ಬೆಳಗಾವಿ:5ನೇ ಸತೀಶ ಶುಗರ್ಸ ಅರ್ವಾಡ್ಸ ಸಾಂಸ್ಕೃತಿಕ ಹಬ್ಬಕ್ಕೆ ಅದ್ದೂರಿ ತೆರೆ
5ನೇ ಸತೀಶ ಶುಗರ್ಸ ಅರ್ವಾಡ್ಸ ಸಾಂಸ್ಕೃತಿಕ ಹಬ್ಬಕ್ಕೆ ಅದ್ದೂರಿ ತೆರೆ
ಬೆಳಗಾವಿ ಫೆ 12: ನಗರದ ಸರ್ದಾರ್ ಹೈಸ್ಕೂಲ್ ಕ್ರೀಡಾಂಗಣದಲ್ಲಿ ನಿರ್ಮಾಣವಾಗಿರುವ ಮೈಸೂರು ಅರಮನೆ ಮಾದರಿಯ ಭವ್ಯ ರಂಗ ಸಜ್ಜಿಕೆಯಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಷನ್ ಅಡಿಯಲ್ಲಿ ಜರುಗಿದ 5ನೇ ಸತೀಶ ಶುಗರ್ಸ್ ಅವಾಡ್ರ್ಸ್ ಕೊನೆಯ ದಿನದ ಅಂತಿಮ ಹಂತದ ಸಾಂಸ್ಕಂತಿಕ ಸ್ಪರ್ಧೆಯಲ್ಲಿ ಗಾಯನ , ಸೋಲೋ ಡಾನ್ಸ್ , ಸಮೂಹ ನೃತ್ಯ ಸ್ವರ್ಧೆಗಳು ಅತ್ಯಂತ ರೋಚಕತೆಯಿಂದ ತೆರೆಕಂಡವು
ಪ್ರೌಢಶಾಲಾ ವಿಭಾಗ, ಗಾಯನ ಸ್ಪರ್ಧೆ:- ನಂದಿತಾ ಮಠದ (ಪ್ರಥಮ) , ಮಹ್ಮದಖಾಜಿ ಮುಲ್ಲಾ (ದ್ವಿತೀಯ) , ತನ್ಮಯ ಶರಫ್ (ತೃತೀಯ) ಸ್ಥಾನ ಗಳಿಸಿ ಕ್ರಮವಾಗಿ 22, 16 , 12, ಸಾವಿರ ರೂಗಳ ನಗದು ಪುರಸ್ಕಾರ ಮತ್ತು ಆರ್ಕಷಕ ಟ್ರೋಫಿಗಳನ್ನು ಪಡೆದರು
ಪ್ರಾಥಮಿಕ ಶಾಲಾ ವಿಭಾಗ, ಗಾಯನ ಸ್ಪರ್ಧೆ:- ಸ್ವಾಥಿ ಸುತಾರ (ಪ್ರಥಮ) , ಅನಿಮಿಶಾ ಹೆಗಡೆ (ದ್ವಿತೀಯ) , ತನ್ವಿ ಇನಾಂದಾರ (ತೃತೀಯ) ಸ್ಥಾನ ಗಳಿಸಿ ಕ್ರಮವಾಗಿ 22, 16 , 12, ಸಾವಿರ ರೂಗಳ ನಗದು ಪುರಸ್ಕಾರ ಮತ್ತು ಆರ್ಕಷಕ ಟ್ರೋಫಿಗಳನ್ನು ಪಡೆದರು
ಕಾಲೇಜು ವಿಭಾಗ ಸೋಲೋ ಡ್ಯಾನ್ಸ್ ಸ್ಪರ್ಧೆ: ನಾರಾಯಣ ಕಾಟೆ (ಪ್ರಥಮ), ಶುಭಂ ಗಾವಡೆ (ದ್ವಿತೀಯ) , ಮನೋಹರ ಖೋಟೆ (ತೃತೀಯ) ಸ್ಥಾನ ಗಳಿಸಿ ಕ್ರಮವಾಗಿ 22, 16 , 12, ಸಾವಿರ ರೂಗಳ ನಗದು ಪುರಸ್ಕಾರ ಮತ್ತು ಆರ್ಕಷಕ ಟ್ರೋಫಿಗಳನ್ನು ಪಡೆದರು
ಪ್ರೌಢಶಾಲಾ ವಿಭಾಗ ಸಮೂಹ ನೃತ್ಯ ಸ್ವರ್ಧೆ : ಅನುಷ್ಕಾ ಬೆನಕಟ್ಟಿ ಮತ್ತು ತಂಡ (ಪ್ರಥಮ) , ಅಭಯ ಮತ್ತು ತಂಡ (ದ್ವಿತೀಯ) , ಸೋಹನ ಮತ್ತು ತಂಡ (ತೃತೀಯ) ಸ್ಥಾನ ಗಳಿಸಿ ಕ್ರಮವಾಗಿ 60, 50, 40 ಸಾವಿರ ರೂ ನಗದು ಹಾಗೂ ಆರ್ಕಷಕ ಟ್ರೋಫಿಗಳನ್ನು ತಮ್ಮದಾಗಿಸಿಕೊಂಡರು
ಕಾಲೇಜು ವಿಭಾಗ ಸಮೂಹ ನೃತ್ಯ ಸ್ವರ್ಧೆ : ವಾಸೀಮ್ ಜಿನಾಬಡೇ ಮತ್ತು ತಂಡ (ಪ್ರಥಮ) , ಗಣೇಶ ಮತ್ತು ತಂಡ (ದ್ವಿತೀಯ) , ನಮೀತಾ ಜಿ ಮತ್ತು ತಂಡ (ತೃತೀಯ) ಸ್ಥಾನ ಗಳಿಸಿ ಕ್ರಮವಾಗಿ 60, 50, 40 ಸಾವಿರ ರೂ ನಗದು ಹಾಗೂ ಆರ್ಕಷಕ ಟ್ರೋಫಿಗಳನ್ನು ತಮ್ಮದಾಗಿಸಿಕೊಂಡು ಬೀಗಿದರು
ಎಲ್ಲ ಸ್ವರ್ಧಾ ವಿಜೇತರಿಗೆ ಶಾಸಕ ಸತೀಶ ಜಾರಕಿಹೊಳಿ ನಗದು ಬಹುಮಾನ ನೀಡಿ ಗೌರವಿಸಿದರು ಈ ಸಂದರ್ಭದಲ್ಲಿ ಪ್ರೀಯಾಂಕಾ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ, ಅಜಿತ ಸಿದ್ದನ್ನವರ , ಎಸ್.ಎ.ರಾಮಗಾನಟ್ಟಿ ,ರಿಯಾಜ ಚೌಗಲಾ ಉಪಸ್ಥಿತರಿದ್ದರು