RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಬಿಇಓ ಜಿ.ಬಿ.ಬಳಗಾರ ಅವರಿಗೆ ಹೃದಯ ಸ್ವರ್ಶಿ ಬೀಳ್ಕೊಡುಗೆ

ಗೋಕಾಕ:ಬಿಇಓ ಜಿ.ಬಿ.ಬಳಗಾರ ಅವರಿಗೆ ಹೃದಯ ಸ್ವರ್ಶಿ ಬೀಳ್ಕೊಡುಗೆ 

ಬಿಇಓ ಜಿ.ಬಿ.ಬಳಗಾರ ಅವರಿಗೆ ಹೃದಯ ಸ್ವರ್ಶಿ ಬೀಳ್ಕೊಡುಗೆ
ಗೋಕಾಕ ಫೆ 20 : ಕಳೆದ ಮೂರು ವರ್ಷಗಳಿಂದ ಗೋಕಾಕ ವಲಯದ ಕ್ಷೇತ್ರ ಶಿಕ್ಷಾಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಚಿಕ್ಕೋಡಿ ಬಿಸಿಯೂಟ ಶಿಕ್ಷಣಾಧಿಕಾರಿಯಾಗಿ ವರ್ಗಾವಣೆಗೊಂಡ ಜಿ.ಬಿ.ಬಳಗಾರ ಅವರಿಗೆ ವಲಯದ ಎಲ್ಲ ಶಿಕ್ಷಕರ ಪರವಾಗಿ ಬೀಳ್ಕೊಡುಗೆ ಮತ್ತು ನೂತನ ಬಿಇಓ ಡಿ.ಎಸ್.ಕುರ್ಲಕಣಿ ಅವರ ಸ್ವಾಗತ ಸಮಾರಂಭ ಮಂಗವಾರ ನಗರದ ಎನ್.ಇ.ಎಸ್ ಶಾಲಾ ಸಭಾಂಗಣದಲ್ಲಿ ತುಂಬಾ ವಿಜ್ರಂಭನೆಯಿಂದ ಜರುಗಿತು

ಬಿಇಓ ಜಿ.ಬಿ.ಬಳಗಾರ ಅವರ ಮೂರು ವರ್ಷಗಳ ಸೇವೆಯನ್ನು ಉಲ್ಲೇಖಿಸಿ ಮಾತನಾಡಿದ ಗೋಕಾಕ ತಾಲೂಕಿನ ಉಪ್ಪಾರಟ್ಟಿ ಶಾಲೆಯ ಮುಖ್ಯೋಪಾಧ್ಯಾಯ ಆರ್.ಎಂ.ಅಳಗನ್ನವರ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಸೇಹ್ನಿಯಾಗಿ ಸರಕಾರದ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಪ್ರಾಮಾಣಿಕವಾಗಿ ಮಾಡಿದ್ದಾರೆ ಅವರ ಅವಧಿಯಲ್ಲಿ ಗೋಕಾಕ ವಲಯ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡುದ್ದು ಇವರ ಉತ್ತಮ ಆಡಳಿತಕ್ಕೆ ಸಾಕ್ಷೀಯಾಗಿದೆ , ಮಕ್ಕಳಿಗಾಗಿ ಸದಾ ಕಾಳಜಿಹೊಂದಿ ಗುರುಜೀ ಬಂದರೂ ಗುರುವಾರ, ಮೀಸ್ ಕಾಲ ಮಾಡಿ ಉತ್ತರ ಪಡೆಯಿರಿ , ಪೀಕನಿಕ್ಕ ಫಝಲ್ , ರಂಗೋಲಿ ಮುಖಾಂತರ ಮಕ್ಕಳಿಗೆ ವಿಜ್ಞಾನ ಪಾಠ , ಗುಣಮಟ್ಟದ ಬಿಸಿಯೂಟದ ವ್ಯವಸ್ಥೆ ಸೇರಿದಂತೆ ಇತರ ವಿನೂತನ ಯೋಜನೆಗಳನ್ನು ಪರಿಚಯಿಸಿ ರಾಜ್ಯದಲ್ಲೇ ಗೋಕಾಕ ವಲಯವನ್ನು ಪರಿಚಯಿಸಿದ ಕೀರ್ತಿ ಬಳಗಾರ ಅವರಿಗೆ ಸೇರಬೇಕು ಇವರ ಸೇವೆ ಇತರ ಅಧಿಕಾರಿಗಳಿಗೆ ಮಾದರಿ ಎಂದು ಮಾರ್ಮಿಕವಾಗಿ ಹೇಳಿದರು

ನಂತರ ವಲಯದ ಎಲ್ಲ ಶಿಕ್ಷಕರಿಂದ , ಎಲ್ಲ ಶಿಕ್ಷಕ ಸಂಘಟನೆಗಳಿಂದ , ನಗರದ ವಿವಿಧ ಸಂಘ ಸಂಸ್ಥೆಗಳಿಂದ ನಿರ್ಗಮಿತ ಬಿಇಓ ಬಳಗಾರ ಅವರಿಗೆ ಸತ್ಕರಿಸಿ , ಗೌರವಿಸಿ ಬೀಳ್ಕೊಡಲಾಯಿತು

ಕ್ಷೇತ್ರ ಸಮ್ಮನ್ವಯ ಅಧಿಕಾರಿ ಎನ್.ಎಂ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು

ಈ ಸಂದರ್ಭದಲ್ಲಿ ನೂತನ ಬಿಇಓ ಡಿ.ಎಸ್. ಕುರ್ಲಕಣಿ , ಮೂಡಲಗಿ ವಲಯ ಶಿಕ್ಷಣಾಧಿಕಾರಿ ಎ.ಸಿ.ಗಂಗಾಧರ , ತಾಲೂಕಾ ಮಧ್ಯಾಹ್ನ ಬಿಸಿಯೂಟ ಸಹಾಯಕ ನಿರ್ದೇಶಕ ಎಂ.ಡಿ.ಬೇಗ್ , ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ , ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಎಂ.ಬಿ ಸುಲೇಗಾಂವಿ , ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಶ್ರೀಮತಿ ನೇರಲಿ , ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ಎ.ಬಿ.ಚೌಗಲಾ , ಸಂಜು ನಾಯಿಕ , ಆರ್.ಬಿ.ಡವಳೇಶ್ವರ , ಎಸ್.ಎಸ್.ಮಾಳಗಿ , ಬಿ.ಜಿ.ಕಲ್ಲೋಳಿ , ಆರ್.ಬಿ.ಮಾವಿನಗಿಡದ , ಜಿ.ಆರ್.ಮಾಳಗಿ , ಮಾಲತೇಶ ಸಂಗಮೇಶ , ಎಸ್.ಎಸ್.ಅಂಗಡಿ , ಜಿ.ಆರ್.ಸನದಿ , ಎಸ್. ಎ.ರಾಮಗಾನಟ್ಟಿ , ಎಂ.ಎಸ್.ದೋಡ್ಡನ್ನವರ , ಎಂ .ಎಲ್.ಹಸರಂಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

ಕಾರ್ಯಕ್ರಮವನ್ನು ಶಿಕ್ಷಕ ಬಿಲ್ ಮತ್ತು ಜನ್ಮಟ್ಟಿ ನಿರೂಪಿಸಿದರು ಕೊನೆಯಲ್ಲಿ ಶಿಕ್ಷಕ ಮೀರ್ಜಿ ವಂದಿಸಿದರು

Related posts: