RNI NO. KARKAN/2006/27779|Thursday, December 12, 2024
You are here: Home » breaking news » ಖಾನಾಪುರ:ಸುಳ್ಳು ಹೇಳಿ ಜನರನ್ನು ಮೋಸ ಮಾಡುವವರನ್ನು ನಂಬಬೇಡಿ: ನಾಶೀರ ಬಾಗವಾನ

ಖಾನಾಪುರ:ಸುಳ್ಳು ಹೇಳಿ ಜನರನ್ನು ಮೋಸ ಮಾಡುವವರನ್ನು ನಂಬಬೇಡಿ: ನಾಶೀರ ಬಾಗವಾನ 

ಸುಳ್ಳು ಹೇಳಿ ಜನರನ್ನು ಮೋಸ ಮಾಡುವವರನ್ನು ನಂಬಬೇಡಿ: ನಾಶೀರ ಬಾಗವಾನ

ಖಾನಾಪುರ ಫೆ 11: ಪರೋಪಕಾರಾರ್ಥಂ ಇದಂ ಶರೀರಂ ಎನ್ನುವಂತೆ ಇಡೀ ಖಾನಾಪುರ ಮತ ಕ್ಷೇತ್ರದ ದೀನ, ದಲಿತರ, ರೈತರ, ಕೂಲಿ ಕಾರ್ಮಿಕರ ಅಭಿವೃದ್ಧಿಯೇ ನನ್ನ ಗುರಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಉಧ್ಯಮಿ ನಾಶೀರ ಬಾಗವಾನ ಹೇಳಿದರು.
ತಾಲೂಕಿನ ಇಟಗಿ ಗ್ರಾಮದ ಕಳಸನಟ್ಟಿ ಬೀದಿಯ ಶ್ರೀ ದುರದುಂಡೇಶ್ವರ ದೇವಸ್ಥಾನದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಖಾನಾಪುರ ತಾಲೂಕಿಗೆ ನೀರಾವರಿ ಯೋಜನೆ ಕಾರ್ಯಗತಗೊಳಿಸುವುದು ನನ್ನ ಪ್ರಥಮ ಆಧ್ಯತೆಯಾಗಿದೆ. ಯುವಕರಿಗೆ ಕಬ್ಬಡ್ಡಿ, ಕ್ರಿಕೇಟ್, ಸ್ಲೋಬೈಕ್ ಸ್ಪರ್ಧೆ, ಎತ್ತುಗಳ ಶರತ್ತು, ಬಡವರ ಕಲ್ಯಾಣಕ್ಕೆ, ದೇವಾಲಯಗಳ ನಿರ್ಮಾಣ ಹೀಗೆ ಹತ್ತು ಹಲವು ಕಾರ್ಯಗಳನ್ನು ನನ್ನ ಸ್ವಂತ ಹಣದಿಂದ ಸಹಾಯ-ಸಹಕಾರ ನೀಡಿದ್ದೇನೆ. ಬೇರೆಯವರು ನಮ್ಮ ತಾಲೂಕಿನಲ್ಲಿ ಇಲ್ಲಸಲ್ಲದ ಕಾರಣಗಳನ್ನು ಹೇಳಿ ಮರಳು ಮಾಡುತ್ತಿದ್ದಾರೆ. ನೀವು ಅಂತವರನ್ನು ನಂಬಬೇಡಿ ಎಂದರು.
ಶಾಸಕ ಅರವಿಂದ ಪಾಟೀಲ ಮಾತನಾಡಿ, ಪಾರಿಶ್ವಾಡ ಮತ್ತು ಕಕ್ಕೇರಿ ಜಿಪಂ ಮತಕ್ಷೇತ್ರಗಳಲ್ಲಿ 98 ಕೋಟಿ ರೂಪಾಯಿಗಳ ವಿವಿಧ ಕಾಮಗಾರಿಗಳನ್ನು ಮಾಡಿದ್ದೇನೆ. ಬಾಲಭವನ ಅಧ್ಯಕ್ಷೆ ಡಾ.ಅಂಜಲಿತಾಯಿ ನಿಂಬಾಳ್ಕರ್ ಅವರನ್ನು ಹೆಸರನ್ನು ಹೇಳದೇ, ಕೆಲವರು ಬರೀ ಪ್ರಚಾರಕ್ಕೆ (ಸೀರೆ, ತಾಟು) ಹೆಸರಲ್ಲಿ ಗಿಮಿಕ್ ಮಾಡುತ್ತಿದ್ದಾರೆ ಅವರನ್ನು ನಂಬಬೇಡಿ. ನಮ್ಮ ತಾಲೂಕಿಗೆ ಸೀರೆ ತಾಟು ಪಡೆಯುವ ಬಡತನ ಬಂದಿಲ್ಲ ಎಂದರು. ರಾಜ್ಯಸಭಾ ಚುನಾವಣೆಯಲ್ಲಿ ನಾನು 8 ಕೋಟಿ ಹಣ ಪಡೆದಿದ್ದೇನೆ ಎಂದು ಡಾ.ಅಂಜಲಿತಾಯಿ ನಿಂಬಾಳ್ಕರ್ ಆರೋಪಿಸುತ್ತಿದ್ದಾರೆ. ಅದನ್ನು ಅವರು ಸಾಬಿತುಪಡಿಸಲಿ ಎಂದು ಸವಾಲು ಹಾಕಿದರು.
ತಾಪಂ. ಸದಸ್ಯ ಬಸವರಾಜ ಸಾಣಿಕೊಪ್ಪ, ಜಿಪಂ ಸದಸ್ಯ ಜೀತೇಂದ್ರ ಮಾದಾರ, , ಹನಿವೆಲ್ ಶಾಲೆಯ ಸಂಸ್ಥಾಪಕ ಸುಭಾಸ ಗುಳಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಾಕ್ಷ ಪ್ರಮೋದ ಕೋಚೇರಿ, ಬಾಬಣ್ಣ ಪಾಟೀಲ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ನಡೆಯಿತು.
ಹಿರೇಮುನವಳ್ಳಿ ಶಾಂಡಿಲೇಶ್ವರ ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯ ಶ್ರೀಗಳು, ದೇಗುಲಹಳ್ಳಿಯ ಶ್ರೀ ಗುರು ಮಡಿವಾಳೇಶ್ವರ ಮಠದ ಶ್ರೀ ವೀರೇಶ್ವರ ಶ್ರೀಗಳು ಸಾನಿಧ್ಯ ವಹಿಸಿದ್ದರು.
ಶ್ರೀ ಪಾಲಾಕ್ಷ ಮಹಾಸ್ವಾಮೀಜಿ ಹಾಗೂ ದತ್ತವಾಡ ಶ್ರೀ ಬಾಬಾ ಮಹಾರಾಜ ಆಶ್ರಮದ ಡಾ.ಶ್ರೀ ಅದೃಶ್ಯಶಿವಯೋಗೀಶ್ವರರು ದಿವ್ಯ ಸಾನಿಧ್ಯ ವಹಿಸುವರು.
ಈ ಸಂಧರ್ಭದಲ್ಲಿ ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮೀ ಗ್ರುಪ್‍ನ ಸಂಸ್ಥಾಪಕ ವಿಠ್ಠಲ ಹಲಗೇಕರ, ತಾಲೂಕ ಬಿಜೆಪಿ ಅಧ್ಯಕ್ಷ ವಿಠ್ಠಲ ಪಾಟೀಲ, ಬಿಜೆಪಿ ಮುಖಂಡರಾದ ಬಾಬುರಾವ ದೇಸಾಯಿ, ಮಂಜುಳಾ ಕಾಪಸೆ, ಮುದ್ದಪ್ಪ ತುರಮರಿ, ಬಸವಂತಪ್ಪ ಕರಮಳ್ಳನವರ, ಪ್ರಗತಿಪರ ರೈತ ದುಂಡಪ್ಪ ತುರಮರಿ, ಜಯವಂತ ಖಾನಾಪೂರಕರ, ಮಂಜುನಾಥ ಸುಣಗಾರ, ಪ್ರಶಾಂತ ಸಾಣಿಕೊಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

Related posts: