RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ನಗರ ಸಭೆಯ 2018-19 ನೇ ಸಾಲಿನ 8.90 ಲಕ್ಷ ರೂಗಳ ಉಳಿತಾಯ ಆಯ್ಯವ್ಯಯವನ್ನು ಮಂಡಿಸಿದ ಪೌರಾಯುಕ್ತ ವಿ.ಸಿ.ಚಿನ್ನಪ್ಪಗೌಡರ

ಗೋಕಾಕ:ನಗರ ಸಭೆಯ 2018-19 ನೇ ಸಾಲಿನ 8.90 ಲಕ್ಷ ರೂಗಳ ಉಳಿತಾಯ ಆಯ್ಯವ್ಯಯವನ್ನು ಮಂಡಿಸಿದ ಪೌರಾಯುಕ್ತ ವಿ.ಸಿ.ಚಿನ್ನಪ್ಪಗೌಡರ 

ನಗರ ಸಭೆಯ 2018-19 ನೇ ಸಾಲಿನ 8.90 ಲಕ್ಷ ರೂಗಳ ಉಳಿತಾಯ ಆಯ್ಯವ್ಯಯವನ್ನು ಮಂಡಿಸಿದ  ಪೌರಾಯುಕ್ತ ವಿ.ಸಿ.ಚಿನ್ನಪ್ಪಗೌಡರ

ಗೋಕಾಕ ಫೆ 5 : ಇಲ್ಲಿಯ ನಗರ ಸಭೆಯ 2018-19 ನೇ ಸಾಲಿನ 8.90 ಲಕ್ಷ ರೂಗಳ ಉಳಿತಾಯ ಆಯ್ಯವ್ಯಯವನ್ನು ಪೌರಾಯುಕ್ತ ವಿ.ಸಿ.ಚಿನ್ನಪ್ಪಗೌಡರ ಅವರು ನಗರ ಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರದಂದು ಮಂಡಿಸಿದರು.
ನಗರ ಸಭೆಯ ಲೆಕ್ಕ ಅಧಿಕ್ಷಕರಾದ ಎಮ್.ಎನ್.ಸಾಗರೇಕರ ಅವರು ಒಟ್ಟು ರೂ.3535.21 ಲಕ್ಷಗಳ ಆಯ ಮತ್ತು ರೂ.3526.31 ಲಕ್ಷಗಳ ವ್ಯಯವುಳ್ಳ ಅಂದಾಜು ವ್ಯಯವನ್ನು ವಿಷ್ಲೇಶನೆ ಮಾಡಿ, ನಗರದಲ್ಲಿ ಎಸ್ ಎಫ ಸಿ ವಿಶೇಷ ಅನುದಾನ , 14ನೇ ಹಣಕಾಸು, ಟಿಎಸ್ ಪಿ ಯೋಜನೆ ಒಳಗೊಂಡಂತೆ ರಸ್ತೆ ಕಾಮಗಾರಿಗಳಿಗಾಗಿ ಸುಮಾರು ರೂ.2.85 ಕೋಟಿ, ಚರಂಡಿ ಕಾಮಗಾರಿಗಳಿಗಾಗಿ ರೂ.7.95 ಕೋಟಿ, ನೀರು ಸರಬರಾಜು ಕಾಮಗಾರಿಗಳಿಗಾಗಿ ರೂ.40 ಲಕ್ಷ ಮತ್ತು ಬೀದಿ ದೀಪಗಳಿಗಾಗಿ ರೂ.3ಕೋಟಿ, ಎಸ್.ಸಿ./ಎಸ್.ಟಿ. ಬಡತನ ನಿರ್ಮೂಲನೆಗಾಗಿ ರೂ.78.64 ಲಕ್ಷ, ಇತರೆ ಬಡ ಜನಾಂಗದ ಅಭಿವೃದ್ದಿಗಾಗಿ ರೂ.23.65 ಲಕ್ಷ ಮತ್ತು ಅಂಗವಿಕಲಚೇತನರಿಗಾಗಿ ರೂ.9.78 ಲಕ್ಷ ಅಂದಾಜು ಖರ್ಚುಗಳನ್ನು ಸಭೆಗೆ ಓದಿ ವಿವರಿಸಿದರಲ್ಲದೇ ಜಿಲ್ಲಾಧಿಕಾರಿಗಳ ಮುಖಾಂತರ ನಗರೋತ್ಥಾನ ಯೋಜನೆಯಲ್ಲಿ ರೂ.25. ಕೋಟಿಗಳ ಕಾಮಗಾರಿಗಳನ್ನು ಶೀಘ್ರದಲ್ಲಿ ಪ್ರಾರಂಭವಾಗಲಿವೆ ಎಂದು ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜತ್ತಿ, ಸ್ಥಾಯಿ ಸಮಿತಿ ಚೇರಮನ್ ಭಗವಂತ ಹುಳ್ಳಿ  ಸದಸ್ಯರಾದ ಎಸ್.ಎ.ಕೋತವಾಲ, ಪರಶುರಾಮ ಭಗತ್, ಸಹಾಯಕ ಕಾರ್ಯಪಾಲಕ ಅಭಿಯಂತರ ವ್ಹಿ.ಎಸ್.ತಡಸಲೂರು, ಕಚೇರಿ ವ್ಯವಸ್ಥಾಪಕ ಎಂ.ಹೆಚ್.ಅತ್ತಾರ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಸರ್ವ ಸದಸ್ಯರು ಚರ್ಚಿಸಿ ಸರ್ವಾನುಮತದಿಂದ 2018-19 ನೇ ಸಾಲಿನ ಆಯವ್ಯಯ ಪಟ್ಟಿಗೆ ಮಂಜೂರಿ ನೀಡಿದರು.

Related posts: