RNI NO. KARKAN/2006/27779|Monday, December 23, 2024
You are here: Home » breaking news » ಘಟಪ್ರಭಾ: ನಾಡ ಕಛೇರಿ ಪ್ರಾರಂಭಿಸುವಂತೆ ಯುವ ಸೇನೆ ಆಗ್ರಹ

ಘಟಪ್ರಭಾ: ನಾಡ ಕಛೇರಿ ಪ್ರಾರಂಭಿಸುವಂತೆ ಯುವ ಸೇನೆ ಆಗ್ರಹ 

ಘಟಪ್ರಭಾದಲ್ಲಿ ನಾಡ ಕಛೇರಿ ಪ್ರಾರಂಭಿಸುವಂತೆ ಯುವ ಸೇನೆ ಆಗ್ರಹ

ಘಟಪ್ರಭಾ ಫೆ 12 : ನೂತನ ಘಟಪ್ರಭಾ ಹೋಬಳ್ಳಿಯನ್ನು ರಚಿಸಿ ನಾಡ ಕಛೇರಿಯನ್ನು ಘಟಪ್ರಭಾದಲ್ಲಿ ಪ್ರಾರಂಭಿಸಬೇಕೆಂದು ಆಗ್ರಹಿಸಿ ಕರ್ನಾಟಕ ಯುವ ಸೇನೆ ಸಂಘಟನೆಯ ಕಾರ್ಯಕರ್ತರು ಸೋಮವಾರದಂದು ಇಲ್ಲಿಯ ಮೃತ್ಯುಂಜಯ ವೃತ್ತದಲ್ಲಿ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ ಸಂಘಟನೆಯ ಜಿಲ್ಲಾಧ್ಯಕ್ಷ ವೀರಣ್ಣ ಸಂಗಮನವರ ಮಾತನಾಡಿ, ಅರಭಾಂವಿಯಲ್ಲಿರುವ ನಾಡ ಕಛೇರಿಯು ಹೊಸದಾಗಿ ರಚಣೆಯಾದ ಮೂಡಲಗಿ ತಾಲೂಕಿಗೆ ಸೇರ್ಪಡೆಯಾಗುತ್ತಿರುವುದರಿಂದ ಗೋಕಾಕ ತಾಲೂಕಾ ವ್ಯಾಪ್ತಿಯಲ್ಲಿ ಬರುವ ಪಾಮಲದಿನ್ನಿ, ಘಟಪ್ರಭಾ ಮಲ್ಲಾಪೂರ ಪಿ.ಜಿ, ಧುಪದಾಳ ಕೊಣ್ಣೂರ ನಂದಗಾವ ಸಾವಳಗಿ, ಖಾನಾಪೂರ ಶಿಂದಿಕುರಬೇಟ ಸೇರಿದಂತೆ 10 ಕ್ಕೂ ಹೆಚ್ಚು ಗ್ರಾಮಗಳ ಜನರು ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ನೂತನ ಘಟಪ್ರಭಾ ಹೋಬಳ್ಳಿಯನ್ನು ರಚಿಸಿ ನಾಡ ಕಛೇರಿಯನ್ನು ಘಟಪ್ರಭಾದಲ್ಲಿ ಪ್ರಾರಂಭಿಸಬೇಕೆಂದು ಆಗ್ರಹಿಸಿದರು.
ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕೆಂಪಣ್ಣ ಚೌಕಶಿ ಮಾತನಾಡಿ, ಜಮೀನ ಉತಾರ, ಜಾತಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ಇನ್ನೂ 40 ಕ್ಕೂ ಹೆಚ್ಚು ಸರ್ಕಾರಿ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಅರಭಾಂವಿ ನಾಡ ಕಛೇರಿ ಮೇಲೆ ಅವಲಂಬಿತರಾಗಿದ್ದಾರೆ. ನೂತನ ನಾಡ ಕಛೇರಿಯನ್ನು ಪ್ರಾರಂಬಿಸಲು ಧುಪದಾಳ ಗ್ರಾಮ ಪಂಚಾಯತಿಯವರು ಕಟ್ಟಡ ನೀಡುವುದಾಗಿ ಹೇಳಿರುವುದರಿಂದ ಕೂಡಲೇ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಉಪ ತಹಶೀಲ್ದಾರ ಎಲ್.ಎಚ್.ಭೋವಿ ಅವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟಣಾ ನಿರತರಿಂದ ಮನವಿ ಸ್ವಿಕರಿಸಿ ಮಾತನಾಡಿ ಅವರು ತಮ್ಮ ಮನವಿಯನ್ನು ಮೇಲಾಧಿಕಾರಿ ಕಳುಹಿಸಿ ಸೂಕ್ತ ಪರಿಹಾರ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಈ ಸಂದರ್ಭದಲ್ಲಿ ಸಂಘನೆಯ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಭರಮು ಗಾಡಿವಡ್ಡರ, ದಸ್ತಗೀರ ಜಮಾದಾರ, ಕುಮಾರ ಮೇದಾರ, ಭಿಮಶಿ ಗಂಟೆನ್ನವರ, ಶಿವರಾಜ ಚಿಗಡೋಳ್ಳಿ, ನೀತಿನ ದೇಶಪಾಂಡೆ, ಫರೀದಾ ಮುಲ್ಲಾ, ಶಂಕರ ಖೀಲಾರಿ, ಅರ್ಜುನ ಗಂಡವ್ವಗೊಳ, ರಿಯಾಜ ಮುಲ್ಲಾ, ಸ್ವಾಮಿ ಕೋಮಾರಿ, ಗಂಗಪ್ಪಾ ಗಂಟೆನ್ನವರ, ಮಂಜುನಾಥ ಸಂಕನ್ನವರ, ಶಂಕರ ಮುಗ್ಗನವರ, ಸಾಯಣ್ಣಾ ಕೋಮಾರಿ, ಶ್ರೀಕಾಂತ ಮಹಾಜನ, ಮಾಯಪ್ಪ ಸಂಕನವರ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

Related posts: