RNI NO. KARKAN/2006/27779|Friday, November 22, 2024
You are here: Home » breaking news » ಘಟಪ್ರಭಾ:ಜಾನಪದ ಕಲೆಗಳು ನಮ್ಮ ಸಂಸ್ಕಂತಿಯ ಕೊಂಡಿಯಾಗಿವೆ : ಪ್ರವಚನಕಾರ ಬಸವರಾಜ ಹಿರೇಮಠ

ಘಟಪ್ರಭಾ:ಜಾನಪದ ಕಲೆಗಳು ನಮ್ಮ ಸಂಸ್ಕಂತಿಯ ಕೊಂಡಿಯಾಗಿವೆ : ಪ್ರವಚನಕಾರ ಬಸವರಾಜ ಹಿರೇಮಠ 

ಜಾನಪದ ಕಲೆಗಳು ನಮ್ಮ ಸಂಸ್ಕಂತಿಯ ಕೊಂಡಿಯಾಗಿವೆ : ಪ್ರವಚನಕಾರ ಬಸವರಾಜ ಹಿರೇಮಠ

ಘಟಪ್ರಭಾ ಫೆ 7 : ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಕಲೆಗೆ ಇದೆ. ಜಾನಪದ ಕಲೆಗಳು ನಮ್ಮ ಸಂಸ್ಕಂತಿಯ ಕೊಂಡಿಯಾಗಿವೆ. ಕಲೆಗಳು ಉಳಿಯಬೇಕೆಂದರೆ ಕಲಾವಿದರನ್ನು ಪ್ರೋತ್ಸಾಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹಿರಿಯ ಕಲಾವಿದ ಪ್ರವಚನ ಪಟು ಬಸವರಾಜ ಹಿರೇಮಠ ಹೇಳಿದರು.
ಅವರು ಇತ್ತೀಚಿಗೆ ಸಮೀಪದ ತಳಕಟನಾಳ ಗ್ರಾಮದ ಶ್ರೀ ಸಿದ್ಧಾರೂಢ ಜಾತ್ರಾ ಮಹೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಹಾಗೂ ಗುರು ಪುಟ್ಟರಾಜ ರಂಗಭೂಮಿ ಸಾಂಸ್ಕøತಿಕ ಕಲಾ ಸಂಸ್ಥೆ(ರಿ) ಘಟಪ್ರಭಾ ಇವರು ಸಂಯುಕ್ತವಾಗಿ ಹಮ್ಮಿಕೊಂಡ “ಜಾನಪದ ಸಾಂಸ್ಕøತಿಕ ಕಲಾ ವೈಭವ-2017-18” ರಾಜ್ಯ ಮಟ್ಟದ ಕಲಾಮೇಳ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ, ಟಿವಿ, ಸಿನಿಮಾ, ಮೋಬೈಲ್ ಇತರೆ ಮಾಧ್ಯಮಗಳ ಭರಾಟೆಯಿಂದ ಗ್ರಾಮೀಣ ಕಲೆಗಳು ನಶಿಸಿಹೋಗುತ್ತಿವೆ. ಜಾನಪದ ಕಲೆಗಳಾದ ಸೋಬಾನಪದ, ಚೌಡಕಿಪದ, ಗೀಗೀಪದ, ಶ್ರೀಕೃಷ್ಣ ಪಾರಿಜಾತ, ಸಂಗ್ಯಾಬಾಳ್ಯಾ ಮುಂತಾದ ಬೈಲಾಟ ಕಲೆಗಳು ಮಾಯವಾಗುತ್ತಿವೆ. ಇಂತಹ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಜವಾಬ್ಧಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಸಮೀಪದ ತಳಕಟನಾಳ ಗ್ರಾಮದ ಶ್ರೀ ಸಿದ್ಧಾರೂಢ ಜಾತ್ರಾ ಮಹೋತ್ಸವದಲ್ಲಿ ಹಮ್ಮಿಕೊಂಡ ಜಾನಪದ ಸಾಂಸ್ಕøತಿಕ ಕಲಾ ವೈಭವ ಕಾರ್ಯಕ್ರಮದಲ್ಲಿ ಭರತ ನಾಟ್ಯ ಪ್ರದರ್ಶಿಸುತ್ತಿರುವ ಕಲಾವಿದರು.

ದಿವ್ಯ ಸಾನಿಧ್ಯವನ್ನು ತಳಕಟನಾಳ ಶ್ರೀ ಸಿದ್ಧಾರೂಢ ಮಠದ ಶ್ರೀ ಆತ್ಮಾನಂದ ಮಹಾಸ್ವಾಮಿಗಳು ವಹಿಸಿದ್ದರು. ವೇದಿಕೆಯ ಮೇಲೆ ತಾ.ಪಂ.ಸದಸ್ಯ ಲಕ್ಷ್ಮಣ ಮಸಗುಪ್ಪಿ, ಗ್ರಾ.ಪಂ.ಅಧ್ಯಕ್ಷ ಕೆಂಪಣ್ಣ ಬೆಣ್ಣಿ, ಸದಸ್ಯರಾದ ಅಪ್ಪಸಾಬ ನದಾಫ, ಅಜ್ಜಪ್ಪ ಹುಲಕುಂದ, ಶ್ರೀಮತಿ ರುದ್ರವ್ವ ಗಂಗಣಿ, ಪ್ರವಚಕಾರ ಮಾರುತಿ ಶರಣರು, ಗ್ರಾಮದ ಹಿರಿಯರಾದ ಭಿಮನಗೌಡಾ ಪಾಟೀಲ, ವಿರೂಪಾಕ್ಷಿ ಮುಂಗರವಾಡಿ, ಯಲ್ಲಪ್ಪ ದೊಡಮನಿ, ಶಿಕ್ಷಕರಾದ ವಿಠ್ಠಲ ಹುಲ್ಲಾರ, ಎ.ಎಸ್.ಅಡಿವೇರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ವಿವಿದ ಕ್ಷೇತ್ರಗಳಲ್ಲಿ ಸೇವೆಸಲ್ಲಿದ ಸಾಧಕರಾದ ಶಬ್ಬೀರ ಡಾಂಗೆ, ಮೂಡಲಗಿ (ಜಾನಪದ), ಗುರುಪಾದ ಮದನ್ನವರ ಗೋಕಾಕಪಾಲ್ಸ್ (ಸಂಗೀತ), ಸೋಮಶೇಖರ ಸೊಗಲದ ರಾಮದುರ್ಗ (ಪತ್ರಿಕಾ ಮಾಧ್ಯಮ), ಎಂ.ಎ.ದನದಮನಿ ಹಿರೇಕುಂಬಿ (ಶಿಕ್ಷಣ), ಮೀನಾಕ್ಷಿ ಬೈಲಹೊಂಗಲ ಹುಬ್ಬಳ್ಳಿ (ರಂಗಭೂಮಿ), ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿವಿಧ ತಾಲೂಕ ಹಾಗೂ ಜಿಲ್ಲೆಗಳಿಂದ ಆಗಮಿಸಿದ ಕಲಾ ತಂಡಗಳಿಂದ ಭರತನಾಟ್ಯ, ಲಾವಣಿನೃತ್ಯ, ಸುಗಮ ಸಂಗೀತ, ಕರ್ಬಲ್ ಕುಣಿತ, ದಟ್ಟಿ ಕುಣಿತ, ಜಾನಪದ ಗಾಯನ, ಶಿವಭಜನೆ ಮತ್ತು ನಿಜಗುಣ ಶಿವಯೋಗಿ ಪೌರಾಣಿಕ ನಾಟಕ ಪ್ರದರ್ಶನಗೊಂಡು ಜನಮನ ಸೂರೆಗೊಂಡಿತು.
ಸಂಘದ ಅಧ್ಯಕ್ಷ ಲಗಮಣ್ಣಾ ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಬಾಳೇಶ ದೊಡಮನಿ ಸ್ವಾಗತಿಸಿದರು. ಶಿಕ್ಷಕಿ ಉಮಾ ಲಗಮಣ್ಣ ದೊಡಮನಿ ನಿರೂಪಿಸಿ, ವಂದಿಸಿದರು.

Related posts: