RNI NO. KARKAN/2006/27779|Friday, November 22, 2024
You are here: Home » breaking news » ಘಟಪ್ರಭಾ:ಸಂಘಟನೆಯ ಮೂಲಕ ಅಸಾಧ್ಯವನ್ನು ಸಾಧ್ಯವಾಗಿಸಬಹುದು: ಪದ್ಮಶ್ರೀ ಸೀತವ್ವಾ ಜೋಡಟ್ಟಿ

ಘಟಪ್ರಭಾ:ಸಂಘಟನೆಯ ಮೂಲಕ ಅಸಾಧ್ಯವನ್ನು ಸಾಧ್ಯವಾಗಿಸಬಹುದು: ಪದ್ಮಶ್ರೀ ಸೀತವ್ವಾ ಜೋಡಟ್ಟಿ 

ಸಂಘಟನೆಯ ಮೂಲಕ ಅಸಾಧ್ಯವನ್ನು ಸಾಧ್ಯವಾಗಿಸಬಹುದು: ಪದ್ಮಶ್ರೀ ಸೀತವ್ವಾ ಜೋಡಟ್ಟಿ

ಘಟಪ್ರಭಾ ಫೆ 16 : ಯುವಕರು ಹಾಗೂ ಯುವತಿಯರು ಸಮಾಜ ಸೇವೆಗೆ ಮುಂದಾಗಿ ಸಮಾಜದ ಒಳತಿಗಾಗಿ ಶ್ರಮಿಸಬೇಕೆಂದು ಸ್ಥಳೀಯ ಮಾಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಾದ ಶ್ರೀಮತಿ ಸೀತವ್ವಾ ಜೋಡಟ್ಟಿ ಹೇಳಿದರು.
ಅವರು ಸಮೀಪದ ಮಲ್ಲಾಪೂರ ಪಿ.ಜಿ ಪಟ್ಟಣದಲ್ಲಿ ಕನ್ನಡ ಸೇನೆ ಸಂಘಟನೆಯ ಘಟಕವನ್ನು ಉದ್ಘಾಟಿಸಿ ಮಾತನಾಡುತ್ತ, ಒಬ್ಬರಿಂದ ಸಾಧನೆ ಮಾಡುವುದು ಅಸಾಧ್ಯ. ನಾವು ಸಂಘಟನೆಯ ಮೂಲಕ ಅಸಾಧ್ಯವನ್ನು ಸಾಧ್ಯವಾಗಿಸಬಹುದು. ಸಮಾಜ ಸೇವಕರು ಯಾವುದೆ ಪ್ರಶಸ್ತಿ ಪುರುಸ್ಕಾರ ಬಯಸದೆ ಕಾರ್ಯಮಾಡಬೇಕು.
ನಾವು ಸಂಘಟನೆಯ ಮೂಲದ ದೇವದಾಸಿ ಕುಟುಂಬಗಳಿಗೆ ಮುಖ್ಯ ವಾಹಿನಿಗೆ ತಂದಿದ್ದೇವೆ. ನನ್ನ ಯಶಸ್ಸಿನಲ್ಲಿ ನನ್ನದೊಂದೆ ಪಾತ್ರ ವಿಲ್ಲ. ಗುರುಗಳಾದ ಜಿ.ಎ.ಪತ್ತಾರ ಅವರ ನಮ್ಮ ಜೊತೆ ಮೂಡನಂಬಿಕೆ ಪದ್ದತ್ತಿ ಹೋಗಲಾಡಿಸಲು ಮತ್ತು ಬೀದಿ ನಾಟಕದಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದ್ದಾರೆ. ನಮ್ಮದೆಯಾದ ಮಾರ್ಗದಲ್ಲಿ ಮುನ್ನಡೆದಿದ್ದೇವೆ. ನಮ್ಮ ಸಂಘದೊಂದಿಗೆ ಜೋಡಿಸಲ್ಲಪಟ್ಟಿರುವ ಸುಮಾರು 4500 ಕ್ಕೂ ಹೆಚ್ಚು ದೇವದಾಸಿಯರು ಹಾಗೂ ನಿರ್ದೇಶಕ ಮಂಡಳಿ ಸಿಬ್ಬಂದಿವರ್ಗದ ಸಹಾಯದಿಂದ ಇಂದು ನನಗೆ ಪದ್ಮಶ್ರೀ ಪ್ರಶಸ್ತಿ ದೊರೆತಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲದಲಿ ಪದ್ಮಶ್ರೀ ಪ್ರಶಸ್ತಿ ಪುರುಸ್ಕøತ ಶ್ರೀಮತಿ ಸೀತವ್ವಾ ಜೋಡಟ್ಟಿ ಅವರನ್ನು ಸಂಘಟನೆಯ ಪರವಾಗಿ ಸನ್ಮಾನಿಸಲಾಯಿತು.
ಕನ್ನಡ ಸೇನೆ ಸಂಘಟನೆ ಗೋಕಾಕ ತಾಲೂಕಾಧ್ಯಕ್ಷ ಅಪ್ಪಾಸಾಬ ಮುಲ್ಲಾ, ಉಪಾಧ್ಯಕ್ಷರಾದ ರಾಘವೇಂದ್ರ ಪತ್ತಾರ, ಮಲ್ಲಾಪೂರ ಪಿ.ಜಿ ಘಟಕದ ಗೌರವ ಅಧ್ಯಕ್ಷ ಬಾಬುರಾವ ಬೈಲಪತ್ತಾರ, ಘಟಕದ ಅಧ್ಯಕ್ಷ ಸತೀಶ ಪಾಟೀಲ, ಉಪಾಧ್ಯಕ್ಷ ಮಹೇಶ ಕುಮಾರ ಪತ್ತಾರ, ಸಚ್ಚಿನ ಪತ್ತಾರ, ಉಮೇಶ ಪಂಚಮಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

Related posts: