RNI NO. KARKAN/2006/27779|Saturday, October 19, 2024
You are here: Home » breaking news » ಮೂಡಲಗಿ:ಶ್ರೀ ಮಠವು ಕೋಮು ಸಾಮರಸ್ಯಕ್ಕೆ ಹೆಸರುವಾಸಿಯಾದ ಪೀಠವಾಗಿದೆ : ಶಾಸಕ ಬಾಲಚಂದ್ರ

ಮೂಡಲಗಿ:ಶ್ರೀ ಮಠವು ಕೋಮು ಸಾಮರಸ್ಯಕ್ಕೆ ಹೆಸರುವಾಸಿಯಾದ ಪೀಠವಾಗಿದೆ : ಶಾಸಕ ಬಾಲಚಂದ್ರ 

ಶ್ರೀ ಮಠವು ಕೋಮು ಸಾಮರಸ್ಯಕ್ಕೆ ಹೆಸರುವಾಸಿಯಾದ ಪೀಠವಾಗಿದೆ : ಶಾಸಕ ಬಾಲಚಂದ್ರ

ಮೂಡಲಗಿ ಫೆ 16: ಇಲ್ಲಿಯ ಆರಾಧ್ಯ ದೈವ ಶಿವಬೋಧ ರಂಗ ಮಠದ 11 ನೇ ಪೀಠಾಧಿಕಾರಿಯಾಗಿದ್ದ, ಪವಾಡ ಪುರುಷ ಕಲ್ಮೇಶ್ವರ ಅಜ್ಜನವರ ಅಶ್ವಾರೋಡ ಪುತ್ಥಳಿಯ ಭವ್ಯ ಮೆರವಣಿಗೆಯು ಸಕಲ ವಾಧ್ಯ ವೃಂದದೊಂದಿಗೆ ಭಕ್ತರ ಹರ್ಷೋಧ್ಘಾರ ಮದ್ಯೆ ಶುಕ್ರವಾರ ನಡೆಯಿತು.
ಈರಣ್ಣ ಗುಡಿಯ ಹತ್ತಿರ ಆರಂಭಗೊಂಡ ಭವ್ಯ ಮೆರವಣಿಗೆಗೆ ಶ್ರೀಪಾದಬೋಧ ಮಹಾಸ್ವಾಮಿಜಿಗಳು ಪೂಜೆಯೊಂದಿಗೆ ಚಾಲನೆ ನೀಡಿದರು. ಕುಂಭ ಮೇಳ, ಕರಡಿ ಮಜಲು, ಝಾಂಜ್ ಪಥ, ಡೋಳ್ಳಿನ ಮಜಲು ಮುಂತಾದ ಸಾಂಸ್ಕøತಿಕ ಕಲಾ ತಂಡದೊಂದಿಗೆ ಆರಂಭಗೊಂಡ ಮೆರವಣಿಗೆಯು ಪಟ್ಟಣದ ಮುಖ್ಯ ರಸ್ತೆ ಮೂಲಕ ಕೆಳಗಿನ ಶಿವಬೋಧ ರಂಗ ಮಠದವರೆಗೆ ಸಾಗಿತು. ನಿಯೋಜಿತ ಕಲ್ಮೇಶ್ವರ ವೃತ್ತದಲ್ಲಿ ಬಂದು ಪುತ್ಥಳಿಯ ಮುಂದಿನ ಕಾರ್ಯಕ್ರಮಗಳಿಗೆ ಅಣಿಯಾಯಿತು.
ಮೆರವಣಿಗೆಯು ಪುರಸಭೆ ಕಾರ್ಯಾಲಯದ ಮುಂದೆ ಬರುತ್ತಿದ್ದಂತೆಯೇ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶ್ರೀಪಾದಬೋಧ ಮಹಾಸ್ವಾಮಿಗಳಿಗೆ ಮಾಲಾರ್ಪಣೆ ಮಾಡಿ ಆಶಿರ್ವಾದ ಪಡೆದುಕೊಂಡರು. ನಂತರ ಕಲ್ಮೇಶ್ವರ ಅಜ್ಜನವರ ಕಂಚಿನ ಪ್ರತಿಮೆಗೆ ಮಾಲಾರ್ಪಣೆ ಫಲಪುಷ್ಪ ಸಮರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಕಲ್ಮೇಶ್ವರ ಅಜ್ಜನವರ ಕಂಚಿನ ಪುತ್ಥಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾಲಾರ್ಪಣೆ ಮಾಡುತ್ತಿರುವದು.

ಮೆರವಣಿಗೆಯಲ್ಲಿ ಶ್ರೀ ಮಠದ ರಾಧಿಕಾ ಶ್ರೀ ಸ್ವಾಮಿಜಿ, ಅಮೃತಬೋಧ ಸ್ವಾಮಿಜಿ, ಶ್ರೀಧರ ಸ್ವಾಮಿಜಿ ಹಾಗೂ ಕುಟುಂಭಸ್ಥರು, ವೀರಣ್ಣ ಹೂಸೊರ, ಎಸ್.ಜಿ ಢವಳೇಶ್ವರ, ಎನ್.ಟಿ ಫಿರೋಜಿ, ಬಿ.ಜಿ ಗಡಾದ, ಎಸ್.ಆರ್ ಸೋನವಾಲಕರ, ಬಿ.ಬಿ ಹಂದಿಗುಂದ, ರಾಮಚಂದ್ರಪ್ಪ ಬಡಗನ್ನವರ, ರಾಮಣ್ಣಾ ಹಂದಿಗುಂದ, ಅಜೀಜ ಡಾಂಗೆ, ಕಲ್ಮೇಶ್ವರ ಬೋಧ ಸಮಿತಿಯ ಅಣ್ಣಪ್ಪ ಅಕ್ಕನ್ನವರ, ಹನಮಂತ ಸತರಡ್ಡಿ, ಸದಾಶಿವ ನಿಡಗುಂದಿ, ಮನೋಹರ ಸಣ್ಣಕ್ಕಿ, ಅಜ್ಜಪ್ಪ ಅಂಗಡಿ, ಕುಮಾರ ಗಿರಡ್ಡಿ, ಈರಣ್ಣ ಢವಳೇಶ್ವರ, ಪ್ರಕಾಶ ಈರಪ್ಪನವರ, ಶಿವಬಸು ಸುಣಧೋಳಿ, ಶ್ರೀಕಾಂತ ಪತ್ತಾರ, ವiಹದೇವ ಶೆಕ್ಕಿ, ಜಗದೀಶ ತೇಲಿ, ಸದಾಶಿವ ನಿಂಗನೂರ, ಚೇತನ ನಿಶಾನಿಮಠ, ಆನಂದ ಬಳಿಗಾರ ಪುರಸಭೆ ಸದಸ್ಯರು ಗಣ್ಯರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಅಪಾರ ಭಕ್ತ ಸಮೂಹ ಸೇರಿತ್ತು.

ಶಾಸಕ ಬಾಲಚಂದ್ರ ಜಾರಕಿಹೊಳಿ : ಕಲ್ಮೇಶ್ವರಬೋಧ ಅಜ್ಜನವರು ಈ ಭಾಗದಲ್ಲಿ ದೈವಿ ಪುರುಷರಾಗಿದ್ದರು. ಅನೇಕ ಪವಾಡಗಳನ್ನು ಗೈದು ಜನಸಾಮಾನ್ಯರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಿ ಭಕ್ತರ ಪಾಲಿಗೆ ಕಾಮಧೇನುವಾಗಿದ್ದರು. ಇವರಲ್ಲಿರುವ ವಾಕ್ ಸಿದ್ಧಿಯಿಂದ ಇಂದಿಗೂ ಜನಮಾನಸದಲ್ಲಿದ್ದಾರೆ. 11 ನೇಯ ಪೀಠಾಧಿಪತಿಯಾಗಿದ್ದ ಅಜ್ಜನವರ ಅಶ್ವಾರೋಢ ಪುತ್ಥಳಿ ಅನಾವರಣ ಸಕಲ ಭಕ್ತ ವೃಂದದವರು ಕೂಡಿಕೊಂಡು ಫೇ 20 ರಂದು ಪುತ್ಥಳಿ ಅನಾವರಣ ಸಮಾರಂಭ ನಡೆಯುತ್ತಿರುವದು ಸದ್ಬಕ್ತರಲ್ಲಿ ಹರ್ಷವನ್ನುಂಟುಮಾಡಿದೆ. ಎಲ್ಲರೂ ಕೂಡಿಕೊಂಡು ಇಂತಹ ಮಹಾತ್ಮರ ಕಾರ್ಯಕ್ರಮದಲ್ಲಿ ಭಾಗಿಯಾಗೋಣ. ಶ್ರೀ ಮಠವು ಕೋಮು ಸಾಮರಸ್ಯಕ್ಕೆ ಹೆಸರುವಾಸಿಯಾದ ಪೀಠವಾಗಿದೆ. –

Related posts: