RNI NO. KARKAN/2006/27779|Monday, December 23, 2024
You are here: Home » breaking news » ಮೂಡಲಗಿ:ಸಮುದಾಯ ಆರೋಗ್ಯ ಕೇಂದ್ರದಲ್ಲಿ 29 ಲಕ್ಷ ರೂ. ವೆಚ್ಚದಲ್ಲಿ ನಾಗರೀಕ ಸೌಲಭ್ಯಗಳ ಸಂಕೀರ್ಣ ಉದ್ಘಾಟನೆ

ಮೂಡಲಗಿ:ಸಮುದಾಯ ಆರೋಗ್ಯ ಕೇಂದ್ರದಲ್ಲಿ 29 ಲಕ್ಷ ರೂ. ವೆಚ್ಚದಲ್ಲಿ ನಾಗರೀಕ ಸೌಲಭ್ಯಗಳ ಸಂಕೀರ್ಣ ಉದ್ಘಾಟನೆ 

ಸಮುದಾಯ ಆರೋಗ್ಯ ಕೇಂದ್ರದಲ್ಲಿ 29 ಲಕ್ಷ ರೂ. ವೆಚ್ಚದಲ್ಲಿ ನಾಗರೀಕ ಸೌಲಭ್ಯಗಳ ಸಂಕೀರ್ಣ ಉದ್ಘಾಟನೆ

ಮೂಡಲಗಿ ಫೆ 22 : ಸಮುದಾಯ ಆರೋಗ್ಯ ಕೇಂದ್ರದಲ್ಲಿ 29 ಲಕ್ಷ ರೂ. ವೆಚ್ಚದಲ್ಲಿ ನಾಗರೀಕ ಸೌಲಭ್ಯಗಳ ಸಂಕೀರ್ಣವನ್ನು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಉದ್ಘಾಟಿಸಿದರು.
ಕ್ಯಾಂಟೀನ್, ಹಣ್ಣಿನ ಅಂಗಡಿ, ಹಾಲಿನ ಅಂಗಡಿ ಹಾಗೂ ಶೌಚಾಲಯ-ಸ್ನಾನ ಗೃಹವನ್ನು ಈ ಸಂಕೀರ್ಣ ಹೊಂದಿದ್ದು, ರೋಗಿಗಳಿಗೆ ಹಾಗೂ ರೋಗಿಗಳ ಉಪಚಾರಕ್ಕೆ ಬರುವವರಿಗೆ ಅತೀ ಕಡಿಮೆ ದರದಲ್ಲಿ ತಿಂಡಿ-ತಿನಿಸುಗಳು ಕ್ಯಾಂಟೀನ್‍ನಲ್ಲಿ ಸಿಗಲಿವೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕರು ತಿಳಿಸಿದರು.
ಅರಭಾವಿ ಕ್ಷೇತ್ರದಲ್ಲಿ ಶಿಕ್ಷಣ, ನೀರಾವರಿ ನಂತರ ಆರೋಗ್ಯ ಕ್ಷೇತ್ರಕ್ಕೆ ಪ್ರಾಶಸ್ತ್ಯ ನೀಡಲಾಗುತ್ತಿದೆ. ರೋಗಿಗಳ ಹಿತದೃಷ್ಟಿಯಿಂದ ಕರ್ತವ್ಯ ನಿರ್ವಹಿಸಲು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಎಲ್ಲಿ ವೈದ್ಯಾಧಿಕಾರಿಗಳು ಇರುವುದಿಲ್ಲವೋ ಅಲ್ಲಿ ನಿಯೋಜನೆ ಮೇರೆಗೆ ವೈದ್ಯರನ್ನು ಹಾಕಲಾಗುತ್ತಿದೆ. ಬಡವರಿಗೆ ಸರ್ಕಾರಿ ಆಸ್ಪತ್ರೆಗಳು ವರದಾನವಾಗಿದ್ದು, ಖಾಸಗಿ ದವಾಖಾನೆಗಳ ಮದ್ಯ ಸರ್ಕಾರಿ ಆಸ್ಪತ್ರೆಗಳು ರೋಗಿಗಳ ಉಪಚಾರಕ್ಕೆ ವೈದ್ಯರುಗಳು ಸ್ಪಂದಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿಯೂ ಸರ್ಕಾರಿ ಆಸ್ಪತ್ರೆಗಳ ಸುಧಾರಣೆಗೆ ಸರ್ಕಾರದ ಯೋಜನೆಗಳನ್ನು ತರುವುದಾಗಿ ಹೇಳಿದರು.
ಸಾನಿಧ್ಯವನ್ನು ಸ್ಥಳೀಯ ಶ್ರೀಪಾದಬೋಧ ಮಹಾಸ್ವಾಮಿಗಳು ವಹಿಸಿದ್ದರು.
ಪುರಸಭೆ ಅಧ್ಯಕ್ಷೆ ಕಮಲವ್ವ ಹಳಬರ, ಉಪಾಧ್ಯಕ್ಷ ರವಿ ಸೋನವಾಲ್ಕರ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಜಿ. ಢವಳೇಶ್ವರ, ಪುರಸಭೆ ಮಾಜಿ ಅಧ್ಯಕ್ಷರಾದ ವೀರಣ್ಣಾ ಹೊಸೂರ, ರಾಮಣ್ಣಾ ಹಂದಿಗುಂದ, ರವಿ ಸಣ್ಣಕ್ಕಿ, ಮುಖಂಡ ನಿಂಗಪ್ಪ ಫಿರೋಜಿ, ಸಂತೋಷ ಸೋನವಾಲ್ಕರ, ಜಯಾನಂದ ಪಾಟೀಲ, ಎಂ.ಎಚ್. ಸೋನವಾಲ್ಕರ, ರವಿ ಸೋನವಾಲ್ಕರ, ರಮೇಶ ಸಣ್ಣಕ್ಕಿ, ಶರೀಫ ಪಟೇಲ್, ಅಪರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವ್ಹಿ. ಮುನ್ಯಾಳ, ಗೋಕಾಕ ತಾಲೂಕಾ ಆರೋಗ್ಯಾಧಿಕಾರಿ ಡಾ.ಆರ್.ಎಸ್. ಬೆಣಚಿನಮರಡಿ, ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಭಾರತಿ ಕೋಣಿ, ಪುರಸಭೆ ಸದಸ್ಯರು, ಧುರೀಣರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts: