RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಗ್ರಾಮಿಣ ಪ್ರದೇಶದ ಕ್ರೀಡಾ ಪಟ್ಟುವಿಗೆ ಗೆಳೆಯರಿಂದ ಆರ್ಥಿಕ ಸಹಾಯ

ಗೋಕಾಕ:ಗ್ರಾಮಿಣ ಪ್ರದೇಶದ ಕ್ರೀಡಾ ಪಟ್ಟುವಿಗೆ ಗೆಳೆಯರಿಂದ ಆರ್ಥಿಕ ಸಹಾಯ 

ಗ್ರಾಮಿಣ ಪ್ರದೇಶದ ಕ್ರೀಡಾ ಪಟ್ಟುವಿಗೆ ಗೆಳೆಯರಿಂದ ಆರ್ಥಿಕ ಸಹಾಯ

ಗೋಕಾಕ ಫೆ 11: ಗ್ರಾಮಿಣ ಪ್ರದೇಶದ ಕಡು ಬಡತನದದಲ್ಲಿ ಜನಿಸಿದ ಕ್ರೀಡಾ ಪಟ್ಟು ರಾಷ್ಟ್ರಮಟ್ಟದ ಹಾಪ್ ಮ್ಯಾರಾಥನ ಸ್ವರ್ಧೆಯಲ್ಲಿ ಆರ್ಥಿಕ ಬಿಕ್ಕಟಿನಿಂದ ಭಾಗ ವಹಿಸಲು ಅಸಾಯಕನಾದಾಗ ಗೋಕಾಕದ ಯುವಕರು ಈ ಯುವ ಪ್ರತಿಭೆಗೆ ಆರ್ಥಿಕ ಸಹಾಯತೆ ಮಾಡಿ ಮಾನವೀಯತೆ ಮೆರದಿದ್ದಾರೆ .

ಶನಿವಾರದಂದು ನಗರದ ಎಲ್.ಡಿ.ಎಸ್ ಸ್ಟೂಡಿಯೋದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಇತನಿಗೆ ಆರ್ಥಿಕ ಸಹಾಯ ಮಾಡಿ ಶುಭಕೋರಲಾಯಿತು

ಗೋಕಾಕ ತಾಲೂಕಿನ ಬಿರನಗಡ್ಡಿ ಗ್ರಾಮದ ಪ್ರಕಾಶ ಬಸಪ್ಪ ತೆಳಗಡೆ ಇತನು ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಹಾಫ್ ಮ್ಯಾರಥಾನ ಸ್ವರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಷ್ರಮಟ್ಟಕೆ ಆಯ್ಕೆಯಾಗಿದ್ದು ಹಣಕಾಸಿನ ಕೋರತೆ ಹಿನ್ನಲೆಯಲ್ಲಿ ಸ್ವರ್ಧೆಯಲ್ಲಿ ಭಾಗವಹಿಸಲು ಅಸಾಯಕನಾಗಿದ ಇತನನ್ನು ಗಮನಿಸಿದ ಎಲ್.ಡಿ.ಎಸ್ ಸ್ಟೂಡಿಯೋ , ಮನಸಾಕ್ಷೀ ಫೌಂಡೇಷನ್ , 5 ಓನ್ ಗ್ರೂಫ್ ನ ಸ್ನೇಹಿತರು ಸೂಮಾರು 20 ಸಾವಿರ ರೂ ಆರ್ಥಿಕ ಸಹಾಯ ಮಾಡಿ ಈ ಗ್ರಾಮಿಣ ಪ್ರತಿಭೆಗೆ ದೆಹಲಿ ಯಲ್ಲಿ ಮೂರು ತಿಂಗಳು ಕಾಲ ಜರಗುವ ರಾಷ್ಟ್ರಮಟ್ಟದ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಸಹಕಾರ ನೀಡಿದ್ದಾರೆ

ಈ ಸಂದರ್ಭದಲ್ಲಿ ಶಂಕರ ಯಮಕನಮರಡಿ , ಸಾಧಿಕ ಹಲ್ಯಾಳ , ಗುರು ಯಮಕನಮರಡಿ , ಮಲ್ಲಿಕಾರ್ಜುನ ಕರಜಗಿಮಠ , ಮುಗುಟ ಪೈಲವಾನ , ರಾಹುಲ ಕಲಾಲ , ಅಬ್ದುಲ್ ಪೀರಜಾದೆ, ಶಿವು ಶಿಂಗಳಾಪೂರ , ಮಾರುತಿ ಪ್ರಭುಗೋಳ, ಶಿವ ರುಸ್ತುಂಪೂರ , ರಿತೂ ಪೂಜಾರಿ, ಶರಣ ಬಿರಾದರ, ವಿಜಯ ಕಾಗಲೆ ಇತರರು ಉಪಸ್ಥಿತರಿದ್ದರು

Related posts: