RNI NO. KARKAN/2006/27779|Friday, November 22, 2024
You are here: Home » breaking news » ಬೈಲಹೊಂಗಲ:ಇಂದಿನಿಂದ ಮಾ.11 ರ ವರೆಗೆ ನೀಜಗುಣಾನಂದ ಸ್ವಾಮೀಜಿಯವರ ಪ್ರವಚನ

ಬೈಲಹೊಂಗಲ:ಇಂದಿನಿಂದ ಮಾ.11 ರ ವರೆಗೆ ನೀಜಗುಣಾನಂದ ಸ್ವಾಮೀಜಿಯವರ ಪ್ರವಚನ 

ಇಂದಿನಿಂದ ಮಾ.11 ರ ವರೆಗೆ ನೀಜಗುಣಾನಂದ ಸ್ವಾಮೀಜಿಯವರ ಪ್ರವಚನ

ಬೈಲಹೊಂಗಲ ಫೆ 19 : ಪ್ರಸ್ತುತ ಇಂದಿನ ಸಮಾಜದಲ್ಲಿ ನಿರಂತರವಾಗಿ ನಡೆಯುತ್ತಿರುವ ದೇವರು-ಧರ್ಮಗಳ ಕಲಹ, ಜಾತಿ-ಜಾತಿಗಳ ನಡುವೆ ತಾರತಮ್ಯ, ಮೂಡನಂಬಿಕೆ ಕಂದಾಚಾರ ಇವುಗಳನ್ನು ಹೋಗಲಾಡಿಸಲು ಮತ್ತು ಸರ್ವ ಧರ್ಮದ ಜನರಲ್ಲೂ ಸಾಮರಸ್ಯದ ಭಾವನೆ ಮೂಡಿಸುವ ಚಿಂತನೆಗಳು ಆಗಾಗ ನಡೆಯಬೇಕಿದೆ.
     ಈ ಹಿನ್ನೆಲೆಯಲ್ಲಿ ಕಲ್ಯಾಣ ಶರಣರು ಪಾದವಿಟ್ಟ ಪುಣ್ಯಭೂಮಿ ಬೈಲಹೊಂಗಲದ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಮೈದಾನದಲ್ಲಿ ಈ ಹಿಂದೆ ಒಂದು ತಿಂಗಳು ಕಾಲ ವಿಜಯಪುರದ ಸಿದ್ದೇಶ್ವರ ಸ್ವಾಮೀಜಿ ನಿಸರ್ಗ, ಜೀವನ, ಪ್ರೀತಿ,ಸರಳ,ಸಂತೃಪ್ತಿ ಜೀವನ ಹಾಗೂ ಸರ್ವ ಧರ್ಮಗಳ ಕುರಿತು ಅದ್ಬುತವಾಗಿ ಪ್ರವಚನ ನೀಡಿದ್ದರು.
     ಈಗ ದಿನಾಂಕ: 19-02-2018 ರಿಂದ 11-03-2018 ರವರೆಗೆ ಬೈಲೂರ ಹಾಗೂ ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭುಸ್ವಾಮೀಜಿ ಅವರು 12ನೇ ಶರತಮಾನದ ವೀರ-ವೀರಾಗಿಣಿ ಅಕ್ಕಮಹಾದೇವಿ ಜೀವನ ಕುರಿತು ಮತ್ತು ಬಸವಾದಿ ಪ್ರಮಥರ ತತ್ವಗಳ ಕುರಿತು ಪ್ರವಚನ ನೀಡಲಿದ್ದಾರೆ.
     ಬಹುತೇಕ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಪ್ರವಚನದ ಮೂಲಕ ಮನೆ ಮಾತಾಗಿರುವ ನಿಜಗುಣಾನಂದ ಸ್ವಾಮಿಜಿ ಅವರು ಈಗಾಗಲೇ ವಿಶ್ವಧರ್ಮ, ಶಿವಯೋಗ ದರ್ಶನ ಹಾಗೂ ಬಸವ ದರ್ಶನ ಕುರಿತು ಪ್ರಖರವಾಗಿ ಚಿಂತನೆಗಳನ್ನು ನಾಡಿನ ಜನರಲ್ಲಿ ಬಿತ್ತಿ ಪರಿರ್ವತನೆ ತಂದಿದ್ದಾರೆ. ಪ್ರವಚನ ಕೇಳುವುದು ದೇಶದ ನೆಲದ ನೆಲಗಟ್ಟು,ಅದು ಧಾರ್ಮಿಕ,ಆದ್ಯಾತ್ಮದ ನಂಬಿಕೆಯೂ ಹೌದು. ಸಮಾಜಕ್ಕೆ ಇದೀಗ ವಿಚಾರಗಳು ಮುಖ್ಯವಾಗಿವೆ. ಹೇಳುವ ವಿಚಾರಗಳ ಮೇಲೆ ಅವರು ತಮ್ಮ ಪ್ರವಚನವನ್ನು ನಂಬುತ್ತಾರೆ. ಅಲ್ಲದೇ. ಅವರಿಗೆ ಯಾವ ವಿಚಾರ ಬೇಕೋ ಅದನ್ನು ಮಾತ್ರ ತೆಗೆದುಕೊಳ್ಳುತ್ತಾರೆ. ಸಮಾಜದಲ್ಲಿನ ಜಾತಿ ವ್ಯವಸ್ಥೆ, ಧರ್ಮಗಳ ತಿಕ್ಕಾಟಗಳಿಗೆ ಉತ್ತರ ಕೊಡುವುದೇ ನಮ್ಮ ಪ್ರವಚನದ ಆದ್ಯತೆಗಳಲ್ಲೊಂದಾಗಿದೆ. ದ್ವೇಷ ಯಾರಲ್ಲೂ ಇಲ್ಲ. ಎಲ್ಲೂ ಇಲ್ಲ. ನಮಗಂತೂ ಅದು ಕಾಣಿಸಿಯೂ ಇಲ್ಲ ಇದೆಲ್ಲವೂ ಅವರವರ ನಂಬಿಕೆ ಎಂಬ ಅಭಿಪ್ರಾಯ ಪೂಜ್ಯ ನಿಜಗುಣಾನಂದ ಸ್ವಾಮೀಜಿಯವರದ್ದಾಗಿದೆ.

Related posts: