RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಜಗತ್ತಿಗೆ ಅನ್ನ ನೀಡುವ ರೈತ ಈ ದೇಶದ ಸಂಪತ್ತು : ಶಾಸಕ ಬಾಲಚಂದ್ರ

ಗೋಕಾಕ:ಜಗತ್ತಿಗೆ ಅನ್ನ ನೀಡುವ ರೈತ ಈ ದೇಶದ ಸಂಪತ್ತು : ಶಾಸಕ ಬಾಲಚಂದ್ರ 

ಜಗತ್ತಿಗೆ ಅನ್ನ ನೀಡುವ ರೈತ ಈ ದೇಶದ ಸಂಪತ್ತು : ಶಾಸಕ ಬಾಲಚಂದ್ರ

ಗೋಕಾಕ ಫೆ 15 : ಜಗತ್ತಿಗೆ ಅನ್ನ ನೀಡುವ ರೈತ ಈ ದೇಶದ ಸಂಪತ್ತು. ರೈತನ ಶ್ರಮದಿಂದಲೇ ನಾವೆಲ್ಲರೂ ಬದುಕುತ್ತಿದ್ದೇವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ಹಾಲು ಶಿಥಲೀಕರಣ ಘಟಕ, ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಡ್ಡೇರಹಟ್ಟಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘವು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಸಂಘ ಬೆಳವಣಿಗೆಯಾಗಲು ಆಡಳಿತ ಮಂಡಳಿಯವರು ಶ್ರಮಿಸುತ್ತಿದ್ದಾರೆ. ಇನ್ನೂ ಮುಂದಿನ ದಿನಗಳಲ್ಲಿ ಸಂಘವು ಪ್ರಗತಿಯತ್ತ ಸಾಗಿ ಇನ್ನೂ ಹೆಚ್ಚಿನ ಲಾಭ ಗಳಿಸಲಿ ಎಂದು ಹಾರೈಸಿದರು.
ಬೆಳಗಾವಿ ಹಾಲು ಒಕ್ಕೂಟ ರಾಜ್ಯದಲ್ಲಿಯೇ ಮಾದರಿಯಾಗಿ ಪ್ರಗತಿಪಥದತ್ತ ದಾಪುಗಾಲು ಹಾಕುತ್ತಿದೆ. ಹಾಲು ಶೇಖರಣೆಯಲ್ಲಿ ಒಕ್ಕೂಟವು ಮುಂಚೂಣಿಯಲ್ಲಿದೆ. ಇದು ರೈತರಿಗೆ ಸಹಕಾರಿಯಾಗಿದೆ ಎಂದು ಹೇಳಿದರು.
ರಡ್ಡೇರಹಟ್ಟಿ ಗ್ರಾಮಸ್ಥರಿಗೆ 2 ತಿಂಗಳ ಹಿಂದೆ ಭರವಸೆ ನೀಡಿದಂತೆ ರಡ್ಡೇರಹಟ್ಟಿಯಿಂದ ಕೌಜಲಗಿವರೆಗೆ ರಸ್ತೆಯನ್ನು ಸುಧಾರಣೆ ಮಾಡಲಾಗಿದೆ. ಜನರಿಗೆ ಬೇಕಾದ ಎಲ್ಲ ಅನುಕೂಲತೆಗಳನ್ನು ಕಲ್ಪಿಸಿಕೊಡಲಾಗಿದೆ ಎಂದು ತಿಳಿಸಿದರು.
ದೇವರನ್ನು ನಂಬಿ ಬದುಕುತ್ತಿರುವ ನಾವುಗಳು ಧಾರ್ಮಿಕ ಆಚರಣೆಯಲ್ಲಿ ಪ್ರಪಂಚದಲ್ಲಿಯೇ ಮುಂದಿದ್ದೇವೆ. ಎಲ್ಲರೂ ಜಾತಿ ಬೇಧ ಭಾವ ಮಾಡದೇ ಸಹೋದರತ್ವ ಭಾವನೆಯಿಂದ ಬದುಕುತ್ತಿದ್ದೇವೆ. ಕೋಮು ಸಾಮರಸ್ಯಕ್ಕೆ ನಾವೆಲ್ಲ ಹೆಸರುವಾಸಿಯಾಗಿದ್ದೇವೆ. ಯಾವುದೇ ಜಾತಿ ಧರ್ಮ ಮತಗಳ ಬೇಧ ನಮ್ಮಲ್ಲಿಲ್ಲ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ರಡ್ಡೇರಹಟ್ಟಿ ಗ್ರಾಮದಲ್ಲಿ ಮೊದಲ ಬಾರಿಗೆ ಅತೀರುದ್ರ ಮಹಾಯಾಗವನ್ನು ಮಾಡಿರುವ ಕಾರ್ಯವನ್ನು ಶ್ಲಾಘಿಸಿದರು. ಹೃದಯ ಶ್ರೀಮಂತಿಕೆಯಿದ್ದರೆ ದೇವರು ಕೂಡ ಒಲಿಯುತ್ತಾನೆ. ಇದಕ್ಕೆ ಬಾಲಚಂದ್ರ ಜಾರಕಿಹೊಳಿ ಅವರೇ ಸೂಕ್ತ ಉದಾಹರಣೆಯಾಗಿದ್ದಾರೆ. ದಾನ-ಧರ್ಮಕ್ಕೆ ಹೆಸರುವಾಸಿಯಾಗಿರುವ ಬಾಲಚಂದ್ರ ಅವರು ಹೃದಯದಲ್ಲಿ ಶ್ರೀಮಂತಿಕೆ ತೋರಿ ಅಸಂಖ್ಯೆ ಅಭಿಮಾನಿ ಹಾಗೂ ಕಾರ್ಯಕರ್ತರ ಪಡೆಯನ್ನು ಹೊಂದಿದ್ದಾರೆಂದು ಹೇಳಿದರು.
ಸಾನಿಧ್ಯವನ್ನು ಭಾಗೋಜಿಕೊಪ್ಪದ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಬೆಂಡವಾಡದ ಗುರುಸಿದ್ಧೇಶ್ವರ ಮಹಾಸ್ವಾಮಿಗಳು, ಮನ್ನಿಕೇರಿ ವಿಜಯಸಿದ್ಧೇಶ್ವರ ಮಹಾಸ್ವಾಮಿಗಳು ಹಾಗೂ ಕಪರಟ್ಟಿಯ ಬಸವರಾಜ ಹಿರೇಮಠ ಸ್ವಾಮಿಗಳು ವಹಿಸಿದ್ದರು.
ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ, ಅಶೋಕ ಪರುಶೆಟ್ಟಿ, ಪ್ರಭಾಶುಗರ ಅಧ್ಯಕ್ಷ ಅಶೋಕ ಪಾಟೀಲ, ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ಪಿಕೆಪಿಎಸ್ ಅಧ್ಯಕ್ಷ ಕರೆಪ್ಪ ಬಿಸಗುಪ್ಪಿ, ತಾಪಂ ಸದಸ್ಯ ಶಾಂತಪ್ಪ ಹಿರೇಮೇತ್ರಿ, ಬೆಳಗಾವಿ ಹಾಲು ಒಕ್ಕೂಟದ ನಿರ್ದೇಶಕ ಮಲ್ಲು ಪಾಟೀಲ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಂ.ಎಂ.ಪಾಟೀಲ, ಶಿವು ಪಾಟೀಲ, ಹನಮಂತ ಅಳಗೋಡಿ, ಸುಭಾಸ ಕಮಲದಿನ್ನಿ, ರಾಯಪ್ಪ ಬಳೋಲದಾರ, ಮಹೇಶ ಪಟ್ಟಣಶೆಟ್ಟಿ, ಶಿವು ಲೋಕನ್ನವರ, ಬಸು ಕೇರಿ, ಅಪ್ಪಣ್ಣಾ ಬಿಸಗುಪ್ಪಿ, ಲಕ್ಷ್ಮಣ ಪಾಶ್ಚಾಪೂರ, ರಾಮಣ್ಣಾ ಕುದರಿ, ಬಸು ಉಳ್ಳಾಗಡ್ಡಿ, ಶಿವಬಸು ಕಮತಗಿ, ಭರಮಣ್ಣಾ ಪಾಶ್ಚಾಪೂರ, ಲಕ್ಷ್ಮಣ ಸಂಕ್ರಿ, ಭೀಮಶೆಪ್ಪ ಅಳಗೋಡಿ, ಬೆಳಗಾವಿ ಹಾಲು ಒಕ್ಕೂಟದ ಅಧಿಕಾರಿಗಳು ಉಪಸ್ಥಿತರಿದ್ದರು.

Related posts: