RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಬಸವಣ್ಣನವರ ಪರಿಕಲ್ಪನೆಯಂತೆ ಸರ್ವ ಸಮಾಜದ ಒಳತಿಗಾಗಿ ಶ್ರಮಿಸುತ್ತಿದ್ದೇನೆ : ಶಾಸಕ ಬಾಲಚಂದ್ರ

ಗೋಕಾಕ:ಬಸವಣ್ಣನವರ ಪರಿಕಲ್ಪನೆಯಂತೆ ಸರ್ವ ಸಮಾಜದ ಒಳತಿಗಾಗಿ ಶ್ರಮಿಸುತ್ತಿದ್ದೇನೆ : ಶಾಸಕ ಬಾಲಚಂದ್ರ 

ಬಸವಣ್ಣನವರ ಪರಿಕಲ್ಪನೆಯಂತೆ ಸರ್ವ ಸಮಾಜದ ಒಳತಿಗಾಗಿ ಶ್ರಮಿಸುತ್ತಿದ್ದೇನೆ : ಶಾಸಕ ಬಾಲಚಂದ್ರ

ಗೋಕಾಕ ಫೆ 14 : ಬಸವಣ್ಣನವರ ಪರಿಕಲ್ಪನೆಯಂತೆ ಸಾಮಾಜಿಕ ನ್ಯಾಯದ ಮಾರ್ಗದಲ್ಲಿ ಎಲ್ಲ ಸಮಾಜದವರನ್ನು ಒಗ್ಗೂಡಿಸಿ ಸರ್ವ ಸಮಾಜದ ಒಳತಿಗಾಗಿ ಶ್ರಮಿಸುತ್ತಿದ್ದೇನೆ. ಎಲ್ಲ ಸಮಾಜಗಳಲ್ಲಿಯೂ ಬಡವರಿದ್ದು, ಅಂತಹವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ಉದಗಟ್ಟಿ ಗ್ರಾಮದಲ್ಲಿ ಮಂಗಳವಾರ ಸಂಜೆ ಉದ್ದಮ್ಮಾದೇವಿ ರಂಗಮಂದಿರದಲ್ಲಿ ಜರುಗಿದ ಪ್ರವಾಸಿ ಮಂದಿರ ಉದ್ಘಾಟನೆ ಹಾಗೂ ವಾಲ್ಮೀಕಿ ಸಮುದಾಯ ಭವನದ ಅಡಿಗಲ್ಲನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಕ್ಷೇತ್ರದಲ್ಲಿ ಕಳೆದ 14 ವರ್ಷಗಳಿಂದ ಎಲ್ಲ ಸಮಾಜಗಳಿಗೆ ಎಲ್ಲ ಕ್ಷೇತ್ರಗಳಲ್ಲೂ ಪ್ರಾಶಸ್ತ್ಯ ಕಲ್ಪಿಸಿಕೊಡಲಾಗುತ್ತಿದೆ. ಅರಭಾವಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. 2004 ರಿಂದ ಇಲ್ಲಿಯವರೆಗೆ ನಮ್ಮ ಕಾರ್ಯಕರ್ತರ ರಥವನ್ನು ಜನರ ಏಳ್ಗೆಗಾಗಿ ಮುನ್ನಡೆಸಿಕೊಂಡು ಬಂದಿದ್ದು, ಮುಂದೆಯೂ ನಮ್ಮ ರಥ ಯಶಸ್ವಿಯಾಗಿ ಸಾಗಲಿದೆ. ಜನರ ಪ್ರೀತಿ-ವಿಶ್ವಾಸವೇ ಇದರ ಯಶಸ್ಸಿಗೆ ಕಾರಣವೆಂದರು.
ವೈರಿಗಳಿಗೆ ನೆಲೆ ಇಲ್ಲ : ಅಭಿವೃದ್ಧಿ ವಿಚಾರದಲ್ಲಿ ನಮ್ಮ ಬೆರಳಣಿಕೆಯಷ್ಟು ವೈರಿಗಳು ಸತ್ಯಕ್ಕೆ ದೂರವಾದ ಸುದ್ಧಿಗಳನ್ನು ಹಬ್ಬಿಸುತ್ತಿದ್ದಾರೆ. ಅಂತಹ ಯಾವುದೇ ಸುಳ್ಳು ವದಂತಿಗಳಿಗೆ ಕಿವಿಕೊಡದಿರಿ. ಕ್ಷೇತ್ರದ ಪರಿಚಯವೇ ಇಲ್ಲದ ಅವರುಗಳು ಒಂದೇ ಭಾಗಕ್ಕೆ ಸೀಮಿತಗೊಂಡಿದ್ದಾರೆ. ಅವರು ಎಷ್ಟೇ ಅಪಪ್ರಚಾರ ನಡೆಸಿದರೂ ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಕ್ಷೇತ್ರದ ಮತದಾರ ಪ್ರಭುಗಳ ಆಶೀರ್ವಾದದಿಂದ ಮುಂದೆ ನಡೆಯಲಿರುವ ಚುನಾವಣೆಯಲ್ಲಿ ದೇವರು ನನ್ನ ಹಣೆಬರಹವನ್ನು ನಿರ್ಧರಿಸಿದ್ದಾನೆ. ದೇವರು ಬರೆದಂತೆ ನಾನು ಈಗಾಗಲೇ ಗೆದ್ದು ಬಂದಿದ್ದೇನೆ. ಇದನ್ನು ಗರ್ವದಿಂದ ಹೇಳುತ್ತಿಲ್ಲ. ಮತದಾರ ಪ್ರಭುಗಳು ತೋರುತ್ತಿರುವ ಪ್ರೀತಿಯಿಂದ ಹೇಳುತ್ತಿದ್ದೇನೆ. ಗೆಲುವು ನನ್ನದೇ. ವೈರಿಗಳಿಗೆ ಈ ಚುನಾವಣೆಯಲ್ಲಿ ಯಾವುದೇ ಭವಿಷ್ಯವಿಲ್ಲವೆಂದು ಹೇಳಿದರು.
ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಕ್ಷೇತ್ರದ ಜನರೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಬಾಲಚಂದ್ರ ಜಾರಕಿಹೊಳಿ ಅವರಿಗೆ ಕ್ಷೇತ್ರದಲ್ಲಿಯೇ ಅತೀ ಹೆಚ್ಚಿನ ಮತಗಳನ್ನು ನೀಡುವ ಗ್ರಾಮಗಳಲ್ಲಿ ಉದಗಟ್ಟಿಯೂ ಒಂದು. ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಿ ಎಲ್ಲವನ್ನು ಈಡೇರಿಸುವ ಶಾಸಕರ ಕಾರ್ಯ ಶ್ಲಾಘನೀಯ.
ಜನಪ್ರತಿನಿಧಿ ಹೇಗಿರಬೇಕೆಂಬುದನ್ನು ಇವರಿಂದ ತರಬೇತಿಯನ್ನು ಇತರರು ಪಡೆದುಕೊಳ್ಳಬೇಕು. ಅತೀ ಹೆಚ್ಚಿನ ವಸತಿ ಶಾಲೆಗಳು ಹಾಗೂ ಯಾತ್ರಿ ನಿವಾಸಗಳನ್ನು ನಿರ್ಮಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಎಂದಿಗೂ ಇವರನ್ನು ಶಾಸಕರನ್ನಾಗಿ ನೋಡುವುದಿಲ್ಲ. ಮನೆಯ ಮಗನಂತೆ ನೋಡಿಕೊಳ್ಳುತ್ತೇವೆ. ಮುಂದಿನ ಚುನಾವಣೆಯಲ್ಲಿ ಲಕ್ಷ ಮತಗಳ ಅಂತರದಿಂದ ಬಾಲಚಂದ್ರ ಜಾರಕಿಹೊಳಿ ಅವರು ಜಯಗಳಿಸುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿರಿಯ ಸಹಕಾರಿ ಬಸಗೌಡ ಪಾಟೀಲ, ಜಿಪಂ ಸದಸ್ಯೆ ಶಶಿಕಲಾ ಸಣ್ಣಕ್ಕಿ, ಗ್ರಾಪಂ ಅಧ್ಯಕ್ಷೆ ಮುತ್ತವ್ವಾ ವಡೇರ, ಭೂತಪ್ಪ ಗೊಡೇರ, ಹನಮಂತ ಕೊಪ್ಪದ, ಮಲಕಾರಿ ವಡೇರ, ರಂಗಪ್ಪ ಛಪ್ರಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಅಪ್ಪಯ್ಯ ಬಡ್ನಿಂಗಗೋಳ, ಪ್ರಭಾಶುಗರ ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ಎನ್.ಟಿ. ಫಿರೋಜಿ, ಜಿಪಂ ಮಾಜಿ ಸದಸ್ಯರಾದ ವಿಠ್ಠಲ ಸವದತ್ತಿ, ಶಂಕರ ಬಿಲಕುಂದಿ, ಮಾರುತಿ ತೋಳಮರಡಿ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಅಜ್ಜಪ್ಪ ಗಿರಡ್ಡಿ, ಶಿದ್ಲಿಂಗ ಕಂಬಳಿ, ಮಾಜಿ ಉಪಾಧ್ಯಕ್ಷ ಎಂ.ಎಂ. ಪಾಟೀಲ, ನಿರ್ದೇಶಕ ಬಸವರಾಜ ಸಾಯನ್ನವರ, ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಬಿ.ಡಿ. ಪಾಟೀಲ, ಪರ್ವತಗೌಡ ಪಾಟೀಲ, ಹನಮಂತ ತೇರದಾಳ, ರೈತ ಮುಖಂಡ ಶಿವಪುತ್ರ ಜಕಬಾಳ, ಕುಡಚಿ ಎಪಿಎಂಸಿ ಮಾಜಿ ಅಧ್ಯಕ್ಷ ರಾಮಣ್ಣಾ ನಂದಿ, ಎಚ್.ಡಿ. ಮುಲ್ಲಾ, ರವಿ ಸೋನವಾಲ್ಕರ, ಸಂತೋಷ ಸೋನವಾಲ್ಕರ, ಅಶೋಕ ಕಲ್ಲೋಳಿ, ಬಿ.ಎಚ್.ಪಾಟೀಲ, ಕಲ್ಲಪ್ಪ ಉಪ್ಪಾರ, ನಾಗಪ್ಪ ಮಂಗಿ, ಲಕ್ಷ್ಮಣ ಮಸಗುಪ್ಪಿ, ಅಶೋಕ ಖಂಡ್ರಟ್ಟಿ, ಕೃಷ್ಣಪ್ಪ ಬಂಡ್ರೊಳ್ಳಿ, ರಾಮಣ್ಣಾ ಬಂಡಿ, ಮಹೇಶ ಪಟ್ಟಣಶೆಟ್ಟಿ, ರಾಜು ಬಳಿಗಾರ, ಸಿದ್ದಪ್ಪ ವಡೇರ, ಭೂಸೇನಾ ನಿಗಮದ ಎಇಇ ಆರ್.ಪಿ ನಾರಾಯಣಕರ ವೇದಿಕೆಯಲ್ಲಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉದಗಟ್ಟಿ ಗ್ರಾಮದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಯಾತ್ರಿ ನಿವಾಸವನ್ನು ಉದ್ಘಾಟಿಸಿದರು. 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ಧೇಶಿಸಿರುವ ವಾಲ್ಮೀಕಿ ಸಮುದಾಯ ಭವನಕ್ಕೆ ಅಡಿಗಲ್ಲನ್ನು ನೆರವೇರಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಉದ್ದಮ್ಮಾದೇವಿ ದೇವಸ್ಥಾನ ಕಮೀಟಿಯವರು ಬೆಳ್ಳಿ ಗಧೆ ನೀಡಿ ಸತ್ಕರಿಸಿದರು.
ಸಾನಿಧ್ಯವನ್ನು ಪದ್ಮರಾಜೇಂದ್ರ ಸ್ವಾಮಿಗಳು ವಹಿಸಿದ್ದರು.

Related posts: