RNI NO. KARKAN/2006/27779|Sunday, September 8, 2024
You are here: Home » breaking news » ಚಿಕ್ಕೋಡಿ: ಜನಪ್ರತಿನಿಧಿಗಳು ದಲಿತರ ಹೊರಾಟಕ್ಕೆ ಸ್ಪಂದಿಸುತ್ತಿಲ್ಲ: ಬಸವರಾಜ ಢಾಕೆ ಆರೋಪ

ಚಿಕ್ಕೋಡಿ: ಜನಪ್ರತಿನಿಧಿಗಳು ದಲಿತರ ಹೊರಾಟಕ್ಕೆ ಸ್ಪಂದಿಸುತ್ತಿಲ್ಲ: ಬಸವರಾಜ ಢಾಕೆ ಆರೋಪ 

ಜನಪ್ರತಿನಿಧಿಗಳು ದಲಿತರ ಹೊರಾಟಕ್ಕೆ ಸ್ಪಂದಿಸುತ್ತಿಲ್ಲ: ಬಸವರಾಜ ಢಾಕೆ ಆರೋಪ

ಚಿಕ್ಕೋಡಿ ಮೇ 20: ದಲಿತಪರ ಸಂಘಟನೆಗಳು ನಡೆಸುತ್ತಿರುವ ಧರಣಿ 6ನೆ ದಿನಕ್ಕೆ ಕಾಲಿಟ್ಟಿದೆ. ಎಸ್.ಸಿ ಗೆ ಸೇರಿದ ಭಾರತಿ ವಿದ್ಯಾವರ್ಧಕ ಸಂಸ್ಥೆ ಆಡಳಿತ ಮಂಡಳಿ ಸಿ.ಎಸ್.ಎಸ್.ಪಿ.ಯು ಕಾಲೇಜನ್ನು ಮೇಲ್ವರ್ಗದ ನ್ಯಾಯವಾದಿ ಸದಾನಂದ ಮಾಲಿಂಗಪ್ಪಾ ಪಾಮದಿನ್ನಿ ಅವರು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡಿರುವದನ್ನು ಖಂಡಿಸಿ ಪಡೆಸುತ್ತಿರುವ ಧರಣಿಗೆ ಇಂದು ಸಮಾಜ ಸೇವಕರಾದ ಅಕ್ಬರ(ಅರೀಫ) ಜಮಾದಾರ ಅವರು ಭೇಟ್ಟಿ ನೀಡಿ ದಲಿತ ಸಂಘಟನೆಗಳಿಗೆ ಬೆಂಬಲ ಸೂಚಿಸಿ ದಲಿತರ ಕಾನೂನು ಹೋರಾಟಕ್ಕೆ 25 ಸಾವಿರಗಳ ಚೆಕನ್ನು ನೀಡಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡ ಬಸವರಾಜ ಢಾಕೆ ಮಾತನಾಡಿ, ದಲಿತರು ಕಳೆದ 6 ದಿನಗಳಿಂದ ಬೀದಿಗೀಳಿದು ಹೋರಾಟ ಮಾಡುತ್ತಾ ಇದ್ದರು ಸಹ ಯಾವೊಬ್ಬ ಅಧಿಕಾರಿ ಮತ್ತು ಜನಪ್ರತಿನಿಧಿಗಳು ದಲಿತರ ಹೊರಾಟಕ್ಕೆ ಸ್ಪಂಧಿಸುತ್ತಿಲ್ಲ ಇದರಿಂದಾಗಿ ದಲಿತ ಸಮುದಾಯದ ಮೇಲಿನ ಕಾಳಜಿ ಗೊತ್ತಾಗುತ್ತದೆ ಎಂದು ಕಿಡಿಕಾರಿದರು. ಎಸ್‍ಸಿ ಮತಗಳನ್ನು ಪಡೆಯುವ ಸಂದರ್ಭದಲ್ಲಿ ಜನಪ್ರತಿನಿಧಿಗಳಿಗೆ ಇರುವ ಕಾಳಜಿ ದಲಿತರಿಗೆ ಅನ್ಯಾವಾಗಿರುವ ಸಂದರ್ಭದಲ್ಲಿ ಇರುವದಿಲ್ಲ ಎಂದು ಟೀಕಿಸಿದರು.
ಧರಣಿಯಲ್ಲಿ ಸಂಸ್ಥೆಯ ಅಜೀವ ಸದಸ್ಯರಾದ ಅಶೋಕ ಮಾಳಗೆ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮುಖಂಡರಾದ ಮಂಜುನಾಥ ಮಾಳಗೆ,ತುಕಾರಾಮ ಘಟ್ಟಿ, ಅಪ್ಪಾಸಾಬ ತಡಾಕೆ,ಮಧುಕರ ಮಜಲಟ್ಟಿ,ರಾಜೇಂದ್ರ ಘಸ್ತಿ, ರಾಘವೇಂದ್ರ ಸನದಿ, ಚಂದ್ರಕಾಂತ ಹುಕ್ಕೇರಿ, ರವಿ ಬಾಗವಾನ,ಗುಂಡು ಜ್ಯೋತಿ,ಶ್ರೀನಾಥ ಘಟ್ಟಿ,ಆಶೋಕ ಲಾಖೆ ಇತರರು ಇದ್ದರು.
ವರದಿ: ರಂಜೀತ ಕಾಂಬಳೆ

Related posts: