RNI NO. KARKAN/2006/27779|Friday, November 22, 2024
You are here: Home » breaking news » ಬೆಳಗಾವಿ:ಗ್ರಾಮೀಣ ಪ್ರತಿಭೆಗಳಿಗೆ ಸತೀಶ್ ಶುಗರ್ಸ ಆರ್ವಾಡ್ಸ ಸ್ವೂರ್ಥಿಯಾಗಿದೆ : ವೈಷ್ಣವಿ ಕಡಲಕರ

ಬೆಳಗಾವಿ:ಗ್ರಾಮೀಣ ಪ್ರತಿಭೆಗಳಿಗೆ ಸತೀಶ್ ಶುಗರ್ಸ ಆರ್ವಾಡ್ಸ ಸ್ವೂರ್ಥಿಯಾಗಿದೆ : ವೈಷ್ಣವಿ ಕಡಲಕರ 

ಗ್ರಾಮೀಣ ಪ್ರತಿಭೆಗಳಿಗೆ ಸತೀಶ್ ಶುಗರ್ಸ ಆರ್ವಾಡ್ಸ ಸ್ವೂರ್ಥಿಯಾಗಿದೆ : ವೈಷ್ಣವಿ ಕಡಲಕರ 

ಬೆಳಗಾವಿ ಫೆ 10 : ಸತೀಶ ಶುಗರ್ಸ ಆರ್ವಾಡ್ಸ ಕಾರ್ಯಕ್ರಮ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಸ್ವೂರ್ಥಿಯಾಗಿದೆ ಎಂದು ಕಳೆದ ಸಾಲಿನ ಭಾಷಣ ಸ್ವರ್ಧೆಯ ವಿಜೇತೆ    ಬೆಳಗಾವಿ   ಮರಾಠಿ ವಿದ್ಯಾನಿಕೇತ ಶಾಲೆಯ ವಿದ್ಯಾರ್ಥಿನಿ ಕುಮಾರಿ ವೈಷ್ಣವಿ   ಕಡಲಕರ ಹೇಳಿದಳು

ಅವಳು ಶನಿವಾರದಂದು ಸಾಯಂಕಾಲ ಬೆಳಗಾವಿಯ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಸತೀಶ ಜಾರಕಿಹೊಳಿ ಫೌಂಡೇಶನ್ ಅಡಿಯಲ್ಲಿ ಹಮ್ಮಿಕೊಂಡಿದ್ದ 5ನೇ ಸತೀಶ್ ಶುಗರ್ಸ ಆರ್ವಾಡ್ಸ ಸಂಸ್ಕೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಳು

ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ದೊಡ್ಡ ಕನಸುಗಳನ್ನು ಕಟ್ಟಿಕೊಂಡು ಅವಗಳನ್ನು ಸಕಾರಗೋಳಿಸುವ ದೀಸೆಯಲ್ಲಿ ಪ್ರಯತ್ನಿಸಿ ಬೇಕು ಅಂದಾಗ ತಮ್ಮ ಪ್ರತಿಭೆಗಳನ್ನು ಗಗನದೆತ್ತರಕ್ಕೆ ಒಯ್ಯಲು ಸಾಧ್ಯ ಇದಕ್ಕೆ ಸಹಕಾರಿಯಾಗಿ ಕಳೆದ ಹಲವು ವರ್ಷಗಳಿಂದ ಸತೀಶ ಜಾರಕಿಹೊಳಿ ಅವರು ಪ್ರೋತ್ಸಾಹಿಸುತ್ತಿದ್ದಾರೆ ಈ ಅದ್ಬುತ ಅವಕಾಶವನ್ನು ಎಲ್ಲ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೋಳಬೇಕೆಂದು ಕುಮಾರಿ ವೈಷಣವಿ ಹೇಳಿದಳು

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವಿನಾಶ ಪೋತದಾರ ವಿದ್ಯಾರ್ಥಿಗಳು ಬೇರೆಯವರೆ ಮೇಲೆ ಅವಲಂಭಿತವಾಗದೆ ಸಾವಲಂಬಿಯಾಗಿ ತಮ್ಮ ಬದುಕನ್ನು ಕಟ್ಟಕೋಳಬೇಕೆಂದು ಆ ನೀಟ್ಟಿನಲ್ಲಿ ಪ್ರಯತ್ನ ಮಾಡಿದರೆ ವಿದ್ಯಾರ್ಥಿಗಳು ಯಶಸ್ಸು ಗಳಿಸಲು ಸಾಧ್ಯ ಎಂದು ಹೇಳಿದರು

ವೇದಿಕೆಯಲ್ಲಿ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ , ಕುಮಾರ್ ರಾಹುಲ್ ಜಾರಕಿಹೊಳಿ , ಅಬಕಾರಿ ಇಲಾಖೆ ಜಂಟಿ ಆಯುಕ್ತ ಡಾ. ಮಂಜುನಾಥ ,  ಕುಮಾರ ಸ್ವರಭ ಧಾಮನೇಕರ ,      ವಾಯ್ ವಿ . ಪಾಟೀಲ್ , ಅಜೀತ ಸಿದ್ದನ್ನವರ, ಶರತ ಪೈ , ಕಾರ್ಯದರ್ಶಿ ಎಸ್.ಎ. ರಾಮಗಾನಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು

Related posts: