RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಶಾಸಕ ಬಾಲಚಂದ್ರ ಅಮೂಲ್ಯ ರತ್ನ : ಮುರುಘರಾಜೇಂದ್ರ ಸ್ವಾಮೀಜಿ

ಗೋಕಾಕ:ಶಾಸಕ ಬಾಲಚಂದ್ರ ಅಮೂಲ್ಯ ರತ್ನ : ಮುರುಘರಾಜೇಂದ್ರ ಸ್ವಾಮೀಜಿ 

ಶಾಸಕ ಬಾಲಚಂದ್ರ ಅಮೂಲ್ಯ ರತ್ನ : ಮುರುಘರಾಜೇಂದ್ರ ಸ್ವಾಮೀಜಿ

ಘಟಪ್ರಭಾ ಫೆ 13 :- ಬಳೋಬಾಳ, ಬೀರನಗಡ್ಡಿ, ನಲ್ಲಾನಟ್ಟಿ ಹಾಗೂ ಬಸಳಿಗುಂದಿ ಗ್ರಾಮಗಳ ಕುಡಿಯುವ ನೀರಿನ ಯೋಜನೆಗಾಗಿ 5.25 ಕೋಟಿ ರೂ.ಗಳ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಮಂಜೂರು ಮಾಡಲಾಗಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸಮೀಪದ ಬಳೋಬಾಳ ಗ್ರಾಮದಲ್ಲಿ ಸೋಮವಾರ ಸಂಜೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲೀಕರಣ ಇಲಾಖೆಯಿಂದ 5.25 ಕೋಟಿ ರೂ.ಗಳ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಯೋಜನೆಯಿಂದ ಬಳೋಬಾಳ ಹಾಗೂ ಇತರೇ 3 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ದೊರಕಲಿದೆ. ಇದರಿಂದ ನಾಲ್ಕೂ ಗ್ರಾಮಗಳಿಗೆ ಶಾಶ್ವತವಾಗಿ ಕುಡಿಯುವ ನೀರು ದೊರೆಯಲಿದೆ. ಆರು ತಿಂಗಳೊಳಗೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಬಳೋಬಾಳ ಗ್ರಾಮದ ಪ್ರಗತಿಗಾಗಿ ಸರ್ಕಾರದಿಂದ ಹಲವು ಇಲಾಖೆಗಳ ಸಹಯೋಗದಡಿ ಕೋಟ್ಯಾಂತರ ರೂ.ಗಳ ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸಲಾಗಿದೆ. ಸಂಘಟಿತರಾಗಿ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಬಳೋಬಾಳ ವಿಕಾಸಕ್ಕೆ ದುಡಿಯಬೇಕೆಂದರು.
ಹಿಡಕಲ್ ಜಲಾಶಯದಿಂದ ಮಾರ್ಚ 2 ರವರೆಗೆ ಕಾಲುವೆಗಳಿಗೆ ನೀರು ಹರಿದು ಬರುತ್ತಿದ್ದು, ಕೃಷಿ ಬೆಳೆಗಳಿಗೆ ಬಿಡುತ್ತಿರುವ ಕೊನೆಯ ನೀರು ಇದಾಗಿದೆ. ರೈತ ಬಾಂಧವರು ಇದರ ಪ್ರಯೋಜನ ಪಡೆದುಕೊಂಡು ನೀರನ್ನು ಮಿತವಾಗಿ ಬಳಕೆ ಮಾಡಿಕೊಳ್ಳುವಂತೆ ವಿನಂತಿಸಿಕೊಂಡರು.

ಬಾಲಚಂದ್ರ ಅಮೂಲ್ಯ ರತ್ನ – ಮುರುಘರಾಜೇಂದ್ರ ಸ್ವಾಮೀಜಿ :- ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಿಜವಾದ ಜನಸೇವಕ. ಅಪ್ರತಿಮ ಸಾಧಕ. ಇಂತಹ ಶಾಸಕರನ್ನು ಅರಭಾವಿ ಮತಕ್ಷೇತ್ರದವರು ಪಡೆದಿರುವುದು ಪೂರ್ವಜನ್ಮದ ಪುಣ್ಯ. ಬಾಲಚಂದ್ರ ಅವರು ಅರಭಾವಿ ಭಾಗದ ನಡೆದಾಡುವ ದೇವರು ಎಂದು ಗೋಕಾಕ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಬಣ್ಣಿಸಿದರು.
ಜನರ ಒಳತಿಗಾಗಿ ಹಾಗೂ ಸಮಾಜ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಬಾಲಚಂದ್ರ ಜಾರಕಿಹೊಳಿ ಅವರು ಈಗಾಗಲೇ ಚುನಾವಣೆಯಲ್ಲಿ ಜಯ ಸಾಧಿಸಿದ್ದಾರೆ. ಅವರಿಗೆ ಎಂದಿಗೂ ಸೋಲು ಅನ್ನುವ ಭಯವಿಲ್ಲ. ದೇವರ ಆಶೀರ್ವಾದ ಹಾಗೂ ಜನರ ಪ್ರೀತಿ ಅವರ ಮೇಲಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಇವರ ಪಾತ್ರ ಗಣನೀಯವೆಂದು ಬಣ್ಣಿಸಿ ಅಭಿನಂದನೆ ಸಲ್ಲಿಸಿದರು.
ಭೂಮಿ ಹಾಗೂ ಗಡಿಗಾಗಿ ನಡೆಯುತ್ತಿದ್ದ ಯುದ್ಧಗಳು ಮುಂದೊಂದು ದಿನ ನೀರಿಗಾಗಿ ನಡೆಯಬಹುದು. ಆದ್ದರಿಂದ ನೀರು ಅಮೂಲ್ಯವಾದದ್ದು. ಅದನ್ನು ಎಂದಿಗೂ ಕೇಡು ಮಾಡದಿರಿ ಎಂದು ಕಿವಿ ಮಾತು ಹೇಳಿದರು.
ಬಸವಲಿಂಗ ಸ್ವಾಮಿಗಳು, ಪ್ರಭಾಶುಗರ ಅಧ್ಯಕ್ಷ ಅಶೋಕ ಪಾಟೀಲ, ತಾಪಂ ಸದಸ್ಯೆ ಸರಸ್ವತಿ ಪೂಜೇರಿ, ಗ್ರಾಪಂ ಉಪಾಧ್ಯಕ್ಷೆ ಬಸವ್ವಾ ಸಂಪಗಾಂವಿ, ವಕೀಲ ಮುತ್ತಣ್ಣ ಕುಳ್ಳೂರ, ಭೀಮಪ್ಪ ಕಲ್ಲೋಳಿ, ಕಲ್ಲಪ್ಪ ಪಾಗಾದ, ಶಿವಪುತ್ರ ಚಿಮ್ಮಡ, ಲಗಮಣ್ಣಾ ಕಳಸನ್ನವರ, ಸಿದ್ದಯ್ಯಾ ಹೋಳಗಿ, ಪ್ರಧಾನಿ ಕಳಸನ್ನವರ, ಬಸವರಾಜ ಕೋಟಗಿ, ಶಿವಪ್ಪ ದೊಡಕೆಂಚನವರ, ಶ್ರೀಶೈಲ ಬೆಳವಿ, ಕಾಡಪ್ಪ ಮ್ಯಾಗಡಿ, ರಾಮಪ್ಪ ದುರ್ಗಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts: