RNI NO. KARKAN/2006/27779|Friday, December 13, 2024
You are here: Home » breaking news » ಘಟಪ್ರಭಾ:60ನೇ ವರ್ಷಕ್ಕೆ ರಾಜಕೀಯ ನಿವೃತ್ತಿ ಪಡೆಯುವುದು ಅಚಲ : ಶಾಸಕ ಬಾಲಚಂದ್ರ

ಘಟಪ್ರಭಾ:60ನೇ ವರ್ಷಕ್ಕೆ ರಾಜಕೀಯ ನಿವೃತ್ತಿ ಪಡೆಯುವುದು ಅಚಲ : ಶಾಸಕ ಬಾಲಚಂದ್ರ 

60ನೇ ವರ್ಷಕ್ಕೆ ರಾಜಕೀಯ ನಿವೃತ್ತಿ ಪಡೆಯುವುದು ಅಚಲ : ಶಾಸಕ ಬಾಲಚಂದ್ರ

ಘಟಪ್ರಭಾ ಫೆ 10: ಕಲ್ಲೋಳಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ 5 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಇದರಲ್ಲಿ 4.25 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸಮೀಪದ ಕಲ್ಲೋಳಿ ಪಟ್ಟಣದ ಬಲಭೀಮ ರಂಗಮಂಟಪದಲ್ಲಿ ಶುಕ್ರವಾರ ರಾತ್ರಿ ಪಟ್ಟಣ ಪಂಚಾಯತಿಯಿಂದ ಜರುಗಿದ 5 ಕೋಟಿ ರೂ. ವೆಚ್ಚದ ನಗರೋತ್ಥಾನ-3 ಯೋಜನೆಯಡಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಸ್ತೆಗಳ ಅಭಿವೃದ್ಧಿ, ಒಳಚರಂಡಿ ಮತ್ತು ಶೌಚಾಲಯಗಳ ನಿರ್ಮಾಣ ಹಾಗೂ ಕುಡಿಯುವ ನೀರಿಗಾಗಿ ಜಲಸಂಗ್ರಹಾಲಯ ನಿರ್ಮಿಸಲಾಗುವುದು. ನಗರೋತ್ಥಾನ ಯೋಜನಾನುಷ್ಠಾನದಿಂದ ಕಲ್ಲೋಳಿ ಪಟ್ಟಣ ಸುಂದರವಾಗಲಿದೆ. ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿರುವುದರಿಂದ ಅಭಿವೃದ್ಧಿಗಾಗಿ ಸರ್ಕಾರದಿಂದ ಪ್ರತಿವರ್ಷ ಹೆಚ್ಚಿನ ಅನುದಾನ ಹರಿದುಬರಲಿದೆ. ಬಾಕಿ ಉಳಿದಿರುವ ಕಾಮಗಾರಿಗಳನ್ನು ಬರಲಿರುವ ಚುನಾವಣೆಯೊಳಗೆ ಮುಕ್ತಾಯಗೊಳಿಸಲಾಗುವುದು ಎಂದರು.
ಕಲ್ಲೋಳಿ ಪಟ್ಟಣದ ನಾಗರೀಕರು ನೀಡಿರುವ ಸತ್ಕಾರಕ್ಕೆ ಚಿರಋಣಿ ಆಗಿರುವೆ. ಪಟ್ಟಣ ಪಂಚಾಯತಿ ಸಮೀತಿಯವರು ಬೆಳ್ಳಿ ಖಡ್ಗವನ್ನು ಪ್ರೀತಿಯಿಂದ ನೀಡಿದ್ದಾರೆ. ನನಗೆ ವಿರೋಧಿಗಳು ಬೆರಳಣಿಕೆಯಷ್ಟು ಇದ್ದಾರೆ. ಜನರು ನೀಡುತ್ತಿರುವ ಪ್ರೀತಿ-ವಿಶ್ವಾಸ ಹಾಗೂ ಸತ್ಕಾರವನ್ನು ನೀಡುತ್ತಿರುವುದನ್ನು ನೋಡುತ್ತಿದ್ದರೇ ಚುನಾವಣೆಯಲ್ಲಿ ಗೆದ್ದಬಂದಂತೆಯೇ ಭಾಸವಾಗುತ್ತಿದೆ. ಈಗಲೇ ಮತ್ತೊಂದು ಅವಧಿಗೆ ಶಾಸಕನಾಗಿದ್ದೇನೆ ಎಂಬಂತಹ ಅಭಿಮಾನವನ್ನು ಕ್ಷೇತ್ರದ ಜನರು ತೋರುತ್ತಿದ್ದಾರೆ. ಅರಭಾವಿ ಕ್ಷೇತ್ರದಂತಹ ಜನರನ್ನು ಪಡೆದಿರುವುದು ನನ್ನ ಭಾಗ್ಯವೆಂದು ಹೇಳಿದರು.
2004 ರಿಂದ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಶ್ರಮಿಸುತ್ತಿದ್ದೇನೆ. ಎಂದಿಗೂ ಯಾರೊಂದಿಗೂ ಸೇಡಿನ ರಾಜಕೀಯ ಮಾಡಿಲ್ಲ. ಯಾರಿಗೂ ಕೆಟ್ಟದ್ದನ್ನು ಬಗೆದಿಲ್ಲ. ವೈರಿಗಳು ಸಹ ಚೆನ್ನಾಗಿರಬೇಕೆಂಬ ಬಯಸುವ ವ್ಯಕ್ತಿ ನಾನು. ಆದರೂ ಕೆಲವರು ಸುಳ್ಳು ವದಂತಿಗಳನ್ನು ಹರಡಿಸುತ್ತಲೇ ಇದ್ದಾರೆ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಅಭಿವೃದ್ಧಿಯೊಂದೇ ನನ್ನ ಮುಂದಿರುವ ಗುರಿ ಎಂದು ಹೇಳಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಲ್ಲೋಳಿ ಪಟ್ಟಣದಲ್ಲಿ 5 ಕೋಟಿ ರೂ. ವೆಚ್ಚದ ನಗರೋತ್ಥಾನ ಯೋಜನೆಯಡಿ ಕಾಮಗಾರಿಗಳನ್ನು ನೆರವೇರಿಸಿ ಮಾತನಾಡಿದರು.

ಅರಭಾವಿ ಬಿಡಲ್ಲ : ಅರಭಾವಿ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಇದು ಶತಸಿದ್ಧ. ಸ್ವ-ಪಕ್ಷೀಯ ಕೆಲವರು ಗೋಕಾಕ ಅಥವಾ ಯಮಕನಮರಡಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಾರ್ವಜನಿಕವಾಗಿ ವದಂತಿಗಳನ್ನು ಹರಡಿಸುತ್ತಿದ್ದಾರೆ. ಅಂತಹ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿಕೊಂಡ ಅವರು, ಬೇಕಾದರೆ ಅವರೇ ಹೋಗಿ ಅಲ್ಲಿ ಸ್ಪರ್ಧೆ ಮಾಡಲಿ. ಅರಭಾವಿಯನ್ನು ಬಿಟ್ಟುಕೊಡುವ ಹಾಗೂ ಬಿಜೆಪಿ ಬಿಟ್ಟು ಬೇರೆ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತಿ ಅಧ್ಯಕ್ಷೆ ಕಸ್ತೂರಿ ಕುರಬೇಟ ವಹಿಸಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ನಾಗರೀಕರು ಹಾಗೂ ವಿವಿಧ ಸಮುದಾಯದ ಸಂಘಟನೆಯ ಮುಖಂಡರು ಅದ್ಧೂರಿಯಾಗಿ ಸತ್ಕರಿಸಿದರು. ಬೆಳ್ಳಿ ಖಡ್ಗ ನೆನಪಿನ ಕಾಣಿಕೆಯನ್ನಾಗಿ ನೀಡಿರುವುದು ವಿಶೇಷವಾಗಿತ್ತು.
ಬೆಂಗಳೂರು ಸಹಕಾರಿ ಮಾರಾಟ ಮಹಾಮಂಡಳದ ಉಪಾಧ್ಯಕ್ಷ ಬಿ.ಆರ್. ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಜಿ. ಢವಳೇಶ್ವರ, ಜಿಪಂ ಸದಸ್ಯೆ ವಾಸಂತಿ ತೇರದಾಳ, ಯುವ ಮುಖಂಡ ರಾವಸಾಬ ಬೆಳಕೂಡ, ಎಪಿಎಂಸಿ ಮಾಜಿ ಅಧ್ಯಕ್ಷ ಮಲ್ಲಪ್ಪ ಹೆಬ್ಬಾಳ, ಪ್ರಭಾಶುಗರ ನಿರ್ದೇಶಕ ಮಹಾಂತೇಶ ಕಪ್ಪಲಗುದ್ದಿ, ತಾಪಂ ಮಾಜಿ ಸದಸ್ಯ ಅಶೋಕ ಮಕ್ಕಳಗೇರಿ, ಪಪಂ ಉಪಾಧ್ಯಕ್ಷೆ ಕಾಶವ್ವ ಸೊಂಟನವರ, ಸುಭಾಸ ಕುರಬೇಟ, ಬಿ.ಬಿ. ದಾಸನವರ, ಬಸವರಾಜ ಯಾದಗೂಡ, ಅಜೀತ ಬೆಳಕೂಡ, ವಸಂತ ತಹಶೀಲ್ದಾರ, ಪ್ರಭು ಕಡಾಡಿ, ಮಲ್ಲಪ್ಪ ಖಾನಾಪೂರ, ಪರಗೌಡ ಪಾಟೀಲ, ಭಗವಂತ ಪತ್ತಾರ, ಬಸವರಾಜ ಕಂಕಣವಾಡಿ, ಉಮೇಶ ಬೂದಿಹಾಳ, ಸಯ್ಯದ ಪಾಟಗೇರಿ, ದತ್ತು ಕಲಾಲ, ಭೀಮಶೆಪ್ಪ ಗೊರೋಶಿ, ಬಸವಂತ ಕಮತಿ, ಮುತ್ತೆಪ್ಪ ಕುಳ್ಳೂರ, ಕೆಂಪಯ್ಯಾ ಕರಗಾಂವಿಮಠ, ಶಿವಾನಂದ ಹೆಬ್ಬಾಳ, ಸಿದ್ದಣ್ಣಾ ಮುಗಳಿ, ಮಹಾದೇವ ಮದಭಾವಿ, ಸಿದ್ದಣ್ಣಾ ಮಾಯನ್ನವರ, ಬಸವರಾಜ ಭಜಂತ್ರಿ, ಮುತ್ತೆಪ್ಪ ಇಮಡೇರ, ಮುತ್ತೆಪ್ಪ ತೆಳಗಡೆ, ಹನಮಂತ ನಂದಿ, ನಾಗಪ್ಪ ಗಾಡಿವಡ್ಡರ, ಗುತ್ತಿಗೆದಾರ ಮಹಾದೇವ ಹಾರೂಗೇರಿ, ಪಪಂ ಸದಸ್ಯರು ವೇದಿಕೆಯಲ್ಲಿದ್ದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಅಭಿವೃದ್ಧಿಪರ ಕಾರ್ಯಗಳನ್ನು ವಿವರಿಸಿ, 224 ಕ್ಷೇತ್ರಗಳ ಶಾಸಕರಲ್ಲಿ ಬಾಲಚಂದ್ರ ಅವರಂತಹ ಶಾಸಕರು ಸಿಗುವುದು ವಿರಳ. ಇವರೊಬ್ಬ ನಾಡಿನ ಅಪ್ರತಿಮ ಜಾತ್ಯಾತೀತ ನಾಯಕ ಎಂದು ಬಣ್ಣಿಸಿದರು. ಮುಖ್ಯಾಧಿಕಾರಿ ಅರುಣಕುಮಾರ ಸ್ವಾಗತಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ನಾಗರೀಕರು ತೆರೆದ ವಾಹನದಲ್ಲಿ ವಿವಿಧ ವಾಧ್ಯವೃಂದಗಳೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ನಡೆಸಿದರು.
ಬಾಲಚಂದ್ರ ಜಾರಕಿಹೊಳಿ ಅವರು 4.25 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಶೌಚಾಲಯ ನಿರ್ಮಾಣಕ್ಕೆ 1 ಪ್ಲಾಟ್ ನಿವೇಶನ ನೀಡಿದ ನೀಲಕಂಠ ಕಪ್ಪಲಗುದ್ದಿ ಅವರನ್ನು ಬೆಳ್ಳಿ ಗಧೆ ನೀಡಿ ಸತ್ಕರಿಸಲಾಯಿತು.

ಬಾಲಚಂದ್ರ ಜಾರಕಿಹೊಳಿ : ತಮ್ಮ 60ನೇ ವರ್ಷಕ್ಕೆ ರಾಜಕೀಯ ನಿವೃತ್ತಿ ಪಡೆಯುವುದು ಅಚಲ. ನಿವೃತ್ತಿ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಜನರ ಮನಸ್ಸಿನಲ್ಲಿ ಬಾಲಚಂದ್ರ ಅವರಂತಹ ಶಾಸಕರೊಬ್ಬರು ಇದ್ದರೆಂಬುದನ್ನು ಜನರು ಸ್ಮರಿಸಬೇಕು. ಅಂತಹ ಸ್ಮರಣೀಯ ಕಾರ್ಯಗಳನ್ನು ನೆರವೇರಿಸಿ ಪ್ರೀತಿಯಿಂದ ಜನರು ಬೀಳ್ಕೊಡಬೇಕು. ಇದು ನನ್ನಾಸೆ. ಸೋಮವಾರದಿಂದ 20 ದಿನಗಳವರೆಗೆ ಹಿಡಕಲ್ ಜಲಾಶಯದಿಂದ ಬಿಡಲಾಗುತ್ತಿರುವ ನೀರನ್ನು ರೈತರು ಸದ್ಬಳಕೆ ಮಾಡಿಕೊಳ್ಳಿ. ರೈತರ ಬೆಳೆಗಳ ಅನುಕೂಲಕ್ಕೆ ಬಿಡಲಾಗುತ್ತಿರುವ ಕೊನೆಯ ನೀರು ಇದಾಗಿದೆ.

Related posts: