RNI NO. KARKAN/2006/27779|Wednesday, November 6, 2024
You are here: Home » breaking news » ಗೋಕಾಕ:ಯುವಕರು ಸಂಘಟಿತರಾಗಿ ಗ್ರಾಮಾಭಿವೃದ್ದಿಯಲ್ಲಿ ತೊಡಗಬೇಕು : ಶಾಸಕ ಬಾಲಚಂದ್ರ

ಗೋಕಾಕ:ಯುವಕರು ಸಂಘಟಿತರಾಗಿ ಗ್ರಾಮಾಭಿವೃದ್ದಿಯಲ್ಲಿ ತೊಡಗಬೇಕು : ಶಾಸಕ ಬಾಲಚಂದ್ರ 

ಯುವಕರು ಸಂಘಟಿತರಾಗಿ ಗ್ರಾಮಾಭಿವೃದ್ದಿಯಲ್ಲಿ ತೊಡಗಬೇಕು : ಶಾಸಕ ಬಾಲಚಂದ್ರ
ಗೋಕಾಕ ಫೆ 5: ಭಾರತೀಯರಾದ ನಾವು ದೈವಿ ಭಕ್ತರು. ದೇವರನ್ನು ನಂಬಿ, ಪೂಜಿಸಿ ಬದುಕುವವರು. ಧಾರ್ಮಿಕತೆಯಲ್ಲಿ ಅಪಾರ ನಂಬಿಕೆಯನ್ನಿಟ್ಟು ಧರ್ಮದ ಆಚರಣೆಯಲ್ಲಿ ನಮ್ಮ ಜನರು ಜಗತ್ತಿನಲ್ಲಿಯೇ ಮುಂಚೂಣಿಯಲ್ಲಿದ್ದಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ರವಿವಾರ ಸಂಜೆ ತಾಲೂಕಿನ ತಳಕಟ್ನಾಳ ಗ್ರಾಮದ ಸಿದ್ದಾರೂಢಮಠದಲ್ಲಿ 3ನೇ ವೇದಾಂತ ಪರಿಷತ್ ಹಾಗೂ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಭಾರತೀಯ ಆಚಾರ,ವಿಚಾರ ಹಾಗೂ ಸಂಸ್ಕøತಿ ಜಗತ್ತಿಗೆ ಮಾದರಿಯಾಗಿದೆ ಎಂದರು.
ಈ ದೇಶದ ಭವಿಷ್ಯ ನಿಂತಿರುವುದು ಯುವಕರ ಕೈಯಲ್ಲಿ. ಯುವಕರು ಸಂಘಟಿತರಾಗಿ ಹಿರಿಯರ ಮಾರ್ಗದರ್ಶನದಲ್ಲಿ ಗ್ರಾಮಾಭಿವೃದ್ದಿಯಲ್ಲಿ ತೊಡಗಬೇಕು. ದುಶ್ಚಟದ ದಾಸರಾಗದೇ ಉತ್ತಮ ಸಂಸ್ಕಾರವಂತರಾಗಿ ಬಾಳಬೇಕು. ಸಮಾಜದ ಅಭಿವೃದ್ದಿಯಲ್ಲಿ ಮಠಾಧೀಶರ ಪಾತ್ರ ಮುಖ್ಯವಾಗಿದ್ದು, ತಳಕಟ್ನಾಳ ಭಾಗದಲ್ಲಿ ಸಿದ್ಧಾರೂಢ ಮಠವು ಭಕ್ತರಿಗೆ ಧಾರ್ಮಿಕತೆಯ ಮಹತ್ವವನ್ನು ಸಾರುತ್ತಾ ಭಕ್ತರನ್ನು ಸನ್ಮಾರ್ಗದತ್ತ ಕರೆದೊಯ್ಯುತ್ತಿದ್ದಾರೆಂದು ಶ್ಲಾಘಿಸಿದರು.
ತಳಕಟ್ನಾಳ ಗ್ರಾಮದ ಅಭಿವೃದ್ದಿಗೆ ಹಲವಾರು ಸರ್ಕಾರಿ ಯೋಜನೆಗಳನ್ನು ನೆರವೇರಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿದ್ಧಾರೂಢ ಮಠದ ಆತ್ಮಾನಂದ ಸ್ವಾಮಿಗಳು ವಹಿಸಿದ್ದರು.
ಕಂಕಣವಾಡಿಯ ಮಾರುತಿ ಶರಣರು, ಕೌಜಲಗಿಯ ಧುರೀಣ ಎ.ಎ.ಪರುಶೆಟ್ಟಿ, ಗ್ರಾಪಂ ಅಧ್ಯಕ್ಷ ಕೆಂಪಣ್ಣ ಬೆಣ್ಣಿ, ತಾಪಂ ಸದಸ್ಯ ಲಕ್ಷ್ಮಣ ಮುಸಗುಪ್ಪಿ, ಸಿದ್ದಾರೂಢ ಮಠದ ಕಮೀಟಿ ಅಧ್ಯಕ್ಷ ವೀರುಪಾಕ್ಷ ಮುಂಗರವಾಡಿ, ತಿಮ್ಮಾಜಿ ನಾಯಿಕ, ಲಕ್ಷ್ಮಣಗೌಡ ಪೋಲಿಸ್‍ಪಾಟೀಲ, ಅಜ್ಜಪ್ಪ ಹುಲಕುಂದ, ವಿಠ್ಠಲ ವಾಳದ, ಹಣಮಂತ ಅಜ್ಜನ್ನವರ, ಜಗದೀಶ ಬೈರನಟ್ಟಿ, ಬಸವರಾಜ ಹುಡೇದ, ಅಶೋಕ ಕೊಪ್ಪದ, ನಿಂಗಪ್ಪ ಬಾಗೇವಾಡಿ, ಅಜ್ಜಪ್ಪ ಗಂಗಣಿ, ಪುಂಡಲೀಕ ಹುಚನಟ್ಟಿ, ಶಿವಪ್ಪ ಕಂಬಾರ, ಮಲಕಾರಿ ಬೆಳ್ಳಿವರಿ, ರಮೇಶ ಸನದಿ, ಲಕ್ಕಪ್ಪ ಬೂದಿಗೊಪ್ಪ, ಸಂಜು ಬಾಗೇವಾಡಿ, ರಮೇಶ ಭಜಂತ್ರಿ ಉಪಸ್ಥಿತರಿದ್ದರು.

Related posts: