ಖಾನಾಪುರ:ಬೆಳಗಾವಿ ವಿಭಾಗದ ಅರಣ್ಯ ಪ್ರದೇಶದಲ್ಲಿ, ಖಾಯಂ ಆಗಿ ವಾಸಿಸುವುದು ಒಂದೇ ಆನೆ: ಮೇ ತಿಂಗಳಲ್ಲಿ ಆನೆಗಳ ಗಣತಿ ಕಷ್ಟಕರ
ಬೆಳಗಾವಿ ವಿಭಾಗದ ಅರಣ್ಯ ಪ್ರದೇಶದಲ್ಲಿ, ಖಾಯಂ ಆಗಿ ವಾಸಿಸುವುದು ಒಂದೇ ಆನೆ: ಮೇ ತಿಂಗಳಲ್ಲಿ ಆನೆಗಳ ಗಣತಿ ಕಷ್ಟಕರ
ವಿಶೇಷ ವರದಿ: ಕಾಶೀಮ ಹಟ್ಟಿಹೊಳ್ಳಿ, ಖಾನಾಪೂರ
ಖಾನಾಪುರ ಮೇ 21: ಬೆಳಗಾವಿ ವಿಭಾಗದ ಅರಣ್ಯ ಪ್ರದೇಶದಲ್ಲಿ ಖಾಯಂ ಆಗಿ ಒಂದು ಆನೆಯ ರಹವಾಸಿ ಸ್ಥಾನವಿದೆ. ಆದ್ದರಿಂದ ಈ ಅರಣ್ಯ ಪ್ರದೇಶದಲ್ಲಿ ಪ್ರತಿ 5 ವರ್ಷಕೊಮ್ಮೆ ಜರುಗುವ ಆನೆ ಗಣತಿ ಕಾರ್ಯವೂ, ಮೇ ತಿಂಗಳಲ್ಲಿ ನಡೆಯುವದರಿಂದ ಏಣಿಕೆ ಕಾರ್ಯ ತುಂಬಾ ಕಷ್ಟಕರವಾಗಿದೆ. ಏಕೆಂದರೆ, ಈ ಅರಣ್ಯ ಪ್ರದೇಶದಲ್ಲಿ ಸೆಪ್ಟೆಂಬರ್ ರಿಂದ ಜನವರಿ ವರೆಗೆ ಸುಮಾರು 15 -16 ಆನೆಗಳು ಪಕ್ಕದ ಅರಣ್ಯ ವಲಯಗಳಾದ ಹಳಿಯಾಳ/ದಾಂಡೇಲಿ ಪ್ರದೇಶದಿಂದ ನಾಗರಗಾಳಿ, ಲೋಂಡಾ, ಗೊಲಿಹಳ್ಳಿ, ಮಹಾರಾಷ್ಟ್ರ ಅರಣ್ಯ ಪ್ರದೇಶದಿಂದ ಕಾಕತಿಡಡ್ಡಿ & ಶಟ್ಟಿಹಳ್ಳಿ ಹಾಗೂ ಬೆಳಗಾವಿ ಅರಣ್ಯ ಪ್ರದೇಶದಿಂದ ದಾಮನೆ ಮತ್ತು ಕಣಕುಂಬಿ ಪ್ರದೇಶದಲ್ಲಿ ಬಂದು ವಾಸಿಸುತ್ತವೆ..
ಬೆಳಗಾವಿ ವಿಭಾಗದ ಅರಣ್ಯ ಪ್ರದೇಶವಾದ ಗೊಲಿಹಳ್ಳಿ ಅರಣ್ಯ ವಲಯದ ಕಿತ್ತೂರ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಡು ಪ್ರಾಣಿಗಳಾದ ಕಾಡುಕೊಣ, ಚಿಗರೆ, ಜಿಂಕೆ, ಮೊಲ ಮೊದಲಾದ ಪ್ರಾಣಿಗಳು ಇರುವುದರಿಂದ ನೀರಿನ ತುಂಬಾ ಅವಶ್ಯಕತೆ ಇದೆ. ಆದ್ದರಿಂದ ನಾವು ಮುಖ್ಯವಾಗಿ ಮಾರ್ಚದಿಂದ ಮೇ ತಿಂಗಳ ವರೆಗೆ ನೀರಿನ ಸಮಸ್ಯೆ ಎದುರಿಸುತ್ತೇವೆ. ಹೀಗಾಗಿ ನಾವು ಮುಂಜಾಗೃತವಾಗಿ ಪ್ರಾಣಿಗಳಿಗೆ ನೀರಿನ ತೊಂದರೆ ಆಗದ ಹಾಗೆ ನೋಡಿಕೊಳ್ಳುವುದರ ಸಲುವಾಗಿ ಅವಶ್ಯವಿರುವ ಅರಣ್ಯ ವಲಯದಲ್ಲಿ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡುತ್ತೇವೆ.
1970 ರಲ್ಲಿ ಮೊಟ್ಟ ಮೊದಲ ಬಾರಿಗೆ ಆನೆ ಗಣತಿ ಕಾರ್ಯ ಆರಂಭವಾಗಿದ್ದು ಗಣತಿ ಕಾರ್ಯವನ್ನು 3 ಹಂತದಲ್ಲಿ ಮಾಡುತ್ತೇವೆ. ಮೊದಲನೇಯದಾಗಿ ಬ್ಲಾಕ್ ಹಂತ ಏಣಿಕೆ 2ನೇಯದಾಗಿ ವಾಟರ್ ಹೊಲ್ ಏಣಿಕೆ ಕೊನೆಯದಾಗಿ ಲೈನ್ ಕೌಂಟಿಂಗ್ (ಲದ್ದಿ) ಮುಖಾಂತರ ದೂರದ ಮಾಪನ ಅಳವಡಿಸಿ ಆನೆ ಗಣತಿ ಕಾರ್ಯವನ್ನು ಮಾಡಲಾಗುತ್ತದೆ.
ಭೀಮಗಡ ವನ್ಯಜೀವಿ ಧಾಮದಲ್ಲಿ ಆನೆಗಳ ಖಾಯಂ ವಾಸಸ್ಥಾನವಿಲ್ಲ ಆದರೆ ಆನೆಗಳು ಆಹಾರ ಅರಸಿ ದಾಂಡೇಲಿ ಅಭಿಯಾರಣ್ಯದಿಂದ ವಲಸಿ ಬರುತ್ತವೆ. ಅದರ ಮಾಹಿತಿ ಈ ಗಣತಿ ಕಾರ್ಯದಲ್ಲಿ ದೊರೆಯುತ್ತದೆ ಎಂದು ಇಲಾಖೆರವರು ಊಹಿಸಿರುತ್ತಾರೆ, ಆದರೆ ಮೇ ತಿಂಗಳಲ್ಲಿ ಆನೆ ಗಣತಿ ಆಗುವುದರಿಂದ ಅಂಕಿ ಸಂಖ್ಯೆ ಸಿಗುವುದು ತುಂಬಾ ಕಷ್ಟಕರವಾಗುದೆ ಎನ್ನುವ ಮಾತುಗಳು ಇಲ್ಲಿ ಕೇಳಿಬರುತ್ತಿವೆ.
ಬಸವರಾಜ ವಿ. ಪಾಟೀಲ, ಉಪ ಅರಣ್ಯ ಸಂರಕ್ಷಣಾಧಿಕಾರಿ ಬೆಳಗಾವಿ:
- ಮುಖ್ಯವಾಗಿ ಮೇ ತಿಂಗಳಲ್ಲಿ ಆನೆ ಗಣತಿ ಕಾರ್ಯವೂ ನಡೆಯುವುದರಿಂದ ನಮ್ಮ ವಿಭಾಗದಿಂದ ಸರಿಯಾದ ಆನೆಗಳ ಅಂಕಿ ಅಂಶಗಳನ್ನು ಕಂಡು ಹಿಡಿಯಲು ತುಂಬಾ ಕಷ್ಟಕರ ಏಕೆಂದರೆ, ಜನವರಿ ತಿಂಗಳಲ್ಲೇ ಹೊರಗಡೆಯಿಂದ ವಲಸೆ ಬಂದಂತಹ ಆನೆಗಳು ಮರಳಿ ತಾವು ವಾಸಿಸುವ ಕಾಡಿಗೆ ಹೊರಟು ಹೊಗುತ್ತವೆ. ಆದ್ದರಿಂದ 3 ಹಂತದ ಕಾರ್ಯವನ್ನು ಮಾಡಿದರೂ ಅಂಕಿ ಸಂಖ್ಯೆ ಕಂಡು ಹಿಡಿಯಲು ಆಗುವುದಿಲ್ಲ. ಜೊತೆಗೆ ಕಾಡು ಪ್ರಾಣಿಗಳಿಗೆ ತೊಂದರೆ ಆಗದ ಹಾಗೆ ನೋಡಿಕೊಳ್ಳುವುದೇ ನನ್ನ ಹಾಗೂ ನಮ್ಮ ಇಲಾಖೆಯ ಜವಾಬ್ದಾರಿಯಾಗಿದೆ ಎಂದು ಹೆಮ್ಮೆಯಿಂದ ಹೆಳುತ್ತಾರೆ.