ಗೋಕಾಕ:ರಾಜ್ಯಕ್ಕೆ ಸಾಹಿತಿಗಳ ಕೊಡುಗೆ ಅಪಾರವಾಗಿದೆ : 4ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಶಾಸಕ ಬಾಲಚಂದ್ರ ಹೇಳಿಕೆ
ರಾಜ್ಯಕ್ಕೆ ಸಾಹಿತಿಗಳ ಕೊಡುಗೆ ಅಪಾರವಾಗಿದೆ : 4ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಶಾಸಕ ಬಾಲಚಂದ್ರ ಹೇಳಿಕೆ
ಗೋಕಾಕ ಫೆ 4 : (ಪ್ರೊ. ಕೆ.ಜಿ.ಕುಂದಣಗಾರ ವೇದಿಕೆ) ರಾಜ್ಯಕ್ಕೆ ಸಾಹಿತಿಗಳ ಕೊಡುಗೆ ಅಪಾರವಾಗಿದ್ದು ಸಾಹಿತ್ಯ ರಚನೆ ಮಾಡವದು ದೈವದತ್ತವಾಗಿ ಬರುತ್ತದೆ. ಅದು ನಾಡಿನ ಸಾಂಸ್ಕಂತಿಕ, ಶೈಕ್ಷಣಿಕ ಬೆಳವಣಿಗೆಗೆ ಅಪಾರವಾದ ಕೊಡುಗೆ ನೀಡಿದೆ ಎಂದು ಮಾಜಿ ಸಚಿವ ಹಾಗೂ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಅವರು ಭಾನುವಾರದಂದು ತಾಲೂಕಿನ ಕೌಜಲಗಿ ಗ್ರಾಮದಲ್ಲಿ 4ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕನ್ನಡ ನೆಲ,ಜಲ,ಭಾಷೆಯ ಉಳಿವಿಗಾಗಿ ಶ್ರಮಿಸಬೇಕು. ಕನ್ನಡಕ್ಕೆ ಕುತ್ತು ಬಂದಾಗ ಕನ್ನಡಪರ ಸಂಘಟನೆಗಳು ಕನ್ನಡಕ್ಕಾಗಿಯೇ ಹೋರಾಟ ಮಾಡಬೇಕು. ಕನ್ನಡ ಭಾಷೆಯ ಶ್ರೇಯೋಭಿವೃದ್ದಿಗೆ ಎಲ್ಲರೂ ಕಂಕಣಬದ್ಧರಾಗಿ ದುಡಿಯಬೇಕು. ಕನ್ನಡ ಮಣ್ಣಿನಲ್ಲಿ ಹುಟ್ಟಿರುವುದಕ್ಕೆ ಅಭಿಮಾನ ಪಡಬೇಕು. ಗೋಕಾಕ ತಾಲೂಕು ಸಾಹಿತ್ಯಕ ಹಾಗೂ ಸಂಸ್ಕøತಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಪ್ರೋ: ಕುಂದಣಗಾರ, ಕೌಜಲಗಿ ನಿಂಗಮ್ಮ, ಬೆಟಗೇರಿ ಕೃಷ್ಣ ಶರ್ಮಾ, ಕೃಷ್ಣ ಮೂರ್ತಿ ಪುರಾಣಿಕ, ಶಿ.ಚ.ನಂದಿಮಠ , ಬಸವರಾಜ ಕಟ್ಟಿಮನಿ, ಡಾ| ಡಿ.ಸಿ.ಪಾವಟೆ ಮುಂತಾದ ಮಹನೀಯರ ಕೊಡುಗೆ ಅಪಾರವಾಗಿದೆ. ಎಂದು ಹೇಳಿದರು. ಜೊತೆಗೆ ಜ್ಞಾನ ಪೀಠ ಪ್ರಶಸ್ತಿ ಪುರಸ್ಕøತ ಡಾ| ಚಂದ್ರಶೇಖರ ಕಂಬಾರ ಅವರು ಗೋಕಾವಿ ನೆಲದವರು ಎಂಬುದು ನಮಗೆ ಹೆಮ್ಮೆಯಾಗಿದೆ ಎಂದರು.
ಮುಂದಿನ ವರ್ಷ ಗೋಕಾಕದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಲ್ಲರೂ ಒಗ್ಗೂಡಿ ಅದ್ದೂರಿಯಾಗಿ ಕನ್ನಡ ಜಾತ್ರೆ ಮಾಡೋಣ. ಗೋಕಾಕನ್ನು ಜಿಲ್ಲೆ ಹಾಗೂ ಕೌಜಲಗಿಯನ್ನು ನೂತನ ತಾಲೂಕು ಕೇಂದ್ರವನ್ನಾಗಿ ಮಾಡುವುದು ನಮ್ಮ ಮುಂದಿರುವ ಗುರಿಯಾಗಿದೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.