RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ನಗರೋತ್ಥಾನ ಯೋಜನಾನುಷ್ಠಾನದಿಂದ ಮಲ್ಲಾಪೂರ ಪಿ.ಜಿ ಪಟ್ಟಣ ಸುಂದರವಾಗಲಿದೆ : ಸಚಿವ ರಮೇಶ

ಘಟಪ್ರಭಾ:ನಗರೋತ್ಥಾನ ಯೋಜನಾನುಷ್ಠಾನದಿಂದ ಮಲ್ಲಾಪೂರ ಪಿ.ಜಿ ಪಟ್ಟಣ ಸುಂದರವಾಗಲಿದೆ : ಸಚಿವ ರಮೇಶ 

ನಗರೋತ್ಥಾನ ಯೋಜನಾನುಷ್ಠಾನದಿಂದ ಮಲ್ಲಾಪೂರ ಪಿ.ಜಿ ಪಟ್ಟಣ ಸುಂದರವಾಗಲಿದೆ : ಸಚಿವ ರಮೇಶ

ಘಟಪ್ರಭಾ ಫೆ 12: ಮಲ್ಲಾಪೂರ ಪಿ.ಜಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ ಮಂಜೂರಾದ 4.25 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಹಕಾರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಅವರು ಮಲ್ಲಾಪೂರ ಪಿ.ಜಿ ಪಟ್ಟಣದ ದನಗಳ ಪೇಟೆಯಲ್ಲಿ ಸೋಮವಾರ ಪಟ್ಟಣ ಪಂಚಾಯತಿಯಿಂದ ಜರುಗಿದ 4.25 ಕೋಟಿ ರೂ. ವೆಚ್ಚದ ನಗರೋತ್ಥಾನ-3 ಯೋಜನೆಯಡಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸದರಿ ಅನುದಾನದಲ್ಲಿ ರಸ್ತೆಗಳ ಅಭಿವೃದ್ಧಿ, ಒಳಚರಂಡಿ ಮತ್ತು ಶೌಚಾಲಯಗಳ ನಿರ್ಮಾಣ ಹಾಗೂ ಕುಡಿಯುವ ನೀರಿಗಾಗಿ ಜಲಸಂಗ್ರಹಾಲಯ ನಿರ್ಮಿಸಲಾಗುವುದು. ನಗರೋತ್ಥಾನ ಯೋಜನಾನುಷ್ಠಾನದಿಂದ ಮಲ್ಲಾಪೂರ ಪಿ.ಜಿ ಪಟ್ಟಣ ಸುಂದರವಾಗಲಿದೆ. ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿರುವುದರಿಂದ ಅಭಿವೃದ್ಧಿಗಾಗಿ ಸರ್ಕಾರದಿಂದ ಪ್ರತಿವರ್ಷ ಹೆಚ್ಚಿನ ಅನುದಾನ ಹರಿದುಬರಲಿದೆ. ಬಾಕಿ ಉಳಿದಿರುವ ಕಾಮಗಾರಿಗಳನ್ನು ಬರಲಿರುವ ಚುನಾವಣೆಯೊಳಗೆ ಮುಕ್ತಾಯಗೊಳಿಸಲಾಗುವುದು ಎಂದರು.

ಮಲ್ಲಾಪೂರ ಪಿ.ಜಿ ಪ.ಪಂ,ಯ ಕಸ ವಿಲೇವಾರಿಗಾಗಿ 14 ನೇ ಹಣಕಾಸು ಯೋಜನೆಯಲ್ಲಿ ಖರೀದಿಸಲಾದ ಟ್ರ್ಯಾಕ್ಟರವನ್ನು ಸಚಿವರು ರಮೇಶ ಜಾರಕಿಹೊಳಿ ಉದ್ಘಾಟಿಸಿದರು.

ಪಟ್ಟಣದ ಕಸ ವಿಲೇವಾರಿಗಾಗಿ 2016-17 ಸಾಲಿನ 14 ನೇ ಹಣಕಾಸು ಯೋಜನೆಯಲ್ಲಿ ಖರೀದಿಸಲಾದ ಟ್ರ್ಯಾಕ್ಟರವನ್ನು ಸಚಿವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಡಿ.ಎಂ.ದಳವಾಯಿ, ಸುಭಾಸ ಹುಕ್ಕೇರಿ, ಜಯಶೀಲ ಶೆಟ್ಟಿ, ಪ.ಪಂ ಅಧ್ಯಕ್ಷೆ ಸುಜಾತಾ ಪೂಜಾರಿ, ಉಪಾಧ್ಯಕ್ಷೆ ಕಸ್ತೂರಿ ಚೌಕಶಿ, ಸದಸ್ಯರಾದ ಗಂಗಾಧರ ಬಡಕುಂದ್ರಿ, ಮಲ್ಲಪ್ಪ ಕೋಳಿ, ಸಲೀಮ ಕಬ್ಬೂರ, ಇಮ್ರಾನ ಬಟಕುರ್ಕಿ, ಈರಗೌಡ ಕಲಕುಟಗಿ, ವಿಕ್ರಮ ದಳವಾಯಿ, ರಾಮಪ್ಪಾ ನಾಯಿಕ, ನಾಗರಾಜ ಚಚಡಿ, ಪ್ರವೀಣ ಮಟಗಾರ, ಮಾರುತಿ ಹುಕ್ಕೇರಿ, ಮಾಲನ ದಳವಾಯಿ, ಪಾರವ್ವ ಮೇತ್ರಿ, ಶ್ರೀದೇವಿ ಕೋಗನೂರ, ಲಕ್ಷ್ಮೀ ತುಕ್ಕಾನಟ್ಟಿ, ಸರಸ್ವತಿ ಕುಲಗೋಡ, ಮುಖ್ಯಾಧಿಕಾರಿ ಕೆ.ಬಿ.ಪಾಟೀಲ, ಗುತ್ತಿಗೆದಾರ ಅಶೋಕ ಹುಲಿಕಟ್ಟಿ, ಅಭಿಯಂತರಾದ ಮುತ್ತೇಪ್ಪಾ ತೇಲಿ ಸೇರಿದಂತೆ ಪಟ್ಟಣದ ಪ್ರಮುಖರು ಉಪಸ್ಥಿತರಿದ್ದರು.

Related posts: