RNI NO. KARKAN/2006/27779|Saturday, October 19, 2024
You are here: Home » breaking news » ಮೂಡಲಗಿ:ಕಲ್ಲಪ್ಪಜ್ಜನವರು ಮೂಡಲಗಿ ನೆಲದಲ್ಲಿ ದೈವಿ ಪುರುಷರಾಗಿದ್ದರು : ಶಾಸಕ ಬಾಲಚಂದ್ರ

ಮೂಡಲಗಿ:ಕಲ್ಲಪ್ಪಜ್ಜನವರು ಮೂಡಲಗಿ ನೆಲದಲ್ಲಿ ದೈವಿ ಪುರುಷರಾಗಿದ್ದರು : ಶಾಸಕ ಬಾಲಚಂದ್ರ 

ಕಲ್ಲಪ್ಪಜ್ಜನವರು ಮೂಡಲಗಿ ನೆಲದಲ್ಲಿ ದೈವಿ ಪುರುಷರಾಗಿದ್ದರು : ಶಾಸಕ ಬಾಲಚಂದ್ರ

ಮೂಡಲಗಿ ಫೆ 20: ಶಿವಬೋಧರಂಗ ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿಯಾಗಿದ್ದ ಕಲ್ಲಪ್ಪಜ್ಜನವರು ಹಲವಾರು ಪವಾಡಗಳನ್ನು ಸೃಷ್ಠಿಸಿ ಮೂಡಲಗಿ ನೆಲದಲ್ಲಿ ದೈವಿ ಪುರುಷರಾಗಿದ್ದರೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಯ ಕಲ್ಮೇಶ್ವರ ವೃತ್ತದಲ್ಲಿ ಮಂಗಳವಾರದಂದು ಕಲ್ಮೇಶ್ವರ ಅಜ್ಜನವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಕಲ್ಮೇಶ್ವರ ಅಜ್ಜನವರ ಆಶೀರ್ವಾದದಿಂದ ಮೂಡಲಗಿ ಭಾಗ ಪಾವನವಾಗಿದೆ ಎಂದರು.

ಮೂಡಲಗಿ ಕಲ್ಮೇಶ್ವರ ವೃತ್ತದಲ್ಲಿ ಕಲ್ಮೇಶ್ವರ ಅಜ್ಜನವರ ಅಶ್ವಾರೂಢ ಕಂಚಿನ ಪುತ್ಥಳಿಯನ್ನು ಶ್ರೀಪಾದಬೋಧ ಮಹಾಸ್ವಾಮಿಗಳು ಅನಾವರಣ ಮಾಡಿದರು. ಸ್ವಾಮೀಜಿಗಳು ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಉಪಸ್ಥಿತರಿದ್ದರು

ಸಿದ್ಧ ಸಂಸ್ಥಾನ ಮಠದ 11 ನೇಯ ಪೀಠಾಧಿಕಾರಿಯಾಗಿದ್ದ ಅಜ್ಜನವರು ತಮ್ಮ ಜೀವಿತಾವಧಿಯಲ್ಲಿ ಸಾಕಷ್ಟು ಪವಾಡಗಳನ್ನು ಮಾಡುತ್ತಾ ಭಕ್ತರಿಂದ ಪವಾಡ ಪುರುಷರೆನಿಸಿಕೊಂಡರು. ಮಠದ ಉದ್ಧಾರಕ್ಕಾಗಿ ಅವಿರತವಾಗಿ ಶ್ರಮಿಸುತ್ತಾ ಮಠವು ಸರ್ವಧರ್ಮ ಪೀಠವಾಗಲು ಕಾರಣರಾದರು. ಮಠದ ಏಳ್ಗೆಯಲ್ಲಿ ಅಜ್ಜನವರ ಪಾತ್ರ ಗಣನೀಯವಾಗಿದ್ದು, ಇಂತಹ ವಾಕ್ ಸಿದ್ಧಿ ಪುರುಷನ ಸ್ಮರಣೆಗಾಗಿ ಅಶ್ವಾರೂಢ ಪುತ್ಥಳಿ ಸ್ಥಾಪನೆ ಮಾಡಿರುವದು ಶ್ಲಾಘನೀಯ. 47 ವರ್ಷಗಳ ಹಿಂದೆ ಅಗಲಿರುವ ಅಜ್ಜನವರ ಪ್ರತಿಮೆ ಮೂಲಕ ಜನರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿಯಲು ಇಂತಹ ಕಾರ್ಯ ಸ್ಮರಣೀಯವಾದದ್ದು. ಮುಂದಿನ ಪೀಳಿಗೆಯು ಕಲ್ಲಪ್ಪಜ್ಜನವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಜ್ಜನವರ ಸ್ಮರಣೆ ಮಾಡುವಂತೆ ಕೋರಿದರು.
ಮೂಡಲಗಿ ಶ್ರೀ ಮಠವು ಯಾವುದೇ ಪ್ರಚಾರವನ್ನು ಬಯಸದೇ ಎಲೆಮರೆ ಕಾಯಿಯಂತೆ ಮೂಡಲಗಿ ಭಾಗದಲ್ಲಿ ಭಕ್ತರಿಗೆ ಧಾರ್ಮಿಕ ವಾತಾವರಣವನ್ನು ಸೃಷ್ಠಿಸುತ್ತಿದೆ. ಕಲ್ಲಪ್ಪಜ್ಜನವರು ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ, ವಿವಿಧ ಸಂಘ ಸಂಸ್ಥೆಗಳಿಗೆ ಮೂಡಲಗಿ ಜನರ ಹಿತಾಸಕ್ತಿಗಾಗಿ ಮಠದ ಆಸ್ತಿಯನ್ನು ದಾನ ಮಾಡಿದ ಮಹಾನ್ ಪುಣ್ಯವಂತರು. ಅಜ್ಜನವರ ಆಶೀರ್ವಾದದಿಂದಲೇ ಮೂಡಲಗಿಯಲ್ಲಿ ಪರಸ್ಥಳದವರು ರಹವಾಸಿಯಾಗಿ ಅವರ ಜೀವನ ಕಟ್ಟಿಕೊಳ್ಳುವಲ್ಲಿ ಕಾರಣಿಕರ್ತರಾಗಿದ್ದಾರೆ. ಬಡವರ ಪಾಲಿಗೆ ಕಾಮಧೇನು ಕಲ್ಪವೃಕ್ಷರಾಗಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ನೆಲೆಯೂರಿ ನಿಂತಿದ್ದಾರೆ. ಇಂತಹ ಮಹಾನುಭಾವರ ಸವಿ ನೆನಪಿಗಾಗಿ ಪುತ್ಥಳಿ ಅನಾವರಣಗೊಂಡಿರುವದು ಮೂಡಲಗಿಯಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಠಿಸಿದೆ. ಇಂತಹ ಕಾರ್ಯ ನೆರವೇರುವಲ್ಲಿ ಕಾರಣಿಕರ್ತರಾದ ಶ್ರೀಪಾದಬೋಧ ಸ್ವಾಮಿಜಿ ಮತ್ತವರ ಕುಟುಂಬ, ಪಟ್ಟಣದ ಸಕಲ ಭಕ್ತ ಸಮೂಹ ಹಾಗೂ ಕಲ್ಮೇಶ್ವರಬೋಧ ಸಮಿತಿಯ ಸದಸ್ಯರನ್ನು ಅಭಿನಂದಿಸಿದರು.
ಅಧ್ಯಕ್ಷತೆಯನ್ನು ಸಿದ್ಧ ಸಂಸ್ಥಾನ ಮಠದ ಶ್ರೀಪಾದ ಬೋಧ ಮಹಾಸ್ವಾಮಿಗಳು ವಹಿಸಿದ್ದರು.

ದಿವ್ಯ ಸಾನಿಧ್ಯವನ್ನು ಭಾಗೋಜಿಕೊಪ್ಪದ ಶಿವಲಿಂಗ ಮುರುಘೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಸುಣಧೋಳಿಯ ಶಿವಾನಂದ ಸ್ವಾಮಿಗಳು, ಬೆಂಡವಾಡದ ಗುರುಸಿದ್ಧ ಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ಶ್ರೀಧರ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಮಠದ ಪರಂಪರೆಯನ್ನು ತಿಳಿಸಿದರು.
ಪಿ.ಬಿ ಸ್ವಾಮಿ ಅವರು ಮಾತನಾಡಿ, ಕಲ್ಮೇಶ್ವರ ಅಜ್ಜನವರ ಪವಾಡಗಳನ್ನು ವಿವರಿಸಿದರು.
ಇದಕ್ಕೂ ಮೊದಲು ಸಕಲ ಭಕ್ತಾಧಿಗಳ ಹರ್ಷೋದ್ಘಾರ ಮಧ್ಯೆ ಶ್ರೀಪಾದ ಬೋಧ ಮಹಾಸ್ವಾಮಿಗಳು ಕಲ್ಮೇಶ್ವರ ವೃತ್ತದಲ್ಲಿ ಕಲ್ಮೇಶ್ವರ ಅಜ್ಜನವರ ಪುತ್ಥಳಿಯನ್ನು ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ರಾಧಿಕಾ ಸ್ವಾಮೀಜಿ, ಅಮೃತಬೋಧ ಸ್ವಾಮೀಜಿ, ಶ್ರೀಧರ ಸ್ವಾಮೀಜಿ, ಪುರಸಭೆ ಅಧ್ಯಕ್ಷೆ ಕಮಲವ್ವ ಹಳಬರ, ಉಪಾಧ್ಯಕ್ಷ ರವಿ ಸೋನವಾಲಕರ, ಕಲ್ಮೇಶ್ವರ ಬೋಧ ಸಮಿತಿಯ ಅಣ್ಣಪ್ಪ ಅಕ್ಕನ್ನವರ, ಹನಮಂತ ಸತರಡ್ಡಿ, ಸದಾಶಿವ ನಿಡಗುಂದಿ, ಮನೋಹರ ಸಣ್ಣಕ್ಕಿ, ಅಜ್ಜಪ್ಪ ಅಂಗಡಿ, ಕುಮಾರ ಗಿರಡ್ಡಿ, ಈರಣ್ಣ ಢವಳೇಶ್ವರ, ಪ್ರಕಾಶ ಈರಪ್ಪನವರ, ಶಿವಬಸು ಸುಣಧೋಳಿ, ಶ್ರೀಕಾಂತ ಪತ್ತಾರ, ವiಹದೇವ ಶೆಕ್ಕಿ, ಜಗದೀಶ ತೇಲಿ, ಸದಾಶಿವ ನಿಂಗನೂರ, ಚೇತನ ನಿಶಾನಿಮಠ, ಆನಂದ ಬಳಿಗಾರ ಉಪಸ್ಥಿತರಿದ್ದರು.
ಶ್ರೀಮಠದ ಅಭಿವೃದ್ಧಿಗಾಗಿ ಹಾಗೂ ಕಲ್ಮೇಶ್ವರ ಅಜ್ಜನವರ ಅಶ್ವಾರೂಢ ಪುತ್ಥಳಿ ನಿರ್ಮಾಣಕ್ಕೆ ಶ್ರಮಿಸಿದವರನ್ನು ಸ್ವಾಮೀಜಿಗಳು ಸತ್ಕರಿಸಿದರು.

Related posts: