸಮಂಜರಿಯಂತಹ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ಗ್ರಾಮೀಣ ಜನರು ಯಾವುದರಲ್ಲಿಯೂ ಕಡಿಮೆ ಇಲ್ಲದಂತೆ ಪ್ರತಿಭೆಗಳು ಬೆಳಕಿಗೆ ಬರುತ್ತಿರುವುದು ಅಭಿನಂದನಾರ್ಹ. ಸತತ 5 ವರ್ಷಗಳಿಂದ ಇಂತಹ ಸುಂದರ ಕಾರ್ಯಕ್ರಮವನ್ನು ನಡೆಸುತ್ತಿರುವುದು ಯುವಕರ ಕಾರ್ಯ ಮೆಚ್ಚುವಂತದ್ದು ಎಂದು ಹೇಳಿದರು.
ಮೂಡಲಗಿ ಹೊಸ ತಾಲೂಕಾಗಿ ಕಾರ್ಯಾರಂಭ ಮಾಡಿದ್ದರಿಂದ ಢವಳೇಶ್ವರ ಗ್ರಾಮದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡಲಾಗುವುದು. ಹೊಸ ತಾಲೂಕಿನ ವಿಕಾಸಕ್ಕೆ ಬದ್ಧರಿರುವುದಾಗಿ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಇದೇ ಸಂದರ್ಭದಲ್ಲಿ ರಂಗೇಶ ಪಿಕೆಪಿಎಸ್ ಆಡಳಿತ ಮಂಡಳಿಯವರು ಸತ್ಕರಿಸಿದರು.
ಯಾದವಾಡ ಜಿಪಂ ಸದಸ್ಯ ಗೋವಿಂದ ಕೊಪ್ಪದ, ಈರಣ್ಣಾ ಜಾಲಿಬೇರಿ, ಮಹಾದೇವ ನಾಡಗೌಡ, ಜಿಪಂ ಮಾಜಿ ಸದಸ್ಯ ಮಾರುತಿ ತೋಳಮರಡಿ, ಗ್ರಾಪಂ ಉಪಾಧ್ಯಕ್ಷ ಕೃಷ್ಣಾ ಚನ್ನಾಳ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಮಹಾದೇವ ಪಾಟೀಲ, ಗಿರೀಶ ನಾಡಗೌಡ, ತಾಪಂ ಸದಸ್ಯರಾದ ಸದಾಶಿವ ದುರಗನ್ನವರ, ಗೀತಾ ಮೇತ್ರಿ, ಪ್ರಭಾಶುಗರ ನಿರ್ದೇಶಕ ಗಿರೀಶ ಹಳ್ಳೂರ, ವಿರುಪಾಕ್ಷಿ ಹಿರೇಮಠ, ತಮ್ಮಾಸಾಹೇಬ ನಾಯಿಕ, ಶ್ರೀಕಾಂತ ಚನ್ನಾಳ, ಪ್ರಕಾಶ ಅಂಗಡಿ, ರಂಗಪ್ಪ ಕಳ್ಳಿಗುದ್ದಿ, ಭೀಮಪ್ಪ ಕಂಬಳಿ, ರಾಜು ಉಪ್ಪಾರ, ಮಾಧು ಪಾಟೀಲ, ಹನಮಂತ ಪೂಜೇರಿ, ಮುಂತಾದವರು ಉಪಸ್ಥಿತರಿದ್ದರು.
ಗುದ್ದಲಿ ಪೂಜೆ : ಢವಳೇಶ್ವರ ಗ್ರಾಮದಿಂದ ವಿರುಪಾಕ್ಷಿ ಹಿರೇಮಠ ತೋಟದವರೆಗಿನ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದರು. ಕಾಡಾದಿಂದ 10 ಲಕ್ಷ ರೂ. ಅನುದಾನ ಇದಕ್ಕೆ ಬಿಡುಗಡೆಯಾಗಿದೆ.

Related posts: